Homeಮುಖಪುಟ‘ಮೋದಿ ಸರ್ಕಾರಕ್ಕೆ ಎಂಎಸ್‌ಪಿ ಫುಲ್ ಫಾರ್ಮ್ ಗೊತ್ತಿಲ್ಲ!’

‘ಮೋದಿ ಸರ್ಕಾರಕ್ಕೆ ಎಂಎಸ್‌ಪಿ ಫುಲ್ ಫಾರ್ಮ್ ಗೊತ್ತಿಲ್ಲ!’

- Advertisement -

“ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಎಂಎಸ್‌ಪಿಯ ಫುಲ್ ಫಾರ್ಮ್ ಗೊತ್ತಿಲ್ಲ” ಎಂದು ಕಾಂಗ್ರೆಸ್ ವಕ್ತಾರ ಗುರುದೀಪ್‌ ಸಿಂಗ್ ಸಪ್ಪಲ್ ಟ್ವೀಟ್ ಮಾಡಿದ್ದಾರೆ.

‘ವಿವಾದಿತ ಕೃಷಿಕಾಯ್ದೆಗಳ ರದ್ದು ಮಸೂದೆ’ಯ ಪ್ರತಿ ಇದೆಂದು ಟ್ವೀಟ್ ಮಾಡಿರುವ ಅವರು, “ಎಂಎಸ್‌ಪಿ- ಮಿನಿಮನ್‌ ಸಪೋರ್ಟ್ ಪ್ರೈಸ್‌ (ಕನಿಷ್ಠ ಬೆಂಬಲ ಬೆಲೆ) ಎಂಬುದನ್ನು ಮಿನಿಮನ್‌ ಸೇಲ್‌ ಪ್ರೈಸ್‌ (ಕನಿಷ್ಠ ಮಾರಾಟ ಬೆಲೆ) ಎಂದು ಕರೆಯಲಾಗಿದೆ” ಎಂದು ಆರೋಪಿಸಿದ್ದಾರೆ.

“ಇಷ್ಟು ಮಹತ್ವದ ಮಸೂದೆಯ ವಿಷಯದಲ್ಲೂ ಎಂತಹ ಅಸಮರ್ಥತೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

“ಸರ್ಕಾರ ರೈತರಿಗೆ ಹಲವು ಸವಲತ್ತುಗಳನ್ನು ನೀಡಿದೆ ಎಂದು ಸರ್ಕಾರ ನೀಡಿರುವ ಸಾಲು ಸಾಲು ಪಟ್ಟಿಯಲ್ಲಿ ಎಂಎಸ್‌ಪಿಯನ್ನೂ ಸೇರಿಸಲಾಗಿದೆ. ಆದರೆ ಎಂಎಸ್‌ಪಿ- ಎಂದರೆ ಮಿನಿಮಮ್ ಸೇಲ್ಸ್‌ ಪ್ರೈಸ್ ಎಂದು ತಿಳಿಸಲಾಗಿದೆ”

“2014ರ ನಂತರ ಕೃಷಿ ಇಲಾಖೆಗೆ ಮೀಸಲಿಡಲಾಗುತ್ತಿರುವ ಬಜೆಟ್ ಐದು ಪಟ್ಟು ಹೆಚ್ಚಾಗಿದೆ. ಈ ವರ್ಷ 123 ಲಕ್ಷ ಕೋಟಿ ರೂ.ಗಳನ್ನು ವಿವಿಧ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗಿದೆ…”

“ಮಣ್ಣಿನ ಫಲವತ್ತತೆ ಕಾರ್ಡ್ ಯೋಜನೆ ಅಡಿಯಲ್ಲಿ ಸುಮಾರು 23 ಕೋಟಿ ರೈತರಿಗೆ ಕಾರ್ಡ್ ವಿತರಿಸಲಾಗಿದೆ. 106 ಲಕ್ಷ ಕೋಟಿ ರೂ.ಗಳನ್ನು 11 ಕೋಟಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ….” ಹೀಗೆ ರೈತರಿಗೆ ಹಲವು ರೀತಿಯ ಸಹಾಯ ಮಾಡಿರುವುದಾಗಿ ಸರ್ಕಾರ ಬಿಂಬಿಸಿಕೊಂಡಿದೆ.

