Homeಅಂತರಾಷ್ಟ್ರೀಯಪನ್ನೂನ್ ಹತ್ಯೆ ಸಂಚು: ಮೋದಿ ಆಪ್ತರ ಕಡೆ ಬೊಟ್ಟು?

ಪನ್ನೂನ್ ಹತ್ಯೆ ಸಂಚು: ಮೋದಿ ಆಪ್ತರ ಕಡೆ ಬೊಟ್ಟು?

- Advertisement -
- Advertisement -

ಅಮೆರಿಕದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಭಾರತದ ಗುಪ್ತಚರ ಸೇವೆಯ ಅಧಿಕಾರಿಯೊಬ್ಬರು ಅಂತಿಮ ಸೂಚನೆಗಳನ್ನು ನೀಡಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ್ದು, ಪನ್ನೂನ್ ಹತ್ಯೆಯ ಬಗ್ಗೆ ಪ್ರಧಾನಿ ಮೋದಿ ಆಪ್ತರಿಗೆ ತಿಳಿದಿರುವ ಸಾಧ್ಯತೆ ಇದೆ ಎಂದು ಯುಎಸ್‌ ಏಜೆನ್ಸಿಗಳ ಮಾಹಿತಿ ಉಲ್ಲೇಖಿಸಿ ಹೇಳಿಕೊಂಡಿದೆ.

ಪನ್ನೂನ್‌ ಹತ್ಯೆಯು “ಈಗ ಆದ್ಯತೆಯಾಗಿದೆ” ಎಂದು ಭಾರತದ ಬೇಹುಗಾರಿಕಾ ಸಂಸ್ಥೆ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಅಥವಾ RAWನಲ್ಲಿ ಅಧಿಕಾರಿಯಾಗಿರುವ ವಿಕ್ರಂ ಯಾದವ್ ಬರೆದಿದ್ದಾರೆ ಎಂದು ಆಪಾದಿಸಲಾಗಿದೆ.

ಯುಎಸ್ ಸಲ್ಲಿಸಿದ ದೋಷಾರೋಪಣೆ ಪಟ್ಟಿ ಪ್ರಕಾರ, ಯಾದವ್‌ ಹಂತಕರಿಗೆ ಸಿಖ್ ಕಾರ್ಯಕರ್ತ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ನ್ಯೂಯಾರ್ಕ್ ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನೀಡಿದ್ದರು. ಹಂತಕರು  ಪನ್ನೂನ್ ಮನೆಯಲ್ಲಿದ್ದಾರೆ ಎಂದು ಖಚಿತಪಡಿಸಿದ ತಕ್ಷಣ ಮುಂದಕ್ಕೆ ತನ್ನ ಕೆಲಸ ಮಾಡಬಹುದು ಎಂದು ಸೂಚಿಸಿದ್ದರು ಎನ್ನಲಾಗಿದೆ.

ಯಾದವ್ ಅವರ ಗುರುತು ಮತ್ತು ಸಂಬಂಧವು ಈ ಹಿಂದೆ ವರದಿಯಾಗಿಲ್ಲ, ಪನ್ನೂನ್‌ ಹತ್ಯೆಯ ಯೋಜನೆಯನ್ನು ಅಂತಿಮವಾಗಿ ಯುಎಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಭಾರತೀಯ ಅಧಿಕಾರಿಯಿಂದಲೇ ನಿರ್ದೇಶಿಸಲ್ಪಟ್ಟಿದೆ ಎಂಬುದಕ್ಕೆ ಇಲ್ಲಿಯವರೆಗಿನ ಅತ್ಯಂತ ಸ್ಪಷ್ಟವಾದ ಪುರಾವೆಗಳನ್ನು  ಯುಎಸ್‌ ಒದಗಿಸುತ್ತದೆ. ಅದು ಮೋದಿಯ ಆಂತರಿಕ ವಲಯಕ್ಕೆ ಸಂಭಾವ್ಯ ಸಂಪರ್ಕಗಳ ಬಗ್ಗೆ ಬೊಟ್ಟು ಮಾಡಿದೆ.

ಅಮೆರಿಕದಲ್ಲಿ ನೆಲೆ ನಿಂತಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ಅಧಿಕಾರಿ ವಿಕ್ರಮ್ ಯಾದವ್, ಬಾಡಿಗೆ ಹಂತಕರಿಗೆ ಸೂಚನೆ ನೀಡಿದ್ದರು ಮತ್ತು ಪನ್ನೂನ್ ಹತ್ಯೆ ಕಾರ್ಯಾಚರಣೆಯನ್ನು ಆ ಸಮಯದಲ್ಲಿ ರಾ ಮುಖ್ಯಸ್ಥರಾಗಿದ್ದ ಸಮಂತ್ ಗೋಯಲ್ ಅನುಮೋದಿಸಿದ್ದರು ಎಂದು ಅಮೆರಿಕದ ಗುಪ್ತಚರ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರು ಸಿಖ್ ಕಾರ್ಯಕರ್ತ ಪನ್ನೂನ್ ಹತ್ಯೆ ಸಂಚಿನ ಬಗ್ಗೆ ಬಹುಶಃ ತಿಳಿದಿದ್ದರು ಎಂದು ಯುಎಸ್ ಬೇಹುಗಾರಿಕಾ ಸಂಸ್ಥೆಗಳು ಹೇಳಿದೆ. ಆದರೆ ಇದಕ್ಕೆ ಯಾವುದೇ ಸ್ಪಷ್ಟ ಪುರಾವೆಯನ್ನು ನೀಡಿಲ್ಲ. ಈ ಬಗ್ಗೆ ಮಾಹಿತಿ ಕೋರಿ ಅಜಿತ್‌ ದೋವಲ್ ಅಥವಾ ಗೋಯಲ್‌ಗೆ ವಾಷಿಂಗ್‌ ಟನ್‌ ಪೋಸ್ಟ್‌ ಸಂಪರ್ಕಿಸಿದ್ದರೂ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.

