ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಟೀಕಿಸುವ ಭಿತ್ತಿಪತ್ರಗಳನ್ನು ಹಾಕಿದ್ದಕ್ಕಾಗಿ ದೆಹಲಿ ಪೊಲೀಸರು 25 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ನನ್ನನ್ನೂ ಬಂಧಿಸಿ” ಎಂದು ಸವಾಲು ಹಾಕಿದ್ದಾರೆ.
ಕಪ್ಪು ಪೋಸ್ಟರ್‌ಗಳ ಮೇಲೆ ಬಿಳಿ ಬಣ್ಣದಲ್ಲಿ “ಮೋದಿ ಜಿ, ನಮ್ಮ ಮಕ್ಕಳಿಗೆ ಲಸಿಕೆ ಇಲ್ಲ, ವಿದೇಶಗಳಿಗೆ ಲಸಿಕೆಯನ್ನು ಏಕೆ ಕಳಿಸಿದಿರಿ?” ಎಂದು ಪ್ರಶ್ನಿಸಿ ದೆಹಲಿಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.
ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ದೆಹಲಿ ಪೊಲೀಸರು ಬಂಧಿಸಿದವರಲ್ಲಿ 19 ವರ್ಷದ ಶಾಲೆ ಬಿಟ್ಟ ಯುವಕ, 30 ವರ್ಷದ ಆಟೋ ಚಾಲಕ, 61 ವರ್ಷದ ದಿನಗೂಲಿ ನೌಕರ ಕೂಡ ಇದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹಲವರು ದಿನಗೂಲಿ ಕೆಲಸ ಮಾಡುವವರು. ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಕಷ್ಟದಲ್ಲಿದ್ದಾಗ ಈ ಪೋಸ್ಟರ್ ಮತ್ತು ಬ್ಯಾನರ್ ಹಾಕುವ ಕೆಲಸ ಮಾಡಿದ್ದಾರೆ. ಅದರಲ್ಲಿ ಏನು ಬರೆದಿದೆ ಎಂಬುದು ಸಹ ಅವರಿಗೆ ತಿಳಿದಿಲ್ಲ ಎನ್ನಲಾಗಿದೆ.
ಬ್ಯಾನರ್ ಮತ್ತು ಪೋಸ್ಟರ್ ಪ್ರಿಂಟ್ ಮಾಡಿಸಿದವನು, ಆಟೋದಲ್ಲಿ ಸಾಗಿಸಿದವನು ಮತ್ತು ಅದನ್ನು ಅಂಟಿಸಿದವರನ್ನು ಬಂಧಿಸಲಾಗಿದೆ. ಅವರೆಲ್ಲರೂ ತಮ್ಮ ಹೊಟ್ಟೆಪಾಡಿಗಾಗಿ ಆ ಕೆಲಸ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
Arrest me too.
मुझे भी गिरफ़्तार करो। pic.twitter.com/eZWp2NYysZ
— Rahul Gandhi (@RahulGandhi) May 16, 2021
ಭಿತ್ತಿಪತ್ರ ಅಂಟಿಸಿದ್ದಕ್ಕಾಗಿ ಸಾರ್ವಜನಿಕರನ್ನು ಬಂಧಿಸಿರುವ ಸರ್ಕಾರದ ವಿರುದ್ದ ಕಿಡಿಕಾರಿರುವ ರಾಹುಲ್‌ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು “ನನ್ನನ್ನೂ ಬಂಧಿಸಿ” ಎಂದು ಟ್ವೀಟ್ ಮಾಡಿದ್ದಾರೆ.
अगर अपनी छवि चमकाने के लिए 6 करोड़ से ज्यादा वैक्सीन मोदी जी ने विदेशों को 'Export' नही की होती,
तो आज न जाने कितने हिंदुस्तानी जिंदा होते, कितने परिवार उजड़ने से बच जाते,
अगर ये सवाल पूछना अपराध है, तो युवा कांग्रेस का एक-एक कार्यकर्ता गिरफ्तारी देने तैयार है..
Arrest me!! pic.twitter.com/juQNXXTMjF
— Srinivas B V (@srinivasiyc) May 16, 2021
ಅಗತ್ಯವಿರುವವರಿಗೆ ಸಹಾಯ ಕೆಲಸಗಳಿಂದಾಗಿ ದೇಶದ ಗಮನ ಸೆಳೆದಿರುವ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಸಹ ಅದೇ ಪೋಸ್ಟರ್ ಹಿಡಿದು ಪ್ರತಿಭಟನೆ ದಾಖಲಿಸಿದ್ದಾರೆ. “ಮೋದಿಯವರು ತಮ್ಮ ಇಮೇಜ್ ಬಿಲ್ಡ್ ಮಾಡಲು 6 ಕೋಟಿಗಿಂತ ಹೆಚ್ಚು ಲಸಿಕೆಗಳನ್ನು ‘ರಫ್ತು’ ಮಾಡದಿದ್ದರೆ, ಇಂದು ಎಷ್ಟೋ ಭಾರತೀಯರು ಉಳಿಯುತ್ತಿದ್ದರು.. ಎಷ್ಟೊ ಕುಟುಂಬಗಳು ರಕ್ಷಿಸಲ್ಪಡುತ್ತಿದ್ದರು. ಈ ಪ್ರಶ್ನೆಗಳನ್ನು ಕೇಳುವುದು ಅಪರಾಧವಾದರೆ, ಯೂತ್ ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರು ಬಂಧನಕ್ಕೆ ಸಿದ್ದರಾಗಿದ್ದಾರೆ. ನನ್ನನ್ನೂ ಬಂಧಿಸಿ” ಎಂದು ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? ಎಂದು ಪ್ರಶ್ನಿಸಿ ಪೋಸ್ಟರ್, 17 FIR, 15 ಮಂದಿ…