ಎಂಎಸ್‌ಪಿ ಕುರಿತು ಹೇಳುತ್ತಾ, “ಮೊದಲ ಬಾರಿಗೆ ಕನಿಷ್ಠ ಮಾರಾಟ ಬೆಲೆಯನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ನಿಗದಿಪಡಿಸಲಾಗಿದೆ” ಎಂದು ತಿಳಿಸಿಲಾಗಿದೆ. ಕನಿಷ್ಠ ಬೆಂಬಲ ಬೆಲೆ ಎಂಬುದನ್ನು, ಕನಿಷ್ಠ ಮಾರಾಟ ಬೆಲೆ ಎಂದು ಬರೆದಿರುವುದು ಸರ್ಕಾರದ ನಿರ್ಲಕ್ಷತನವನ್ನು ಎತ್ತಿಹಿಡಿದಿದೆ ಎಂದು ಟ್ವಿಟರ್‌ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುರುದೀಪ್ ಸಿಂಗ್ ಸಪ್ಪಾಲ್‌ ಮತ್ತೊಂದು ಟ್ವೀಟ್‌ನಲ್ಲಿ ಬಜೆಟ್‌ ಕುರಿತಂತೆ ಸರ್ಕಾರ ಸುಳ್ಳು ಹೇಳಿದೆ ಎಂದು ಆರೋಪಿಸಿದ್ದಾರೆ.

“123 ಲಕ್ಷ ಕೋಟಿ ರೂ.ಗಳನ್ನು ಕೃಷಿ ಸಂಬಂಧಿತ ಯೋಜನೆಗಳಿಗೆ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಸತ್ಯವೇನೆಂದರೆ ಈ ವರ್ಷದ ಭಾರತದ ಬಜೆಟ್ ₹34.8 ಸಾವಿರ ಕೋಟಿ ಮಾತ್ರ. 106 ಲಕ್ಷ ಕೋಟಿ ರೂ.ಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎನ್ನಲಾಗಿದೆ. ವಾಸ್ತವದಲ್ಲಿ 1.57 ಕೋಟಿ ರೂ.ಗಳನ್ನು ಮಾತ್ರ ಈವರೆಗೆ ಪಿಎಂ-ಕಿಸಾನ್‌ ಯೋಜನೆಯಡಿ ವರ್ಗಾವಣೆ ಮಾಡಲಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿರಿ: ಎಸ್‌.ಎಲ್‌.ಭೈರಪ್ಪ ಯಾವುದೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು: ಎಚ್.ಸಿ.ಮಹದೇವಪ್ಪ


ಕೃಷಿ ಕಾಯ್ದೆಗಳ ವಾಪಸ್‌ ಮಸೂದೆ ಅಂಗೀಕಾರ

ಸೋಮವಾರ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಅಧಿವೇಶನಗಳಲ್ಲಿ ಕೃಷಿ ಕಾನೂನುಗಳ ರದ್ಧತಿ ಮಸೂದೆ -2021 ಯನ್ನು ಅಂಗೀಕರಿಸಲಾಗಿದೆ. ದೆಹಲಿ ಗಡಿಗಳಲ್ಲಿ ರೈತರ ಸಂಭ್ರಮಾಚರಣೆ ಶುರುವಾಗಿದೆ. ರೈತರು ಪರಸ್ಪರ ಹೂವಿನ ಮಳೆಗೆರೆಯುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಸಿಂಘು ಗಡಿಯಲ್ಲಿ ಯುವ ರೈತರು ಟ್ರಾಕ್ಟರ್ ಪರೇಡ್ ನಡೆಸುವ ಮೂಲಕ, ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಇಂದು ಕೂಡ ನೂರಾರು ರೈತರು ಸಿಂಘು ಗಡಿಗೆ ಬಂದು ಹೋರಾಟದ ಸಾಗರ ಸೇರಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ಮತ್ತು ಭದ್ರವಾಗಿ ಅಲ್ಲೆ ನೆಲೆಯೂರಿ ಚಳವಳಿಗೆ ನಾನಾ ರೀತಿಯಲ್ಲಿ ಕೊಡುಗೆ ನೀಡಿರುವ ಹಲವಾರು ಹೋರಾಟಗಾರರಿಗೆ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ಸಹ ನಡೆಯುತ್ತಿದೆ. ಒಂದು ವರ್ಷದಿಂದ ಎಲ್ಲಿಗೂ ಹೋಗದೆ ನಿರಂತರವಾಗಿ ಚಳವಳಿ ಕಣದಲ್ಲಿದ್ದವರಿಗೆ ಸಿಹಿ ತಿನಿಸಿ, ಅವರಿಗೆ ಪುಷ್ಪಾರ್ಚನೆ ಮಾಡಿ ಅಭಿನಂದಿಸಲಾಗಿದೆ.

