Homeಮುಖಪುಟ‘ವಿದೇಶದಲ್ಲಿ ನಿಂತು ಭಾರತವನ್ನು ಮೋದಿ ಅವಮಾನಿಸಿದ್ದು’: ಹಳೆಯ ವಿಡಿಯೊಗಳ ಮೂಲಕ ಕಾಂಗ್ರೆಸ್ ತಿರುಗೇಟು

‘ವಿದೇಶದಲ್ಲಿ ನಿಂತು ಭಾರತವನ್ನು ಮೋದಿ ಅವಮಾನಿಸಿದ್ದು’: ಹಳೆಯ ವಿಡಿಯೊಗಳ ಮೂಲಕ ಕಾಂಗ್ರೆಸ್ ತಿರುಗೇಟು

ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋದಾಗ ಭಾರತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ

- Advertisement -
- Advertisement -

ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ರಾಹುಲ್‌ ಗಾಂಧಿಯವರು ಭಾರತವನ್ನು ವಿದೇಶಿ ನೆಲದಲ್ಲಿ ನಿಂತು ಅಗೌರವಿಸಿದ್ದಾರೆ ಎಂದು ಆರೋಪಿಸುತ್ತಿರುವ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಮೋದಿಯವರು ವಿವಿಧ ದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ತುಣುಕುಗಳನ್ನು ಕಾಂಗ್ರೆಸ್‌ ಹಂಚಿಕೊಂಡಿದ್ದು, ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರಿನಾಟೆ, “ಪ್ರಧಾನಿ ಮೋದಿ ಅವರು ವಿದೇಶದಲ್ಲಿ ನಿಂತು ಭಾರತವನ್ನು ಅವಮಾನಿಸಿದ ಸಂದರ್ಭಗಳಿವು” ಎಂದು ತಿಳಿಸಿದ್ದಾರೆ.

ಮೋದಿಯವರು ವಿದೇಶಿಯರನ್ನು ಉದ್ದೇಶಿಸಿ ಮಾತನಾಡಿರುವ ಒಂಬತ್ತು ಭಾಷಣಗಳ ತುಣುಕುಗಳನ್ನು ಈ ಸರಣಿ ಟ್ವೀಟ್ ಒಳಗೊಂಡಿದೆ. ಮೋದಿ ಅಧಿಕಾರಕ್ಕೆ ಬಂದ ನಂತರದ ಮೊದಲ ಕೆಲವು ವರ್ಷಗಳಲ್ಲಿ ಮಾಡಿದ ಹೆಚ್ಚಿನ ಭಾಷಣಗಳಲ್ಲಿ ಮನಮೋಹನ್ ಸಿಂಗ್ ಸರ್ಕಾರವನ್ನು ಉಲ್ಲೇಖಿಸುತ್ತಾ ಟೀಕೆಗಳನ್ನು ಮಾಡಿದ್ದರು.

ಚೀನಾ

2015ರಲ್ಲಿ ಮೋದಿ ಅವರು ಚೀನಾದ ಶಾಂಘೈನಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದರು. “ವಿದೇಶದಲ್ಲಿರುವ ಭಾರತೀಯರಿಗೆ ನಾನು ಭಾರತಕ್ಕೆ ಸೇರಿದವರು ಎಂಬ ಹೆಮ್ಮೆಯ ಭಾವನೆಯನ್ನು ನೀಡಿದ್ದೇನೆ” ಎಂದು ಹೇಳಿಕೆ ನೀಡಿದ್ದರು.

‘ದಿ ಹಿಂದೂ’ ಪತ್ರಿಕೆಯ ರಾಜತಾಂತ್ರಿಕ ಸಂಪಾದಕಿ ಸುಹಾಸಿನಿ ಹೈದರ್ ಟ್ವೀಟ್ ಮಾಡಿದ್ದು ಮೋದಿ ಹೇಳಿರುವ ಮಾತನ್ನು ಉಲ್ಲೇಖಿಸಿದ್ದಾರೆ. “ಒಂದು ವರ್ಷದ ಹಿಂದೆ ವಿದೇಶದಲ್ಲಿರುವ ಭಾರತೀಯರು ನಮ್ಮ ಗೆಲುವನ್ನು ಸಂಭ್ರಮಿಸಿದರು, ಹಾಡಿದರು, ಕೆಟ್ಟ ದಿನಗಳು ಹೋದವು. ಮೊದಲು ನಾಚಿಕೆಪಡುತ್ತಿದ್ದ ನೀವು ಇಂದು ಭಾರತದ ಬಗ್ಗೆ ಹೆಮ್ಮೆ ಪಡುತ್ತೀರಿ” ಎಂದಿದ್ದರು ಮೋದಿ. ಈ ಬಗ್ಗೆ ‘ದಿ ಹಿಂದೂ’ ಪತ್ರಿಕೆಯೂ ವರದಿ ಮಾಡಿತ್ತು. (ವರದಿ ಓದಲು ‘ಇಲ್ಲಿ’ ಕ್ಲಿಕ್ ಮಾಡಿರಿ)

