Homeಕರ್ನಾಟಕರಾಜ್ಯದಲ್ಲೂ ಕಾಣಿಸಲು ಶುರುವಾದ ’ಲಸಿಕೆ ಸಂಗ್ರಹವಿಲ್ಲ’ ಬೋರ್ಡ್‌ಗಳು!

ರಾಜ್ಯದಲ್ಲೂ ಕಾಣಿಸಲು ಶುರುವಾದ ’ಲಸಿಕೆ ಸಂಗ್ರಹವಿಲ್ಲ’ ಬೋರ್ಡ್‌ಗಳು!

- Advertisement -
- Advertisement -

ಕೊರೊನಾ ಎರಡನೇ ಅಲೆಯಲ್ಲಿ ದೇಶವೇ ಲಸಿಕೆಗಾಗಿ ಆಸ್ಪತ್ರೆಗಳು, ಕೊರೊನಾ ಲಸಿಕಾ ಕೇಂದ್ರಗಳ ಮುಂದೆ ಸಾಲು ನಿಲ್ಲುತ್ತಿದ್ದರೂ ಒಕ್ಕೂಟ ಸರ್ಕಾರ ದೇಶದಲ್ಲಿ ಕೊರೊನಾ ಲಸಿಕೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಹೇಳುತ್ತಲೇ ಇದೆ. ಕೇಂದ್ರಗಳ ಮುಂದೆ ವ್ಯಾಕ್ಸಿನ್ ನೋ ಸ್ಟಾಕ್ ಬೋರ್ಡ್‌ಗಳು ಕಾಣಿಸುತ್ತಿವೆ. ಇದು ಕರ್ನಾಟಕದಲ್ಲೂ ಆರಂಭವಾಗಿದೆ.

ರಾಜ್ಯದಲ್ಲಿ ಲಸಿಕೆ ಇಲ್ಲ ಎಂಬ ಬೋರ್ಡ್‌ಗಳು ಕಾಣಿಸಲು ಆರಂಭವಾಗಿವೆ. 45 ವರ್ಷಕ್ಕೆ ಮೇಲ್ಪಟ್ಟವರಿಗೆ ಇನ್ನೂ ಎರಡನೇ ಡೋಸ್ ಕೂಡ ನೀಡಲು ಸಾಧ್ಯವಾಗಿಲ್ಲ. 18 ವರ್ಷಕ್ಕೆ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಲಸಿಕಾ ಅಭಿಯಾನ ಆರಂಭವಾಗಿದ್ದರೂ ಇನ್ನೂ ದೊರಕುತ್ತಿಲ್ಲ.

2 ನೇ ಡೋಸ್ ಕೋವಾಕ್ಸಿನ್ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಬೆಂಗಳೂರಿನ ಸ್ಥಳೀಯರು ಆರೋಪಿಸುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ ಮುಂದೆ ಲಸಿಕೆ ಸ್ಟಾಕ್ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ.

ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? ಎಂದು ಪ್ರಶ್ನಿಸಿ ಪೋಸ್ಟರ್‌, 17 FIR, 15 ಮಂದಿ ಬಂಧನ!

“ನಾನು, ನನ್ನ ತಾಯಿಯ ಕೊರೊನಾ 2 ನೇ ಡೋಸ್ ಪಡೆಯಲು ಬಂದಿದ್ದೇವೆ, ನಾನು ನಿನ್ನೆ ಕೂಡ ಬಂದಿದ್ದೇ, ಕೊವಾಕ್ಸಿನ್ ಲಭ್ಯವಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದರು. ಇಂದು ಕೂಡ ಲಸಿಕೆ ಇಲ್ಲ ಎಂದು ಹೇಳುತ್ತಿದ್ದಾರೆ” ಎಂದು ಲಸಿಕೆ ತೆಗೆದುಕೊಳ್ಳಲು ಬಂದಿದ್ದವರು ಹೇಳಿದ್ದಾರೆ.

“ಲಸಿಕಾ ಕೇಂದ್ರಗಳಲ್ಲಿ ಕೊವಾಕ್ಸಿನ್ ಸ್ಟಾಕ್ ಇಲ್ಲ. ವೆಬ್‌ಸೈಟ್‌ನಲ್ಲಿ ಸುಮಾರು 150 ಲಸಿಕೆಗಳು ಇದೆ ಎಂದು ತೋರಿಸುತ್ತದೆ. ಆದರೆ ಸರಿಯಾದ ಮಾಹಿತಿ ಇಲ್ಲದೇ ಜನ ಪರದಾಡುವಂತಾಗಿದೆ. ವೆಬ್‌ಸೈಟ್‌ನಲ್ಲಿ ಆದರು ಸರಿಯಾದ ಮಾಹಿತಿ ನೀಡಿದರೆ ಕನಿಷ್ಠ ಎಲ್ಲರಿಗೂ ಅದು ತಿಳಿಯುತ್ತದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ಒಂದು ಕೋಟಿಯಂತೆ ಒಟ್ಟು 100 ಕೋಟಿ ರೂಪಾಯಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.


ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿಗೆ ಕಾಂಗ್ರೆಸ್‌ನಿಂದ 100 ಕೋಟಿ ನೆರವು- ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...