Homeಮುಖಪುಟಚರ್ಚ್‌ಗಳಲ್ಲಿ 'ದಿ ಕೇರಳ ಸ್ಟೋರಿ' ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

- Advertisement -
- Advertisement -

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ ದ್ವೇಷವನ್ನು ಹುಟ್ಟಿಸುವುದರ ಜೊತೆಗೆ ಅದನ್ನು ಮತವಾಗಿ ಪರಿವರ್ತನೆಗೊಳಿಸುವುದು ಹಿಡನ್‌ ಅಜೆಂಡಾವಾಗಿತ್ತು. ಆದರೆ ಇದಕ್ಕೆ ಕ್ರಿಶ್ಚಿಯನ್‌ ಸಮುದಾಯ ಸೊಪ್ಪು ಹಾಕಿಲ್ಲ. ಇದೀಗ ಸ್ವತಃ ಸಿರೋ ಮಲಬಾರ್ ಚರ್ಚ್‌ನ ತಲಶ್ಶೇರಿ ಧರ್ಮಪ್ರಾಂತ್ಯದ ಆರ್ಚ್‌ ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಹೇಳಿಕೆಯೊಂದನ್ನು ನೀಡಿದ್ದು, ಕೋಮು ಅಜೆಂಡಾಗಳ ಸಾಧನೆಗೆ ಕ್ರಿಶ್ಚಿಯನ್‌ ಮಹಿಳೆಯರನ್ನು ಬಳಕೆ ಮಾಡಬೇಡಿ ಎಂದು ಖಾರವಾಗಿ ಸಂದೇಶವನ್ನು ನೀಡಿದ್ದಾರೆ.

ದೇಶದ ಹಲವು ಕಡೆಗಳಲ್ಲಿ ಚರ್ಚ್‌ಗಳ ಮೇಲೆ, ಕ್ರಿಶ್ಚಿಯನ್ನರ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಬ್ಬಾಳಿಕೆ ನಡೆಸುತ್ತಿದ್ದಾಗ ಮೌನವನ್ನು ಕಾಯ್ದುಕೊಂಡಿದ್ದ ಪ್ರಧಾನಿ ಮೋದಿ, ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಪಾದ್ರಿಗಳನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು. ಅದಾದ ಬಳಿಕ ಸಿರೋ ಮಲಬಾರ್ ಚರ್ಚ್ ಇಡುಕ್ಕಿ ಧರ್ಮಪ್ರಾಂತ್ಯದದಲ್ಲಿ ವಿವಾದಿತ ಸುಳ್ಳು ಪ್ರತಿಪಾದಿತ ಸಿನಿಮಾ ‘ದಿ ಕೇರಳ ಸ್ಟೋರಿ’ ಪ್ರದರ್ಶನ ನಡೆದಿದೆ. ಕ್ರೈಸ್ತ ಮಹಿಳೆಯರಿಗೆ ಈ ಕೋಮುವಾದಿ ಅಜೆಂಡಾ ಹೊಂದಿರುವ ಸಿನಿಮಾ ಪ್ರದರ್ಶಿಸುವ ಮೂಲಕ ಅವರಲ್ಲಿ ಧ್ರವೀಕರಣ ಮನಸ್ಥತಿ ಉಂಟು ಮಾಡುವ ತಂತ್ರದ ಭಾಗ ಎಂದು ಆರೋಪಿಸಲಾಗಿದೆ.

ಕಣ್ಣೂರು ಜಿಲ್ಲೆಯ ಚೆಂಪೇರಿಯಲ್ಲಿ ಕೇರಳ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ಕೆಸಿವೈಎಂ) ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಆರ್ಚ್‌ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ, ಕ್ರಿಶ್ಚಿಯನ್ನರಲ್ಲಿ ವಿಭಜನೆ ಮತ್ತು ಕೋಮುವಾದವನ್ನು ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಾರೆ. ಯುವಕರು “ಸಂಕುಚಿತ ಮನೋಭಾವ” ಹೊಂದಿರಬಾರದು. ಲವ್ ಜಿಹಾದ್‌ನಿಂದ ಮಹಿಳೆಯರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಸಂಸ್ಥೆಗಳನ್ನು ಟೀಕಿಸಿದ ಅವರು, ಮುಸ್ಲಿಂ ಪುರುಷರು ಇತರ ಧರ್ಮಗಳ ಮಹಿಳೆಯರನ್ನು ಇಸ್ಲಾಂಗೆ ಪರಿವರ್ತಿಸುತ್ತಾರೆ ಎನ್ನುವುದು ಇಸ್ಲಾಮೋಫೋಬಿಕ್ ಪಿತೂರಿ ಸಿದ್ಧಾಂತ ಎಂದು ಹೇಳಿದ್ದಾರೆ.

