Homeಮುಖಪುಟಉಕ್ರೇನ್‌ನಿಂದ ರಷ್ಯಾ ಪಡೆ ಹಿಂತೆಗೆದುಕೊಳ್ಳುವ ನಿರ್ಣಯದ ಮೇಲೆ ಮತದಾನ: ದೂರ ಉಳಿದ ಭಾರತ

ಉಕ್ರೇನ್‌ನಿಂದ ರಷ್ಯಾ ಪಡೆ ಹಿಂತೆಗೆದುಕೊಳ್ಳುವ ನಿರ್ಣಯದ ಮೇಲೆ ಮತದಾನ: ದೂರ ಉಳಿದ ಭಾರತ

- Advertisement -
- Advertisement -

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ಉಕ್ರೇನ್‌ನಿಂದ ರಷ್ಯಾದ ಪಡೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು ಎಂಬ ನಿರ್ಣಯದ ಮೇಲೆ ಮತದಾನ ನಡೆಯಿತು ಆದರೆ ಭಾರತ ಮಾತ್ರ ಈ ಮತದಾನದಿಂದ ದೂರ ಉಳಿದಿದೆ.

ನಿಖರವಾಗಿ ಇಂದಿಗೆ ಒಂದು ವರ್ಷದ ಹಿಂದೆ ಅಂದರೆ ಫೆಬ್ರವರಿ 24, 2022ರಂದು ರಷ್ಯಾ ಉಕ್ರೇನ್ಅನ್ನು ಆಕ್ರಮಿಸಿತು. ಇದು ವಿಶ್ವಯುದ್ಧ IIರ ನಂತರ ಯುರೋಪಿನಲ್ಲಿ ನಡೆದ ಅತ್ಯಂತ ಮಾರಕ ಸಂಘರ್ಷವಾಗಿದೆ. ವಿದೇಶಿ ದಾಳಿಗಳ ವೇದಿಕೆಯಾಗಿ ಕೈವ್ಅನ್ನು ಬಳಸದಂತೆ ತಡೆಯಲು ಇದು ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ರಷ್ಯಾ ಸಮರ್ಥಿಸಿಕೊಂಡಿತ್ತು. ಆದರೆ ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು, ಇದು ಸಾಮ್ರಾಜ್ಯಶಾಹಿ ಶೈಲಿಯ ಆಕ್ರಮಣದ ಯುದ್ಧ ಎಂದು ಹೇಳುತ್ತವೆ.

ಇದನ್ನೂ ಓದಿ: ಉಕ್ರೇನ್‌ಗೆ ಪರಮಾಣು ಬೆದರಿಕೆಯೊಡ್ಡಿದ ರಷ್ಯಾ; ಶಾಂತಿ ಮಾತುಕತೆ ನಡೆಸಲು ಉಭಯ ರಾಷ್ಟ್ರಗಳಿಗೆ ಚೀನಾ ಕರೆ

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಭದ್ರತಾ ಮಂಡಳಿ ಮತ್ತು ಮಾನವ ಹಕ್ಕುಗಳ ಮಂಡಳಿಯಲ್ಲಿ ಹಲವಾರು ನಿರ್ಣಯಗಳು ಆಕ್ರಮಣವನ್ನು ಖಂಡಿಸಿವೆ ಮತ್ತು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತೆ ಕರೆ ನೀಡಿವೆ. ಭಾರತವು ಅಂತಹ ಹೆಚ್ಚಿನ ನಿರ್ಣಯಗಳಿಂದ ದೂರವಿದೆ.

ಉಕ್ರೇನ್‌ನಿಂದ ರಷ್ಯಾದ ಪಡೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕೆಂಬ ನಿರ್ಣಯದ ಮೇಲೆ ನಡೆದ ಮತದಾನದಲ್ಲಿ 141 ಮತಗಳು ದಾಖಲಾದವು. ಆ ನಂತರ ಗುರುವಾರ ನಡೆದ ಸಾಮಾನ್ಯ ಸಭೆ ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯದ ವಿರುದ್ಧ ಏಳು ದೇಶಗಳು ಮತ ಚಲಾಯಿಸಿದವು ಮತ್ತು ಭಾರತ ಸೇರಿದಂತೆ 32 ದೇಶಗಳು ಮತದಾನದಿಂದ ದೂರ ಉಳಿದಿವೆ.

ಈ ನಿರ್ಣಯವು ”ರಷ್ಯಾದ ಒಕ್ಕೂಟವು ತಕ್ಷಣವೇ, ಸಂಪೂರ್ಣವಾಗಿ ಮತ್ತು ಬೇಷರತ್ತಾಗಿ ತನ್ನ ಎಲ್ಲಾ ಮಿಲಿಟರಿ ಪಡೆಗಳನ್ನು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ತನ್ನ ಗಡಿಯೊಳಗೆ ಉಕ್ರೇನ್ ಪ್ರದೇಶದಿಂದ ಹಿಂತೆಗೆದುಕೊಳ್ಳಬೇಕು” ಮತ್ತು ಈ ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...