ಈ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿರುವುದನ್ನು ‘ದಿ ಸ್ಕ್ರಾಲ್‌.ಇನ್‌’ ವರದಿ ಮಾಡಿತ್ತು.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾದಲ್ಲಿ ಮೇ 18, 2015ರಂದು ಸಿಯೋಲ್‌ನಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದ್ದರು. “ನಾವಿಂದು ಭಾರತದಲ್ಲಿ ಜೀವಿತಾವಧಿ ಶಿಕ್ಷೆಗೆ ಒಳಗಾಗಲು ನಾವು ಈ ಹಿಂದೆ ಏನು ಮಾಡಿದ್ದೆವು ಎಂದು ಆಶ್ಚರ್ಯಪಡುತ್ತಾ ಭಾರತೀಯರು ಹೇಳುವ ಕಾಲವಿತ್ತು. ಇದು ದೇಶವೇ? ಇದು ಸರ್ಕಾರವೇ? ಇವರು ಜನರೇ? ಹೋಗಲಿ ಬಿಡಿ” ಎಂದಿದ್ದರು ಮೋದಿ.

ಮೋದಿಯವರ ಹೆಸರಿನಲ್ಲಿರುವ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾದ ವಿಡಿಯೋದಲ್ಲಿಯೂ ಭಾಷಣ ಲಭ್ಯವಿದೆ.

ಮುಂದುವರಿದು ಮೋದಿ, “ಜನರು (ಹೊರಗೆ) ಹೊರಡುತ್ತಾರೆ. ‘ಸಹೋದರ ನೀವು ಇಲ್ಲಿ ವ್ಯಾಪಾರ ಮಾಡಬಾರದು, ಇಲ್ಲಿ ಬದುಕಬಾರದು’ ಎಂದು ಜನರಿಗೆ ಹೇಳುವುದನ್ನು ನಾವು ನೋಡುತ್ತೇವೆ. ಹೆಚ್ಚಿನ ಜನರು ಈಗಾಗಲೇ ದೇಶದ ಹೊರಗೆ ಕಾಲಿಟ್ಟಿದ್ದಾರೆ. ನಾನು ಕಾರಣಗಳಿಗೆ ಹೋಗಲು ಬಯಸುವುದಿಲ್ಲ. ಇದರ ರಾಜಕೀಯದ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಇದು ನೆಲದ ಸತ್ಯ. ಜನರು ನಿರಾಶೆಗೊಂಡರು, ಕೋಪಗೊಂಡರು. ನಾನು ಇಂದು ನಂಬಿಕೆಯಿಂದ ಹೇಳಬಲ್ಲೆ: ವಿವಿಧ ಕ್ಷೇತ್ರಗಳಲ್ಲಿನ ಸಾಧಕರು (ಪ್ರಸಿದ್ಧ ವಿಜ್ಞಾನಿಗಳು ಮತ್ತು ಮುಂತಾದವರು) ವಿದೇಶದಲ್ಲಿ ಇರುವುದಕ್ಕಿಂತ, ಕಡಿಮೆ ಹಣವನ್ನು ಪಡೆಯಲಿದ್ದರೂ ಸಹ ಭಾರತಕ್ಕೆ ಮರಳಲು ಉತ್ಸುಕರಾಗಿದ್ದಾರೆ” ಎಂದು ತಿಳಿಸಿದ್ದರು.

“ಈಗ ಮನಸ್ಥಿತಿ ಬದಲಾಗಿದೆ” ಎಂದು ಪ್ರಧಾನಿ ಬಣ್ಣಿಸಿದ್ದರು. “ಸರ್ಕಾರವೆಂದರೆ ದೇಶವಲ್ಲ, ಇದು 125 ಕೋಟಿ ಜನರ ಉತ್ಸಾಹ” ಎಂದು ತಾತ್ವಿಕವಾಗಿ ಮಾತನಾಡಿದ್ದರು.

ಜರ್ಮನಿ

ಯುರೋಪ್ ಪ್ರವಾಸದ ಭಾಗವಾಗಿ ಜರ್ಮನಿಯ ಬರ್ಲಿನ್‌ನಲ್ಲಿ ಮೋದಿಯವರು ಮಾತನಾಡಿ ಕಾಂಗ್ರೆಸ್‌ನ ವಿರುದ್ಧ ವಾಗ್ದಾಳಿ ನಡೆಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. “ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಭಾರತೀಯರು 1 ರೂಪಾಯಿಯಲ್ಲಿ ಕೇವಲ 15 ಪೈಸೆಗಳನ್ನು ಪಡೆಯುತ್ತಿದ್ದರು” ಎಂದು ಮೋದಿ ಟೀಕಿಸಿದ್ದರು.

