Homeಅಂತರಾಷ್ಟ್ರೀಯಉಕ್ರೇನ್‌ ಯುದ್ಧ ಸಂಬಂಧ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್; ಐಸಿಸಿ ಕ್ರಮ ಜಾರಿ ಸಾಧ್ಯವೆ?

ಉಕ್ರೇನ್‌ ಯುದ್ಧ ಸಂಬಂಧ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್; ಐಸಿಸಿ ಕ್ರಮ ಜಾರಿ ಸಾಧ್ಯವೆ?

ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಕೈಗೊಂಡಿರುವ ಕ್ರಮ ಜಾರಿ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.

- Advertisement -
- Advertisement -

ಉಕ್ರೇನ್- ರಷ್ಯಾ ಯುದ್ಧದ ಸಂಬಂಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬಂಧನ ವಾರಂಟ್ ಹೊರಡಿಸುವ ಪ್ರಮುಖ ಕ್ರಮವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ತೆಗೆದುಕೊಂಡಿದೆ.

ಮಕ್ಕಳನ್ನು ಗಡೀಪಾರು ಮಾಡುವ ಯುದ್ಧ ಅಪರಾಧದ ಆರೋಪ ಹೊತ್ತಿರುವ ರಷ್ಯಾದ ಅಧ್ಯಕ್ಷರು ನಿಜವಾಗಿಯೂ ಹೇಗ್‌ನಲ್ಲಿ ವಿಚಾರಣೆಗೆ ನಿಲ್ಲುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆ ಸದ್ಯಕ್ಕೆ ಹುಟ್ಟಿಕೊಂಡಿದೆ.

ಪುಟಿನ್ ಮತ್ತು ಮಕ್ಕಳ ಹಕ್ಕುಗಳ ರಷ್ಯಾದ ಅಧ್ಯಕ್ಷೀಯ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ಅವರು ಐಸಿಸಿ ಸದಸ್ಯ ದೇಶಗಳಿಗೆ ಪ್ರಯಾಣಿಸಿದರೆ ಬಂಧನ ವಾರಂಟ್‌ಗಳನ್ನು ಎದುರಿಸುವ ಸಾಧ್ಯತೆ ಇದೆ. ಆದರೆ ಈ ಕ್ರಮವನ್ನು ಐಸಿಸಿ ಸದಸ್ಯ ರಾಷ್ಟ್ರಗಳು ಜರುಗಿಸುತ್ತವೆಯೇ ಎಂಬುದು ಸದ್ಯದ ಪ್ರಶ್ನೆ.

ಪುಟಿನ್ ಆ 123 ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶಕ್ಕೆ ಕಾಲಿಟ್ಟರೆ ಬಂಧನಕ್ಕೆ ಹೊಣೆಯಾಗುತ್ತಾರೆಯೇ ಎಂದು ಕೇಳಿದಾಗ ‘ಅದು ಸರಿ’ ಎಂದು ಐಸಿಸಿ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.

ಆದರೆ ಈ ಕ್ರಮದಿಂದಾಗಿ ಪುಟಿನ್‌ ಅವರ ಪ್ರಯಾಣವನ್ನು ಕಷ್ಟಕರವಾಗಿಸಬಹುದು. ನ್ಯಾಯಾಲಯವು ತನ್ನ ವಾರಂಟ್‌ಗಳನ್ನು ಜಾರಿಗೊಳಿಸಲು ತನ್ನದೇ ಆದ ಪೋಲೀಸ್ ಬಲವನ್ನು ಹೊಂದಿಲ್ಲ. ಐಸಿಸಿ ವ್ಯಾಪ್ತಿಯ ದೇಶಗಳ ಮೇಲೆ ಈ ಕ್ರಮ ಅವಲಂಬಿತವಾಗಿದೆ.

ವಿಶೇಷವಾಗಿ ಪುಟಿನ್‌ ಅಂಥವರ ವಿಚಾರದಲ್ಲಿ ಐಸಿಸಿ ಸದಸ್ಯ ದೇಶಗಳು ಯಾವತ್ತೂ ಈ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ.

ಸುಡಾನ್‌ನ ಮಾಜಿ ನಾಯಕ ಒಮರ್ ಅಲ್-ಬಶೀರ್ ಅವರು ಐಸಿಸಿ ವಾರಂಟ್‌ಗೆ ಒಳಪಟ್ಟಿದ್ದರೂ ಸಹ ದಕ್ಷಿಣ ಆಫ್ರಿಕಾ ಮತ್ತು ಜೋರ್ಡಾನ್ ಸೇರಿದಂತೆ ಹಲವಾರು ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಭೇಟಿ ನೀಡುವಲ್ಲಿ ಯಶಸ್ವಿಯಾಗಿದ್ದರು.

