Homeಅಂತರಾಷ್ಟ್ರೀಯಇಸ್ರೇಲ್‌ಗೆ ಅಮೆರಿಕದ ನೆರವು ಸ್ಥಗಿತಗೊಳಿಸಿ: ಶ್ವೇತಭವನದ ಹೊರಗೆ ಪ್ಯಾಲೆಸ್ತೀನ್‌ ಪರ ಬೃಹತ್‌ ಪ್ರತಿಭಟನೆ

ಇಸ್ರೇಲ್‌ಗೆ ಅಮೆರಿಕದ ನೆರವು ಸ್ಥಗಿತಗೊಳಿಸಿ: ಶ್ವೇತಭವನದ ಹೊರಗೆ ಪ್ಯಾಲೆಸ್ತೀನ್‌ ಪರ ಬೃಹತ್‌ ಪ್ರತಿಭಟನೆ

- Advertisement -
- Advertisement -

ಗಾಝಾದಲ್ಲಿ ಇಸ್ರೇಲ್‌ ಹತ್ಯಾಕಾಂಡವನ್ನು ಖಂಡಿಸಿ ಅಮೆರಿಕದ ಶ್ವೇತಭವನದ ಹೊರಗೆ ಫೆಲೆಸ್ತೀನ್ ಪರ ಬೃಹತ್‌ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ಇಸ್ರೇಲ್‌ಗೆ ನೆರವು ಸ್ಥಗಿತಗೊಳಿಸುವಂತೆ ಅಮೆರಿಕಗೆ ಆಗ್ರಹಿಸಿದ್ದಾರೆ.

ಶ್ವೇತಭವನದ ಹೊರಗೆ 30,000ಕ್ಕೂ ಅಧಿಕ ಪ್ರತಿಭಟನಾಕಾರರು ಜಮಾಯಿಸಿ  ಇಸ್ರೇಲ್-ಗಾಝಾ ನಡುವಿನ ಯುದ್ಧವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದು, ಇಸ್ರೇಲ್‌ಗೆ ಜೋ ಬಿಡನ್ ನೇತೃತ್ವದ ಆಡಳಿತದ ಬೆಂಬಲವನ್ನು ವಿರೋಧಿಸಿದ್ದಾರೆ.

ಪ್ರತಿಭಟನೆಯ ಹಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಪ್ರತಿಭಟನಾಕಾರರು ಕೆಂಪು ಬಟ್ಟೆಗಳನ್ನು ಧರಿಸಿ, ಗಾಝಾ ಮೇಲಿನ ಆಕ್ರಮಣವನ್ನು ನಿಲ್ಲಿಸಿ, ಫ್ರೀ ಪ್ಯಾಲೆಸ್ತೀನ್‌, ಇಸ್ರೇಲ್‌ಗೆ ಯುಎಸ್ ಮಿಲಿಟರಿ ಧನಸಹಾಯವನ್ನು ಕೊನೆಗೊಳಿಸಿ ಎಂದು ಬರೆದಿರುವ ಸಂದೇಶ ಫಲಕಗಳನ್ನು ಹಿಡಿದಿದ್ದರು.

ಕೆಲವು ಪ್ರತಿಭಟನಾಕಾರರು ಶ್ವೇತಭವನದ ಸುತ್ತಲೂ ಸಾಲಾಗಿ ನಿಂತುಕೊಂಡು ಎರಡು ಮೈಲಿ ಉದ್ದದ ಕೆಂಪು ಬಣ್ಣದ ಬ್ಯಾನರ್‌ ಹಿಡಿದುಕೊಂಡಿದ್ದಾರೆ. ಇದು ಇಸ್ರೇಲ್‌ ರಫಾ ಮೇಲೆ ಆಕ್ರಮಣ ನಡೆಸುವ ಮೂಲಕ ‘ಕೆಂಪು ಗೆರೆ’ಯನ್ನು ದಾಟಿದೆ ಎಂಬುವುದನ್ನು ಬಿಂಬಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿನ ಕೆಲವು ವೀಡಿಯೊಗಳು ಕೆಲವು ಪ್ರತಿಭಟನಾಕಾರರು  ಶ್ವೇತಭವನದ ಗೇಟ್‌ಗಳ ಹೊರಗೆ ಹೊಗೆಯ ಜ್ವಾಲೆಗಳನ್ನು ಬಿಡುವುದನ್ನು ತೋರಿಸಿದೆ.

ಇದುವರೆಗೆ ಯಾವುದೇ ಪ್ರತಿಭಟನಾಕಾರರನ್ನು ಬಂಧಿಸಿಲ್ಲ. ಶ್ವೇತಭವನಕ್ಕೆ ನೇರವಾಗಿ ಹೋಗುವ ಮಾರ್ಗದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯು ಮುಖ್ಯವಾಗಿ ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ ಎಂದು ವಾಷಿಂಗ್ಟನ್ ಡಿಸಿ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ತಿಳಿಸಿದೆ. ಪ್ರತಿಭಟನೆಯ ವೇಳೆ ಜೋ ಬಿಡೆನ್ ಮತ್ತು ಅವರ ಪತ್ನಿ ಶ್ವೇತ ಭವನದಲ್ಲಿರಲಿಲ್ಲ. ಅವರು ಪ್ರಾನ್ಸ್‌ ಪ್ರವಾಸದಲ್ಲಿದ್ದರು.

ಅಕ್ಟೋಬರ್‌ನಲ್ಲಿ ಇಸ್ರೇಲ್ ಗಾಝಾದ ಮೇಲೆ ವಾಯು ಮತ್ತು ಭೂ ಮಾರ್ಗದಲ್ಲಿ ದಾಳಿಯನ್ನು ಪ್ರಾರಂಭಿಸಿದ ಬಳಿಕೆ ಗಾಝಾದಲ್ಲಿ 15,000ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಕನಿಷ್ಠ 36,700 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಸ್ರೇಲ್ ಗಾಝಾದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ರಫಾವನ್ನು ಗಾಝಾದಲ್ಲಿನ ಪ್ಯಾಲೆಸ್ತೀನ್‌ ನಾಗರಿಕರ ಕೊನೆಯ ಆಶ್ರಯವೆಂದು ಪರಿಗಣಿಸಲಾಗಿತ್ತು. ಆದರೆ ರಾಫಾದಲ್ಲಿನ ಶಿಬಿರಗಳ ಮೇಲೆ ಕೂಡ ಇಸ್ರೇಲ್‌ ದಾಳಿ ನಡೆಸಿ ನಾಗರಿಕರ ಹತ್ಯಾಕಾಂಡವನ್ನು ನಡೆಸಿದೆ.

ಇದನ್ನು ಓದಿ: ಸಂಸದ ಅನ್ವರುಲ್ ಅಝೀಂ ಹತ್ಯೆ ಪ್ರಕರಣ: ಕಾಲುವೆಯೊಂದರ ಬಳಿ ಮೂಳೆಗಳನ್ನು ಪತ್ತೆ ಹಚ್ಚಿದ ತನಿಖಾಧಿಕಾರಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...