ಭಾರತವು ಯುಎಸ್ ನೆಲದಲ್ಲಿ ಹತ್ಯೆಯನ್ನು ಮಾಡುವಂತಹ ಅಪಯಾಕಾರಿ ಪ್ರಯತ್ನವನ್ನು ಏಕೆ ಮಾಡುತ್ತದೆ ಎಂದು ಕೇಳಿದಾಗ, ಅವರು ಅದರಿಂದ ಪಾರಾಗಬಹುದು ಎಂದು ಭಾವಿಸಿದ್ದರು ಎಂದು ಭದ್ರತಾ ಅಧಿಕಾರಿಯೋರ್ವರು ಹೇಳಿದ್ದಾರೆ.

ಜೂನ್‌ನಲ್ಲಿ ವ್ಯಾಂಕೋವರ್ ಉಪನಗರದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿತ್ತು. ಕೆನಡಾದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿವಾದದ ಮಧ್ಯೆಯೇ ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಅವರ ಹತ್ಯೆಯನ್ನು ಮಾಡುವ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ಕೂಡ ಹೇಳಿಕೊಂಡಿತ್ತು.

ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌, ಹರ್ದೀಪ್ ಸಿಂಗ್ ನಿಜ್ಜರ್‌ನಂತೆ ದಶಕಗಳ ಕಾಲದ ಸಿಖ್‌ ಪ್ರತ್ಯೇಕವಾದಿ ಪ್ರತಿಪಾದಕನಾಗಿದ್ದಾನೆ. ಪನ್ನೂನ್ ಗಾರ್ಡಿಯನ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕೆನಡಾದಲ್ಲಿರುವ ಭಾರತೀಯ ಅಧಿಕಾರಿಗಳು ನಿಜ್ಜರ್ ಹತ್ಯೆಯ ತನಿಖೆಯನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಿಜ್ಜರ್‌ ಗುಂಡೇಟಿಗೆ ಬಲಿಯಾಗಿ 5 ತಿಂಗಳಾದರೂ ಯಾರನ್ನೂ ಬಂಧಿಸಲಾಗಿಲ್ಲ. ಸರಣಿ ಹತ್ಯೆಗಳ ಈ ತನಿಖೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಟೊರೊಂಟೊ ಅಥವಾ ವ್ಯಾಂಕೋವರ್‌ನಲ್ಲಿ ನಡೆದ ಸರಳವಾದ ಕೊಲೆಯಲ್ಲ. ಇದು ಖಲಿಸ್ತಾನ್ ಪರ ಕಾರ್ಯಕರ್ತನ ಸುಸಂಘಟಿತ ಕೊಲೆಯಾಗಿದೆ ಎಂದು ಹೇಳಿದ್ದರು.

ಭಾರತದ ಪ್ರಜೆ ನಿಖಿಲ್ ಗುಪ್ತಾ ಈ ಪ್ರಕರಣದಲ್ಲಿ ಷಾಮೀಲಾಗಿದ್ದಾರೆ ಎಂಬ ಸುಳಿವನ್ನು ಅಮೆರಿಕದ ಅಧಿಕಾರಿಗಳು ಈ ಹಿಂದೆ ನೀಡಿದ್ದರು. ಭಾರತೀಯ ಅಧಿಕಾರಿಗಳ ಸೂಚನೆ ಮೇರೆಗೆ ಅವರು ಕಾರ್ಯ ನಿರ್ವಹಿಸಿದ್ದರು ಎಂದು ಆಪಾದಿಸಲಾಗಿತ್ತು. ಆ ಬಳಿಕ ಅವರನ್ನು ಬಂಧಿಸಲಾಗಿದ್ದು, ಪ್ರಸ್ತುತ ಅವರು ಪರುಗ್ವೆಯ ಜೈಲಿನಲ್ಲಿದ್ದಾರೆ. ಈ ಕುರಿತು ತನಿಖೆ ನಡೆಸಲು ಭಾರತ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಭಾರತೀಯ ಅಧಿಕಾರಿಗಳ ಪಾತ್ರ ಕುರಿತಂತೆ ಅಮೆರಿಕ ಹಂಚಿಕೊಂಡ ಮಾಹಿತಿಗಳ ಬಗ್ಗೆ ತನಿಖೆ ನಡೆಸಲು ಸಮಿತಿ ನೇಮಿಸಿದ್ದರೂ, ಇದು ಭಾರತದ ಭದ್ರತೆಗೆ ಸಂಬಂಧಪಟ್ಟ ವಿಚಾರ ಎಂದು ಹೇಳಿ ಈ ಸಂಬಂಧ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ಇದನ್ನು ಓದಿ: ಗಾಝಾ ಹತ್ಯಾಕಾಂಡ: ನೆತನ್ಯಾಹು ಸೇರಿ ಇಸ್ರೇಲ್‌ ಅಧಿಕಾರಿಗಳ ಬಂಧನಕ್ಕೆ ವಾರೆಂಟ್‌ ಜಾರಿ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...