2019ರಲ್ಲಿ ಪದಚ್ಯುತಗೊಂಡಿದ್ದರೂ, ಸುಡಾನ್ ಇನ್ನೂ ಅವರನ್ನು ಹಸ್ತಾಂತರಿಸಿಲ್ಲ.

ಕೊಲಂಬಿಯಾ ಕಾನೂನು ಶಾಲೆಯ ಪ್ರೊಫೆಸರ್ ಮ್ಯಾಥ್ಯೂ ವ್ಯಾಕ್ಸ್‌ಮನ್ ಪ್ರತಿಕ್ರಿಯಿಸಿ, “ಇದು ಐಸಿಸಿಯ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಆದರೆ ನಾವು ಪುಟಿನ್ ಅವರನ್ನು ಬಂಧಿಸುವುದನ್ನು ನೋಡುವ ಸಾಧ್ಯತೆಗಳು ಕಡಿಮೆ” ಎಂದಿದ್ದಾರೆ.

ಮುಖ್ಯ ಅಡಚಣೆಗಳೇನು?

ಯುನೈಟೆಡ್ ಸ್ಟೇಟ್ಸ್, ಚೀನಾ ದೇಶಗಳ ಹಾಗೆ ರಶಿಯಾ ಕೂಡ ಐಸಿಸಿ ಸದಸ್ಯತ್ವ ಹೊಂದಿಲ್ಲ.

ಐಸಿಸಿಯು ಪುಟಿನ್ ವಿರುದ್ಧ ಆರೋಪಗಳನ್ನು ಸಲ್ಲಿಸಲು ಸಾಧ್ಯವಾಯಿತು. ಏಕೆಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಉಕ್ರೇನ್ ತನ್ನ ಅಧಿಕಾರ ವ್ಯಾಪ್ತಿಯನ್ನು ಒಪ್ಪಿಕೊಂಡಿದೆ, ಆದರೂ ಕೀವ್ (ಉಕ್ರೇನ್ ರಾಜಧಾನಿ) ಕೂಡ ಸದಸ್ಯತ್ವವನ್ನು ಹೊಂದಿಲ್ಲ.

ಇದನ್ನೂ ಓದಿರಿ: ಉಕ್ರೇನ್‌ನಿಂದ ರಷ್ಯಾ ಪಡೆ ಹಿಂತೆಗೆದುಕೊಳ್ಳುವ ನಿರ್ಣಯದ ಮೇಲೆ ಮತದಾನ: ದೂರ ಉಳಿದ ಭಾರತ

ಆದರೆ ಪುಟಿನ್ ವಿರುದ್ಧದ ವಾರಂಟ್‌ಗಳನ್ನು ಮಾಸ್ಕೋ (ರಷ್ಯಾ) ವಜಾಗೊಳಿಸಿದೆ.

ಯಾವುದೇ ಸಂದರ್ಭದಲ್ಲಿ ರಷ್ಯಾ ತನ್ನ ನಾಗರಿಕರನ್ನು ಹಸ್ತಾಂತರಿಸುವುದಿಲ್ಲ.

ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, “ಈ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ರಷ್ಯಾ ಗುರುತಿಸುವುದಿಲ್ಲ. ಆದ್ದರಿಂದ ಕಾನೂನು ದೃಷ್ಟಿಕೋನದಿಂದ, ಈ ನ್ಯಾಯಾಲಯದ ನಿರ್ಧಾರಗಳು ಅನೂರ್ಜಿತವಾಗಿವೆ” ಎಂದು ಹೇಳಿದ್ದಾರೆ.

ರಷ್ಯಾ ವಾಸ್ತವವಾಗಿ ನ್ಯಾಯಾಲಯದ ಮಹತ್ವದ ನಿರ್ಧಾರವಾದ ರೋಮ್ ಶಾಸನಕ್ಕೆ ಸಹಿ ಹಾಕಿತು. ಆದರೆ ಸದಸ್ಯರಾಗಲು ಅದನ್ನು ಅಂಗೀಕರಿಸಲಿಲ್ಲ. ನಂತರ ಜಾರ್ಜಿಯಾದಲ್ಲಿ 2008 ರ ಯುದ್ಧದ ಬಗ್ಗೆ ಐಸಿಸಿ ತನಿಖೆಯನ್ನು ಪ್ರಾರಂಭಿಸಿದ ನಂತರ 2016ರಲ್ಲಿ ಪುಟಿನ್ ಅವರ ಆದೇಶದ ಮೇರೆಗೆ ತನ್ನ ಸಹಿಯನ್ನೂ ಹಿಂತೆಗೆದುಕೊಳ್ಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...