Homeಮುಖಪುಟರೈಲು ಸುರಂಗ ನಿರ್ಮಿಸಲು ಚೀನಾ ಕಂಪೆನಿಗೆ ಗುತ್ತಿಗೆ ನೀಡಿದ ’ಆತ್ಮನಿರ್ಭರ್‌’ ಮೋದಿ ಸರ್ಕಾರ!

ರೈಲು ಸುರಂಗ ನಿರ್ಮಿಸಲು ಚೀನಾ ಕಂಪೆನಿಗೆ ಗುತ್ತಿಗೆ ನೀಡಿದ ’ಆತ್ಮನಿರ್ಭರ್‌’ ಮೋದಿ ಸರ್ಕಾರ!

- Advertisement -

ಕಳೆದ ವರ್ಷ ಗಾಲ್ವಾನ್ ಹಿಂಸಾಚಾರ ನಂತರ ಹಲವಾರು ಚೀನಿ ಮೊಬೈಲ್ ಅಪ್ಲಿಕೇಶನ್‌‌ಗಳನ್ನು ನಿಷೇಧ ಮಾಡಿದ್ದ ಮೋದಿ ಸರ್ಕಾರ, ಚೀನಾ ದೇಶಕ್ಕೆ ಸರಿಯಾದ ಪಾಠ ಕಲಿಸಿದ್ದೇವೆ ಎಂದು ಬೀಗಿದ್ದು ವ್ಯಾಪಕ ಅಪಹಾಸ್ಯಕ್ಕೆ ಗುರಿಯಾಗಿತ್ತು. ವೋಕಲ್ ಲೋಕಲ್, ಆತ್ಮನಿರ್ಭರ ಭಾರತ, ಮೇಕ್‌ ಇನ್‌ ಇಂಡಿಯಾ ಮೂಲಕ ಕೂಡಾ ಹಲವಾರು ಘೋಷಣೆಗಳನ್ನು ಮಾಡಿತ್ತು. ಆದರೆ ಇದೀಗ ದೆಹಲಿ- ಮೀರತ್‌ ರ್‍ಯಾಪಿಡ್‌ ರೈಲು ಯೋಜನೆಯಡಿ 5.6 ಕಿಲೋಮೀಟರ್‌ ಸುರಂಗಮಾರ್ಗ ಕಾಮಗಾರಿಯನ್ನು ನ್ಯಾಶನಲ್ ಕ್ಯಾಪಿಟಲ್ ರಿಜನಲ್ ಟ್ರಾನ್ಸ್‌‌ಪೋರ್ಟ್ ಕಾರ್ಪೊರೇಶನ್‌(NCRTC) ಚೀನಾ ಮೂಲದ ಕಂಪೆನಿಗೆ ನೀಡಿದೆ.

NCRTC ಯಲ್ಲಿ ಕೇಂದ್ರ ಸರ್ಕಾರಕ್ಕೆ 50% ಪಾಲಿದೆ. ಉಳಿದಂತೆ 50% ಪಾಲು 12.5% ದಂತೆ ದೆಹಲಿ, ರಾಜಸ್ಥಾನ, ಹರಿಯಾಣ, ಹಾಗೂ ಉತ್ತರ ಪ್ರದೇಶದ ಸರ್ಕಾರಗಳು ಹೊಂದಿದೆ. ಇದೀಗ NCRTC ಯು ನ್ಯೂ ಅಶೋಕ ನಗರದಿಂದ ಸಾಹಿಬಾಬಾದ್‌ವರೆಗಿನ 5.6 ಕಿಲೋ ಮೀಟರ್‌ ಸುರಂಗಮಾರ್ಗ ನಿಮಿಸುವ ಕಾಮಗಾರಿಯನ್ನು ಚೀನಾ ಮೂಲದ ಶಾಂಘೈ ಟನೆಲ್ ಇಂಜಿನಿಯರಿಂಗ್ ಕಂಪೆನಿ ಲಿಮಿಟೆಡ್‌‌ಗೆ ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು ಎದ್ದಿದ್ದು ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ಅಮೆರಿಕವನ್ನು ಹಿಂದಿಕ್ಕಲಿದೆ ಚೀನಾ ಆರ್ಥಿಕತೆ; ಯಾಕೆ ಗೊತ್ತೇ?