ಕೆಲವರು ನಮ್ಮ ಹೆಣ್ಣುಮಕ್ಕಳ ರಕ್ಷಕರೆಂದು ಹೇಳುತ್ತಿದ್ದಾರೆ. ಆತ್ಮೀಯ ಯುವತಿಯರೇ, ನಾನು ನಿಮಗೆ ಹೇಳಲೇಬೇಕು, ಇಲ್ಲಿನ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಇದ್ದಾರೆ. ಹಾಗಾಗಿ ಪ್ರೀತಿಯ ಹೆಸರಿನಲ್ಲಿ ಯಾರೂ ಅವರನ್ನು ವಂಚಿಸಲು ಸಾಧ್ಯವಿಲ್ಲ. ನಾವು ಪ್ರೀತಿಯ ಕಥೆಯನ್ನು ಮಾತ್ರ ಹೇಳಬೇಕಾಗಿದೆ, ಕ್ರಿಶ್ಚಿಯನ್ನರಿಗೆ ಹಂಚಿಕೊಳ್ಳಲು ಒಂದೇ ಒಂದು ಕಥೆಯಿದೆ, ಅದು ಯೇಸುವಿನ ಕಥೆ, ನಮ್ಮ ನಡುವೆ ವಿಭಜನೆ ಮತ್ತು ಕೋಮುವಾದವನ್ನು ಬಿತ್ತಲು ಅನೇಕ ಜನರು ಇದ್ದಾರೆ ಎಂದು ನಾವು ಅರಿತುಕೊಳ್ಳಬೇಕು. ಯುವಕರು ಕ್ರೈಸ್ತನ ಮಿತಿಯಿಲ್ಲದ ಪ್ರೀತಿ ಮತ್ತು ಮಿತಿಯಿಲ್ಲದ ಮಾನವೀಯತೆಯ ವೈಭವವನ್ನು ಎಂದಿಗೂ ಮರೆಯಬಾರದು. ಯುವಕರು ಸಂಕುಚಿತವಾದರೆ, ಇಡೀ ದೇಶವು ಸಂಕುಚಿತತೆಯ ಕತ್ತಲೆಯಲ್ಲಿ ಬೀಳುತ್ತದೆ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸಿರೋ ಮಲಬಾರ್ ಚರ್ಚ್‌ನ ಇಡುಕ್ಕಿ ಧರ್ಮಪ್ರಾಂತ್ಯವು ಕೇರಳ ಸ್ಟೋರಿಯನ್ನು ಪ್ರದರ್ಶಿಸುವ ಮೂಲಕ ದೊಡ್ಡ ವಿವಾದವನ್ನು ಹುಟ್ಟುಹಾಕಿತ್ತು, ಇದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಅವರು ವಿರೋಧವನ್ನು ವ್ಯಕ್ತಪಡಿಸಿದ್ದರು. ಸುದೀಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿ ಬಲಪಂಥೀಯ ಅಜೆಂಡಾವನ್ನು ಹೊಂದಿದ್ದು, ಅದರಲ್ಲಿ ಲವ್‌ ಜಿಹಾದ್‌, ಮತಾಂತರದ ಬಗ್ಗೆ ಸುಳ್ಳು ಪ್ರತಿಪಾದನೆಯನ್ನು ಮಾಡಲಾಗಿದೆ.

ತಲಶ್ಶೇರಿ ಧರ್ಮಪ್ರಾಂತ್ಯದ ಅಧೀನದಲ್ಲಿರುವ ಕೆಲವು ಚರ್ಚ್‌ಗಳಲ್ಲಿ ಸುದೀಪ್ತೋ ಸೇನ್ ನಿರ್ದೇಶನದ ಪ್ರಚಾರ ಚಲನಚಿತ್ರವನ್ನು ಸಹ ಪ್ರದರ್ಶಿಸಲಾಯಿತು. ವಿವಾದದ ನಂತರ, ಲೋಕಸಭೆ ಚುನಾವಣೆ ಪೂರ್ಣಗೊಳ್ಳುವವರೆಗೆ ಚಲನಚಿತ್ರಗಳನ್ನು ಪ್ರದರ್ಶಿಸುವುದನ್ನು ತಡೆಯುವುದಾಗಿ ಧರ್ಮಪ್ರಾಂತ್ಯ ಮಾಧ್ಯಮಗಳಿಗೆ ತಿಳಿಸಿದೆ. ಯಾವುದೇ ಕೋಮುವಾದಿಗಳು ನಮ್ಮ ಮಹಿಳೆಯರ ಹೆಸರು ಹೇಳಿ ಇಲ್ಲಿ ಕೋಮುವಾದ ಮಾಡುವ ಅಗತ್ಯವಿಲ್ಲ. ನಾವು ಇದನ್ನು ಇನ್ನು ಮುಂದೆ ಅನುಮತಿಸುವುದಿಲ್ಲ. ನಮ್ಮ ಯುವತಿಯರನ್ನು ಹೇಗೆ ರಕ್ಷಿಸಬೇಕು ಎಂದು ನಮ್ಮ ಸಮುದಾಯಕ್ಕೆ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಆರ್ಚ್‌ಬಿಷಪ್ ಅವರು ಕೇರಳದ ಸಂಘಪರಿವಾರದ ಪರ ಕ್ರಿಶ್ಚಿಯನ್ ಸಂಘಟನೆಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ಮತ್ತು ಅಲಯನ್ಸ್ ಫಾರ್ ಸೋಶಿಯಲ್ ಆಕ್ಷನ್ (ಸಿಎಎಸ್‌ಎ)ನನ್ನು ಉದ್ದೇಶಿಸಿ ಈ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನು ಓದಿ: ಪನ್ನೂನ್ ಹತ್ಯೆ ಸಂಚು: ಮೋದಿ ಆಪ್ತರ ಕಡೆ ಬೊಟ್ಟು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...