“ವೋ ಕೌನ್ಸಾ ಪಂಜಾ ಥಾ ಜೋ 85 ಪೈಸೆ ಘಿಸ್ ಲೇತಾ ಥಾ?” (85 ಪೈಸೆಗಳನ್ನು ಯಾವ ಕೈಗಳು ತೆಗೆದುಕೊಂಡು ಹೋಗುತ್ತಿದ್ದವು?” ಎಂದು ಪ್ರಶ್ನಿಸಿದ್ದರು.

(ಕಾಂಗ್ರೆಸ್ ಪಕ್ಷದ ಚಿಹ್ನೆ ‘ಹಸ್ತ’ದ ಗುರುತು.)

ಆಸ್ಟ್ರೇಲಿಯಾ

2014ರಲ್ಲಿ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಮೋದಿಯವರು ಸಿಡ್ನಿಯ ಒಲಿಂಪಿಕ್ ಪಾರ್ಕ್‌ನಲ್ಲಿರುವ ಆಲ್‌ಫೋನ್ಸ್ ಅರೆನಾದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದರು. ಸುಮಾರು ಮೂರು ದಶಕಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದು ಇದೇ ಮೊದಲಾಗಿತ್ತು.

ಮೋದಿ ತಮ್ಮ ಭಾಷಣದಲ್ಲಿ, “ಹಿಂದಿನ ಸರ್ಕಾರವು, ‘ನಾವು ಈ ಕಾನೂನು ಮಾಡಿದೆವು, ಆ ಕಾನೂನು ಮಾಡಿದೆವು’ ಎಂದು ಹೇಳುತ್ತಿತ್ತು. ಆದರೆ ನನ್ನ ವಾಹನ ಬೇರೆ ದಾರಿಯಲ್ಲಿ ಹೋಗುತ್ತದೆ. ಕಾನೂನುಗಳನ್ನು ರಚಿಸುವಲ್ಲಿ ಅವರು ಸಂತೋಷವನ್ನು ಕಂಡುಕೊಳ್ಳುತ್ತಾರೆ. ಅವುಗಳನ್ನು ಕೊನೆಗೊಳಿಸುವುದರಲ್ಲಿ ನಾನು ಸಂತೋಷವನ್ನು ಕಂಡುಕೊಳ್ಳುತ್ತೇನೆ” ಎಂದು ತಿಳಿಸಿದ್ದರು.

(ಪೂರ್ಣ ಭಾಷಣವನ್ನು ಇಲ್ಲಿ ಕಾಣಬಹುದು.)

ಅಮೆರಿಕ

2014ರ ಸೆಪ್ಟಂಬರ್‌ನಲ್ಲಿ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮಾತನಾಡಿದ ಮೋದಿ ಅವರು, ಆಸ್ಟ್ರೆಲಿಯಾದಲ್ಲಿ ಮಾತನಾಡಿದ್ದನ್ನೇ ಪುನರುಚ್ಚರಿಸಿದ್ದರು.

ಅವರು ಹಿಂದಿಯಲ್ಲಿ ಮಾಡಿದ ಭಾಷಣದ ಭಾಷಾಂತರವನ್ನು ಇಂಗ್ಲಿಷ್‌ನಲ್ಲಿ ‘ಪ್ರೆಸ್ ಬ್ಯುರೊ ಆಫ್‌ ಇಂಡಿಯಾ’ ಒದಗಿಸಿತ್ತು. (ಅದನ್ನು ‘ಇಲ್ಲಿ’ ನೋಡಬಹುದು.)