ಕಳೆದ ಒಂದು ವರ್ಷದಿಂದ ಪ್ರತಿಭಟನಾನಿರತ ರೈತರ ಚಪ್ಪಲಿ ಹೊಲಿದುಕೊಟ್ಟು ಸೇವೆ ನೀಡಿದ ಯುವಕನಿಗೆ ರೈತರೆಲ್ಲರೂ ಹೂವಿನ ಮಳೆಗೈದು ಅಭಿನಂದನೆ ಸಲ್ಲಿಸಿದ್ದಾರೆ. ಸಿಂಘು ಗಡಿಯಲ್ಲಿ ರೈತ ಮಹಿಳೆಯರು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆಯ ಭಾಗವಾಗಿದ್ದಾರೆ. ನೂರಾರು ಮಹಿಳೆಯರು ಪರಸ್ಪರ ಹೂವಿನ ಮಳೆಗರೆದಿದ್ದಾರೆ. ಇನ್ನೊಂದೆಡೆ ಸಿಂಘು ಗಡಿಯಲ್ಲಿ ಪಂಜಾಬ್‌ನ 32 ರೈತ ಸಂಘದ ಮುಖಂಡರು ಸೇರಿ ಸಭೆ ನಡೆಸಿದ್ದಾರೆ.. ಚಳವಳಿಯ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕರಾದ ಡಾ.ದರ್ಶನ್ ಪಾಲ್ ಸಹ ಪಾಲ್ಗೊಂಡಿದ್ದರು.

ಟಿಕ್ರಿ ಗಡಿಯಲ್ಲಿ ಸಾವಿರಾರು ರೈತರು ಎಂಎಸ್‌ಪಿ ಖಾತ್ರಿ ಕಾನೂನಿಗಾಗಿ ಹೋರಾಟ ಮುಂದುವರೆಸಿದ್ದಾರೆ. ಸರ್ಕಾರದ ರದ್ದತಿ ಕ್ರಮದ ಬಗ್ಗೆ ಮಾತನಾಡಿದ ರಾಕೇಶ್ ಟಿಕಾಯತ್, ರೈತರ ಆಂದೋಲನ ಮುಂದುವರಿಯುತ್ತದೆ. “ಕೃಷಿ ಕಾನೂನು ರದ್ದತಿ ಮಸೂದೆಯು ಆಂದೋಲನದ ಸಮಯದಲ್ಲಿ ಮಡಿದ 750 ರೈತರಿಗೆ ಶ್ರದ್ಧಾಂಜಲಿಯಾಗಿದೆ. ನಮಗಿನ್ನು MSP (ಕನಿಷ್ಠ ಬೆಂಬಲ ಬೆಲೆ) ಖಾತ್ರಿಯ ಕಾನೂನು ಜಾರಿಯಾಗಿಲ್ಲ. ಎಂಎಸ್ಪಿ ಸೇರಿದಂತೆ ಇತರೆ ಸಮಸ್ಯೆಗಳು ಬಾಕಿ ಉಳಿದಿರುವುದರಿಂದ ಪ್ರತಿಭಟನೆ ಮುಂದುವರಿಯಲಿದೆ’’ ಎಂದು ಹೇಳಿದ್ದಾರೆ.


ಇದನ್ನೂ ಓದಿರಿ: ಸಂಸ್ಕೃತಿ, ಸಮಾಜದ ದ್ವಿಮುಖ ನೀತಿ ತೆರದಿಟ್ಟ ಅಕ್ಕಯ್ ಪದ್ಮಶಾಲಿ ಭಾಷಣ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial