Homeಅಂತರಾಷ್ಟ್ರೀಯಗಾಝಾ ಹತ್ಯಾಕಾಂಡ: ನೆತನ್ಯಾಹು ಸೇರಿ ಇಸ್ರೇಲ್‌ ಅಧಿಕಾರಿಗಳ ಬಂಧನಕ್ಕೆ ವಾರೆಂಟ್‌ ಜಾರಿ ಸಾಧ್ಯತೆ

ಗಾಝಾ ಹತ್ಯಾಕಾಂಡ: ನೆತನ್ಯಾಹು ಸೇರಿ ಇಸ್ರೇಲ್‌ ಅಧಿಕಾರಿಗಳ ಬಂಧನಕ್ಕೆ ವಾರೆಂಟ್‌ ಜಾರಿ ಸಾಧ್ಯತೆ

- Advertisement -
- Advertisement -

ಕಳೆದ ಆರು ತಿಂಗಳಿನಿಂದ ಗಾಝಾದಲ್ಲಿಇಸ್ರೇಲ್‌ ನಡೆಸುತ್ತಿರುವ ಹತ್ಯಾಕಾಂಡವನ್ನು’ಯುದ್ಧ ಅಪರಾಧ’ ಮತ್ತು ‘ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಹಿರಿಯ ಅಧಿಕಾರಿಗಳ ಬಂಧನಕ್ಕೆ ವಾರೆಂಟ್‌ ಜಾರಿ ಮಾಡುವ ಸಾಧ್ಯತೆ ಇದೆ.

ಇಸ್ರೇಲ್‌ ಉಂಟು ಮಾಡಿದ ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧದ ಬಗ್ಗೆ  ಐಸಿಸಿ ತನಿಖೆ ನಡೆಸುತ್ತಿದ್ದು ಆರೋಪ ಸಾಬೀತಾದರೆ ಯುದ್ಧಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಬಹುದು. ವಿಧ್ವಂಸಕ ಮಿಲಿಟರಿ ದಾಳಿ ಹಿನ್ನೆಲೆ ಐಸಿಸಿ ಇಸ್ರೇಲ್‌ ಮೇಲೆ ಯುದ್ಧ ಅಪರಾಧ, ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ನರಮೇಧಗಳ ಆರೋಪವನ್ನು ಹೊರಿಸಬಹುದಾಗಿದೆ. ಗಾಝಾದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಇಸ್ರೇಲ್‍ನ ಉನ್ನತ  ಅಧಿಕಾರಿಗಳು ಮತ್ತು ಸೇನಾಧಿಕಾರಿಗಳ ವಿರುದ್ಧ ಐಸಿಸಿ ಶೀಘ್ರವೇ ಬಂಧನ ವಾರಂಟ್ ಜಾರಿಗೊಳಿಸಬಹುದು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ಇದರ ಬೆನ್ನಲ್ಲಿ ಇಸ್ರೇಲ್‍ನ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಝ್ ` ತೀವ್ರವಾದ ಯೆಹೂದಿ ವಿರೋಧಿ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಇಸ್ರೇಲ್ ರಾಯಭಾರಿ ಕಚೇರಿಗಳಿಗೆ ಸೂಚಿಸಲಾಗಿದೆ’ ಎಂದಿದ್ದಾರೆ. ನ್ಯಾಯಾಲಯವು ಹಿರಿಯ ಇಸ್ರೇಲ್‌ ರಾಜಕೀಯ ಮತ್ತು ಭದ್ರತಾ ಅಧಿಕಾರಿಗಳ ವಿರುದ್ಧ ಬಂಧನ ವಾರಂಟ್‌ಗಳನ್ನು ನೀಡುವುದನ್ನು ತಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಕಾಟ್ಜ್ ಹೇಳಿದರು. ನಾವು ತಲೆಬಾಗುವುದಿಲ್ಲ ಮತ್ತು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಯಾವುದೇ ಐಸಿಸಿ ನಿರ್ಧಾರಗಳು ಇಸ್ರೇಲ್‌ನ ಕ್ರಮಗಳ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ಅಪಾಯಕಾರಿ ಪೂರ್ವನಿದರ್ಶನವನ್ನು ನೀಡುತ್ತದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಐಸಿಸಿ ಮತ್ತು ಹಮಾಸ್ ಈ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇಸ್ರೇಲ್ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಸದಸ್ಯತ್ವ ಹೊಂದಿಲ್ಲ,  ಆದರೆ ಪ್ಯಾಲೇಸ್ತೀನ್‌ ಪ್ರದೇಶಗಳು 2015ರಲ್ಲಿ ಸದಸ್ಯ ರಾಷ್ಟ್ರದ ಸ್ಥಾನಮಾನ ಪಡೆದಿದೆ. ಅಕ್ಟೋಬರ್‌ನಲ್ಲಿ ICC ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್, ಇಸ್ರೇಲ್‌ನಲ್ಲಿ ಹಮಾಸ್ ಹೋರಾಟಗಾರರು ಮತ್ತು ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ಪಡೆಗಳು ಮಾಡಿದ ಯಾವುದೇ ಸಂಭಾವ್ಯ ಯುದ್ಧಾಪರಾಧಗಳ ಬಗ್ಗೆ ತನಿಖೆ ನ್ಯಾಯಾಲಯದ ನ್ಯಾಯವ್ಯಾಪ್ತಿಗೆ ಒಳಪಟ್ಟಿದೆ ಎಂದು ಹೇಳಿದೆ. ಗಾಝಾದಲ್ಲಿ ನಡೆದಿರುವ ಯಾವುದೇ ಅಪರಾಧಗಳ ಕುರಿತು ತಮ್ಮ ತಂಡವು ಸಕ್ರಿಯವಾಗಿ ತನಿಖೆ ನಡೆಸುತ್ತಿದೆ ಮತ್ತು ಕಾನೂನನ್ನು ಉಲ್ಲಂಘಿಸಿದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಾನ್ ಹೇಳಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್‌ ಮೇಲೆ ದಾಳಿ ನಡೆಸಿತ್ತು, ಇದರಲ್ಲಿ 1,200 ಜನರು ಕೊಲ್ಲಲ್ಪಟ್ಟಿದ್ದರು.   253 ಜನರನ್ನು ಒತ್ತೆಯಾಳುಗಳಾಗಿ ಇಟ್ಟು ಕೊಳ್ಳಲಾಗಿತ್ತು. ಆ ಬಳಿಕ ಯುದ್ಧ ಘೋಷಿಸಿ ಇಸ್ರೇಲ್‌ ಗಾಝಾ ಮೇಲೆ ದಾಳಿ ನಡೆಸಿದ್ದು, ಈವರೆಗೆ 34,000ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.

ಇದನ್ನು ಓದಿ: ಕೋವಿಶೀಲ್ಡ್ ‘ಅಪರೂಪದ ಅಡ್ಡ ಪರಿಣಾಮ’ ಉಂಟುಮಾಡಬಹುದು ಎಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...