Homeಕರ್ನಾಟಕಎಸ್‌.ಎಲ್‌.ಭೈರಪ್ಪ ಯಾವುದೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು: ಎಚ್.ಸಿ.ಮಹದೇವಪ್ಪ

ಎಸ್‌.ಎಲ್‌.ಭೈರಪ್ಪ ಯಾವುದೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು: ಎಚ್.ಸಿ.ಮಹದೇವಪ್ಪ

- Advertisement -
- Advertisement -

ಮೈಸೂರಿನಲ್ಲಿ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಮೈಸೂರು ಲಯನ್ಸ್‌ ಕ್ಲಬ್‌‌ ಆಫ್‌ ಸೌತ್ ಸಂಸ್ಥೆಯಿಂದ ಸೋಮವಾರ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿರುವ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರು, “ಭಿಕ್ಷುಕ ರಾಷ್ಟ್ರವಾಗಿದ್ದ ಭಾರತವೀಗ ವಿಶ್ವದ ನೇತಾರ ರಾಷ್ಟ್ರವಾಗಿದೆ” ಎಂದು ಹೇಳಿದ್ದಾರೆ.

“ಎಡಪಂಥೀಯ ಸಿದ್ಧಾಂತಕ್ಕೆ ಒಡೆಯೋದು ಗೊತ್ತಿತ್ತೇ ಹೊರತು ಕಟ್ಟೋದು ಗೊತ್ತೇ ಇರಲಿಲ್ಲ. ಇದು ಆರಂಭವಾಗಿದ್ದು ನೆಹರೂ ಕಾಲದಿಂದ. ರಷ್ಯನ್ ಮಾದರಿಯನ್ನು ಭಾರತಕ್ಕೆ ತರಲು ಈ ದೇಶವನ್ನು ಭಿಕ್ಷುಕ ದೇಶವನ್ನಾಗಿ ಮಾಡಿಬಿಟ್ಟರು. ಇದು ಎಲ್ಲಿಗೆ ಹೋಗಿ ಮುಟ್ಟಿತ್ತೆಂದರೆ ನಮ್ಮ ದೇಶದ ಚಿನ್ನವನ್ನು ಅಡವಿಟ್ಟು, ಬ್ರಿಟನ್‌ ಬ್ಯಾಂಕಿನಿಂದ ಸಾಲ ಕೇಳಬೇಕಾಗಿ ಬಂತು. ನಿಮ್ಮ ಚಿನ್ನವನ್ನು ನಮ್ಮ ದೇಶದಲ್ಲಿ ಅಡವಿಟ್ಟರೆ ಮಾತ್ರ ಸಾಲಕೊಡುತ್ತೇವೆ ಎಂದು ಬ್ರಿಟನ್ ಬ್ಯಾಂಕ್ ಹೇಳಿತ್ತು. ಭಾರತದ ಮೇಲೆ ಇತರೆ ದೇಶಗಳಿಗೆ ನಂಬಿಕೆ ಇರಲಿಲ್ಲ” ಎಂದು ಭೈರಪ್ಪ ತಿಳಿಸಿದ್ದಾರೆ.

“ನಮ್ಮ ಬಲಹೀನತೆ ವೈಚಾರಿಕತೆ ಮತ್ತು ಸಾಹಿತ್ಯಕ್ಕೂ ತಟ್ಟಿತು. ಕೀಳರಿಮೆಯನ್ನು ಬಿಂಬಿಸುವುದೇ ನಮ್ಮ ಶ್ರೇಷ್ಠತೆ ಆಯಿತು. ಇದನ್ನು ಮೆಟ್ಟಿ ನಿಲ್ಲಬೇಕಾದ ಕಾಲ ಇದೀಗ ಬಂದಿದೆ. ಇಂದು ಪರಿಸ್ಥಿತಿ ಬದಲಾಗಿವೆ. ವಿಶ್ವದ ಮುಂದೆ ಭಾರತ ಎದೆಯುಬ್ಬಿಸಿ ನಿಂತಿದೆ. ನಮ್ಮ ಆಹಾರ ಪದಾರ್ಥಗಳನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಭಾರತ ಇದೀಗ ಭಿಕ್ಷುಕ ರಾಷ್ಟ್ರವಲ್ಲ. ಇದು ಹೇಗೆ ಸಾಧ್ಯವಾಯಿತು? ಇದನ್ನು ಅರ್ಥಮಾಡಿಕೊಳ್ಳಲು ಇಷ್ಟು ವರ್ಷ ಬೇಕಾಯಿತು. ಇದಕ್ಕಾಗಿ ಸಮರ್ಥ ನಾಯಕತ್ವ ಬೇಕಾಯಿತು..” ಎಂದಿರುವ ಅವರು, ಎಂದಿನಂತೆ ನರೇಂದ್ರ ಮೋದಿಯವರ ನಾಯಕತ್ವವನ್ನು ಹೊಗಳಿದ್ದಾರೆ.