ಗಾರ್ಗೀ ಕಶ್ಯಪ್ ಅವರು, “ದೆಹಲಿ-ಮೀರತ್ ರೈಲು ಯೋಜನೆಯ 5.6 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಿಸುವ ಒಪ್ಪಂದವನ್ನು ಚೀನಾ ಸಂಸ್ಥೆ ಗೆದ್ದಿದೆ. ಇದು ಆತ್ಮನಿರ್ಭಾರ ಭಾರತ್. ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಿ” ಎಂದು ವ್ಯಂಗ್ಯವಾಡಿದ್ದಾರೆ.

ರಾಘುವೀರ್‌ ಅವರು, “ನೀವು ಬಾಯ್ಕಾಟ್‌ ಅಭಿಯಾನದೊಂದಿಗೆ ಕಾರ್ಯನಿರತವಾಗಿದ್ದಾಗ, ನರೇಂದ್ರ ಮೋದಿ ಸರ್ಕಾರ 30 ಸಾವಿರ ಕೋಟಿ ಮೌಲ್ಯದ ಯೋಜನೆಯನ್ನು ಚೀನಾಗೆ ಹಸ್ತಾಂತರಿಸಿದೆ. ಮೊದಲು ಗಾಲ್ವನ್ ಕಣಿವೆಯ ಭೂಮಿಯನ್ನು ಉಡುಗೊರೆಯಾಗಿ ನೀಡಿ, ಇದೀಗ ಸುರಂಗ ಮಾರ್ಗ ನಿರ್ಮಿಸಲು ಆಹ್ವಾನಿಸಿದ್ದಾರೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಗಾಲ್ವಾನ್ ಸಂಘರ್ಷ ಚೀನಾದ ಪೂರ್ವ ಯೋಜಿತ ಕೃತ್ಯ: ಅಮೆರಿಕಾ ವರದಿ

ವೆಂಕಟ್ ಬಂಡಾರಿ ಅವರು, “ರೈಲು ಗುತ್ತಿಗೆಯನ್ನು ಚೀನಾ ಸಂಸ್ಥೆಗೆ ನೀಡಿದ ನಂತರ, ಸೇಡು ತೀರಿಸಲು ಚೀನೀ ಆಟಿಕೆ ರೈಲನ್ನು ಸರ್ಕಾರ ನಿಷೇಧಿಸುತ್ತದೆ. ಮೂರ್ಖ ಭಕ್ತರು ಮೂರ್ಖ ಸರ್ಕಾರವನ್ನು ಬೆಂಬಲಿಸುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಎಂಬುದು ಸ್ಪಷ್ಟ: ಮೋಹನ್ ಭಾಗವತ್

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗಾಂಧಿ

‘ನಾನೇಕೆ ಗಾಂಧಿಯನ್ನು ಕೊಂದೆ’ ಸಿನಿಮಾ ಬಿಡುಗಡೆ ಬೇಡ: ಸೇವಾದಳ ಯಂಗ್ ಬ್ರಿಗೇಡ್ ಆಗ್ರಹ

0
ಮಹಾತ್ಮ ಗಾಂಧೀಜಿ ಅವರನ್ನು ಅವಹೇಳನ ಮಾಡುವ ʼನಾನೇಕೆ ಗಾಂಧಿಯನ್ನು ಕೊಂದೆʼ ಎಂಬ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ಆಗ್ರಹಿಸಿದೆ. ಈ ಕುರಿತು ಕರ್ನಾಟಕ ಚಲನಚಿತ್ರ...
Wordpress Social Share Plugin powered by Ultimatelysocial