“ಅವರು ಆ, ಈ ಕಾನೂನು ಮಾಡಿದ್ದರ ಬಗ್ಗೆ ಹೆಮ್ಮೆಪಡುತ್ತಾರೆ. ಇಡೀ ಚುನಾವಣಾ ಪ್ರಚಾರದಲ್ಲಿ ನೀವು ಇದನ್ನು ಕೇಳಿರಬೇಕು. ನಾನು ವಿಭಿನ್ನವಾಗಿ ಕೆಲಸ ಮಾಡುತ್ತೇನೆ. ಅನಗತ್ಯ ಕಾನೂನುಗಳನ್ನು ತೆಗೆದುಹಾಕಲು ನಾನು ಕೆಲಸ ಮಾಡುತ್ತಿದ್ದೇನೆ. ಇಂತಹ ಹಳತಾದ ಕಾನೂನು, ಅನಗತ್ಯ ಕಾನೂನುಗಳ ಜಾಲದಲ್ಲಿ ಒಬ್ಬ ಸಾಮಾನ್ಯ ಮನುಷ್ಯನು ಪ್ರವೇಶಿಸಲು ಧೈರ್ಯ ಮಾಡಿದರೆ, ಅವನು ತನ್ನ ದಾರಿಯನ್ನು ಕಂಡುಕೊಳ್ಳುವುದಿಲ್ಲ. ನಾನು ವಿಶೇಷವಾಗಿ ತಜ್ಞರ ತಂಡವನ್ನು ರಚಿಸಿದ್ದೇನೆ. ಪ್ರತಿದಿನ ಒಂದಾದರೂ ಕಾನೂನನ್ನು ತೊಡೆದುಹಾಕಲು ಸಾಧ್ಯವಾದರೆ ನಾನು ಹೆಚ್ಚು ಸಂತೋಷವಾಗಿರುತ್ತೇನೆ ಎಂದು ನಾನು ಅವರಿಗೆ ಸೂಚನೆ ನೀಡಿದ್ದೇನೆ” ಎಂದಿದ್ದರು ಪ್ರಧಾನಿ.

ಕೆನಡಾ

ಯೂಟ್ಯೂಬ್‌ನಲ್ಲಿನ ಅಧಿಕೃತ ‘ಪಿಎಂಒ ಇಂಡಿಯಾ’ ಖಾತೆಗೆ 2015ರಲ್ಲಿ ಅಪ್‌ಲೋಡ್ ಮಾಡಿದ ಭಾಷಣವು ಕೆನಡಾದ ಟೊರೊಂಟೊದಲ್ಲಿ ದೊಡ್ಡ ಜನಸಮೂಹವನ್ನುದ್ದೇಶಿಸಿ ಮೋದಿಯವರು ಮಾತನಾಡಿದ್ದಕ್ಕೆ ಸಂಬಂಧಿಸಿದೆ. “ಅಪದ್ರವ ಸೃಷ್ಟಿಸಿದವರು ತೊರೆದಿದ್ದಾರೆ, ಆದರೆ ನಾನು ಅದನ್ನು ಸ್ವಚ್ಛಗೊಳಿಸುತ್ತೇನೆ” ಎನ್ನುತ್ತಾರೆ ಮೋದಿ.

(ಪ್ರೇಕ್ಷಕರ ಚಪ್ಪಾಳೆ ಕೇಳಿಬರುತ್ತದೆ.)

ಯುಕೆ

2018ರಲ್ಲಿ ಲಂಡನ್‌ನಲ್ಲಿ ಮೋದಿಯವರು ಮಾತನಾಡಿರುವ ವಿಡಿಯೊ ಕ್ಲಿಪ್ ಕೂಡ ಸುಪ್ರಿಯಾ ಹಂಚಿಕೊಂಡಿದ್ದಾರೆ. ಈ ಭಾಷಣದ ಬಗ್ಗೆ ‘ದಿ ವೈರ್’ ಕೂಡ ವರದಿ ಮಾಡಿದೆ. ಮೋದಿಯವರು ಲಂಡನ್‌ನಲ್ಲಿ ಮಾಡಿದ ಭಾಷಣಕ್ಕೆ ಭಾರತೀಯ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ‘ದಿ ವೈರ್‌’ ವರದಿಯಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಯವರ ಭಾಷಣ ವ್ಯಾಪಕವಾಗಿ ವೈರಲ್ ಆಗಿತ್ತು. “ಔಷಧೀಯ ಕಂಪನಿಗಳ ಪ್ರಾಯೋಜಿತ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಲು ವೈದ್ಯರು ವಿದೇಶಿ ಪ್ರವಾಸ ಮಾಡುತ್ತಾರೆ” ಎಂಬುದಾಗಿ ಮೋದಿ ಹೇಳಿಕೆ ನೀಡಿದ್ದರು. “ವೈದ್ಯರ ಸಮ್ಮೇಳನಗಳನ್ನು ಕೆಲವೊಮ್ಮೆ ಸಿಂಗಾಪುರದಲ್ಲಿ, ಕೆಲವೊಮ್ಮೆ ದುಬೈನಲ್ಲಿ ನಡೆಸಲಾಗುತ್ತದೆ ಎಂದು ನಿಮಗೆ ತಿಳಿದಿರಬಹುದು. ಅಲ್ಲಿ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಅವರು ಅಲ್ಲಿಗೆ ಹೋಗುವುದಿಲ್ಲ; ಔಷಧ ಕಂಪನಿಗಳಿಗೆ ಬೇಕಾಗಿರುವುದರಿಂದ ಅವರು ಹೋಗುತ್ತಾರೆ” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು.

ವರದಿ ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...