Homeಮುಖಪುಟಕಾಂಗ್ರೆಸ್ ಹೊರಗಿಟ್ಟು ವಿರೋಧಿ ಬಣ ಕಟ್ಟಲು ಮುಂದಾದ ಟಿಎಂಸಿ, ಎಸ್‌ಪಿ

ಕಾಂಗ್ರೆಸ್ ಹೊರಗಿಟ್ಟು ವಿರೋಧಿ ಬಣ ಕಟ್ಟಲು ಮುಂದಾದ ಟಿಎಂಸಿ, ಎಸ್‌ಪಿ

- Advertisement -
- Advertisement -

ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಒಂದು ಒಂದೇ ಅಂತರದಲ್ಲಿ ಇರಿಸಲು ಮೂರು ಪ್ರಮುಖ ವಿರೋಧ ಪಕ್ಷಗಳು ಒಪ್ಪಿಕೊಂಡಿವೆ. ಕಾಂಗ್ರೆಸ್‌, ಬಿಜೆಪಿಯನ್ನು ಸಮಾನವಾಗಿ ಪರಿಗಣಿಸಲು ಮುಂದಾಗಿವೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬಿಜು ಜನತಾ ದಳದ ಮುಖ್ಯಸ್ಥರಾದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂದಿನ ವಾರ ಭೇಟಿಯಾಗಲಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷಗಳ ಗುಂಪಿನ ಪ್ರಮುಖ ನಾಯಕ ಎಂದು ಬಿಂಬಿಸುವ ಬಿಜೆಪಿಯ ಪ್ರಯತ್ನವನ್ನು ಎದುರಿಸುವ ಗುರಿಯನ್ನು ಈ ತಂತ್ರ ಹೊಂದಿದೆ ಎಂದು ಹೇಳಲಾಗುತ್ತಿದೆ.

ಭಾರತದ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರ ಮೈಕ್‌ಗಳನ್ನು ಮ್ಯೂಟ್ ಮಾಡಲಾಗಿದೆ ಎಂದು ಲಂಡನ್‌ನಲ್ಲಿ ರಾಹುಲ್‌ ಗಾಂಧಿಯವರು ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಬಿಜೆಪಿ, ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತಿದೆ. ಈ ವಿರೋಧ ಪಕ್ಷಗಳು ಬೇರೆಯದೇ ರೀತಿಯಲ್ಲಿ ಈ ವಿದ್ಯಮಾನವನ್ನು ಪರಿಭಾವಿಸಿವೆ. “ಈಗ ಬಿಜೆಪಿಯು ರಾಹುಲ್ ಅವರನ್ನು ಬಳಸಿಕೊಂಡು ನಮ್ಮನ್ನು ಗುರಿಯಾಗಿಸಿಕೊಂಡಿದೆ” ಈ  ಶಂಕಿಸುತ್ತಿವೆ.

“ರಾಹುಲ್ ಗಾಂಧಿಯವರು ವಿದೇಶದಲ್ಲಿ ಭಾಷಣ ಮಾಡಿದ್ದಾರೆ, ಅವರು ಕ್ಷಮೆಯಾಚಿಸುವವರೆಗೂ ಬಿಜೆಪಿ ಸಂಸತ್ತಿನ ಕಲಾಪಗಳಿಗೆ ಅವಕಾಶ ನೀಡುವುದಿಲ್ಲ. ಇದರರ್ಥ ಅವರು ಕಾಂಗ್ರೆಸ್ ಅನ್ನು ಬಳಸಿಕೊಂಡು ಕಲಾಪಗಳು ನಡೆಯದಂತೆ ನೋಡಿಕೊಂಡಿದೆ. ರಾಹುಲ್ ಗಾಂಧಿಯವರು ವಿರೋಧಿ ಬಣದ ಮುಖವಾಗಿರಬೇಕೆಂದು ಬಿಜೆಪಿ ಬಯಸುತ್ತದೆ. ಇದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ. (2024ರ ಚುನಾವಣೆಗೆ) ಪ್ರಧಾನ ಮಂತ್ರಿಯ ಮುಖವನ್ನು ನಿರ್ಧರಿಸುವ ಅಗತ್ಯವಿಲ್ಲ” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ತಿಳಿಸಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ವಿರೋಧ ಪಕ್ಷದ ‘ಬಿಗ್ ಬಾಸ್ ಕಾಂಗ್ರೆಸ್’ ಎಂದು ಭಾವಿಸುವುದು ತಪ್ಪು ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ.

“ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾರ್ಚ್ 23 ರಂದು ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಲಿದ್ದಾರೆ. ನಾವು ಇದನ್ನು (ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವ ಯೋಜನೆ) ಇತರ ವಿರೋಧ ಪಕ್ಷಗಳೊಂದಿಗೆ ಚರ್ಚಿಸುತ್ತೇವೆ. ಇದು ತೃತೀಯ ರಂಗ ಎಂದು ನಾವು ಹೇಳುತ್ತಿಲ್ಲ, ಆದರೆ ಪ್ರಾದೇಶಿಕ ಪಕ್ಷಗಳಿಗೆ ಈ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ” ಎಂದು ತಿಳಿಸಿದ್ದಾರೆ.

“ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳಲು ಬಯಸಿದ್ದೇನೆ” ಎಂದು ಅಖಿಲೇಶ್ ಯಾದವ್ ಖಚಿತಪಡಿಸಿದ್ದಾರೆ.

ಇದನ್ನೂ ಓದಿರಿ: ‘ವಿದೇಶದಲ್ಲಿ ನಿಂತು ಭಾರತವನ್ನು ಮೋದಿ ಅವಮಾನಿಸಿದ್ದು’: ಹಳೆಯ ವಿಡಿಯೊಗಳ ಮೂಲಕ ಕಾಂಗ್ರೆಸ್ ತಿರುಗೇಟು

“ಬಂಗಾಳದಲ್ಲಿ, ನಾವು ಮಮತಾ ದೀದಿಯವರೊಂದಿಗೆ ಇದ್ದೇವೆ. ಇದೀಗ, ನಮ್ಮ ನಿಲುವು ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವುದಾಗಿದೆ” ಎಂದು ಅಖಿಲೇಶ್‌ ಕೋಲ್ಕತ್ತಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿಗೆ ಸೇರಿದ ನಂತರ ಕೇಂದ್ರ ತನಿಖಾ ಸಂಸ್ಥೆಗಳ ಪ್ರಕರಣಗಳಿಂದ ಬಚಾವಾದ ವಿರೋಧ ಪಕ್ಷದ ಮಾಜಿ ನಾಯಕರನ್ನು ಉಲ್ಲೇಖಿಸಿ ಮಾತನಾಡಿರುವ ಅವರು, “ಬಿಜೆಪಿ ಲಸಿಕೆ ಪಡೆಯುವವರಿಗೆ ಸಿಬಿಐ, ಇಡಿ ಅಥವಾ ಐಟಿಯಿಂದ ತೊಂದರೆಯಾಗುವುದಿಲ್ಲ” ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ, ರಾಷ್ಟ್ರೀಯ ಜನತಾ ದಳದ ಲಾಲು ಯಾದವ್ ಮತ್ತು ಅವರ ಕುಟುಂಬದ ಹಲವಾರು ವಿರೋಧ ಪಕ್ಷದ ನಾಯಕರನ್ನು ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದಿಂದ ಬೇಟೆಯಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...