ಭೈರಪ್ಪ ಅವರು ಹೇಳಿರುವ ಮಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೈಸೂರು ಭಾಗದ ಜನಪರ ಪತ್ರಿಕೆ ‘ಆಂದೋಲನ’ ವರದಿಯನ್ನು ಉಲ್ಲೇಖಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಭೈರಪ್ಪ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.


ಇದನ್ನೂ ಓದಿರಿ: ’ಸಂಗೀತ ಕದನವನ್ನು ತಪ್ಪಿಸುತ್ತದೆ, ಸರಿಗಮಪಕ್ಕೆ ಬೇಗ ಬಂದು ಸೇರಿಕೊಳ್ಳುತ್ತೇನೆ’: ಡಾ. ಹಂಸಲೇಖ


“ತಮ್ಮ ಪಂಚೇಂದ್ರಿಯಗಳನ್ನು ಕಳೆದುಕೊಂಡು ಮಾತನಾಡುತ್ತಿರುವ ಭೈರಪ್ಪನವರು ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದು ಕರೆದಿರುವುದು ಬೇಸರದ ಸಂಗತಿ. ಸಾಹಿತಿ ಅಂದರೆ ತನ್ನ ಅಧ್ಯಯನ, ವಿಚಾರಧಾರೆಯ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕೆಂದು ಬಯಸುವುದು ಸಾಮಾನ್ಯ ನಿರೀಕ್ಷೆ. ಆದರೆ ಈ ಆಶಯಗಳಿಗೆ ತದ್ವಿರುದ್ಧವಾಗಿ ಮಾತನಾಡುತ್ತಿರುವ ಭೈರಪ್ಪನವರ ಮಾತುಗಳ ಬಗ್ಗೆ ನನಗಂತೂ ಯಾವುದೇ ಅಚ್ಚರಿಯಿಲ್ಲ. ಕಾರಣ ಅವರು ಬೆಳೆದು ಬಂದಿರುವ ಸಾಮಾಜಿಕ ಹಿನ್ನಲೆಯ ಮಹಿಮೆ ಅಂತದ್ದು” ಎಂದು ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಮುಂದುವರಿದು, “ಆದರೂ ತಾನು ಬದುಕಿದ್ದ ದೇಶದ ಇತಿಹಾಸವನ್ನೇ ಅರಿಯದ ಸಾಹಿತಿಯೊಬ್ಬರು ನೇರವಾಗಿ ತನ್ನ ದೇಶವನ್ನು ಭಿಕ್ಷುಕ ರಾಷ್ಟ್ರ ಎಂದು ಕರೆಯಬೇಕಾದರೆ ಆತ ಯಾವುದೋ ಗಂಭೀರ ಮಾನಸಿಕ ಖಾಯಿಲೆಯಿಂದ ಬಳಲುತ್ತಿರಬಹುದು ಎಂದೇ ನನಗೆ ಅನಿಸುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ದೇಶದ ಹಿಂದಿನ ಸಾಲದ ಪ್ರಮಾಣಕ್ಕೆ ಹೋಲಿಸಿದರೆ ಈಗ ಅದರ ಪ್ರಮಾಣ ಹೆಚ್ಚಾಗಿದೆ. ಈ ಸಂಗತಿಯನ್ನು ಅರಿಯದ ಭೈರಪ್ಪನವರು ಅನಗತ್ಯವಾಗಿ ನೆಹರೂ ಹೆಸರನ್ನು ಎಳೆದು ತಂದಿರುವುದರ ಹಿಂದೆ ಮನುವಾದಿ ಸರ್ಕಾರವನ್ನು ಬೆಂಬಲಿಸುವ ಅವರ ಬೌದ್ಧಿಕ ಕುತಂತ್ರ ಅಡಗಿದೆಯೇ ವಿನಃ ಸಾಮಾಜಿಕ ನ್ಯಾಯ ಸಾಧನೆಗೆ ಪೂರಕವಾದ ಯಾವ ಅಂಶವೂ ಇಲ್ಲಿ ಇಲ್ಲ” ಎಂದಿದ್ದಾರೆ.

“ದೇಶದ ಅಯೋಮಯ ಸ್ಥಿತಿಯ ಬಗ್ಗೆ ಮತ್ತು ಜನ ಸಾಮಾನ್ಯರ ಸಂಕಷ್ಟದ ಬದುಕಿನ ಬಗ್ಗೆ ಸತ್ಯ ಗೊತ್ತಿದ್ದರೂ ಸುಳ್ಳನ್ನೇ ಆಯ್ಕೆ ಮಾಡಿಕೊಳ್ಳುವ ಭೈರಪ್ಪನವರ ಮಾತನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು” ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿರಿ: ಕನಸಿನ ಭಾರತಕ್ಕೆ ಸಂವಿಧಾನವೇ ರೋಡ್‌ ಮ್ಯಾಪ್‌: ಗಾಯಕಿ ಎಂ.ಡಿ.ಪಲ್ಲವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...