ಫೈಜರ್/ಬಯೋಟೆಕ್ ಕೊರೊನಾ ಲಸಿಕೆ ಪಡೆದ ನಂತರ 12,400 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಪ್ರಕರಣ ಇಸ್ರೇಲ್‌ನಲ್ಲಿ ನಡೆದಿದೆ. ಜಾಗತಿಕವಾಗಿ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿಯೂ ಲಸಿಕೆ ನೀಡಲಾಗುತ್ತಿತ್ತು.
ಫೈಜರ್‌ನ ಲಸಿಕೆ ಹಾಕಿದ ನಂತರ ಇಸ್ರೇಲ್‌ನ ಆರೋಗ್ಯ ಸಚಿವಾಲಯವು 189,000 ಜನರನ್ನು ಪರೀಕ್ಷಿಸಿತು. ಇವರಲ್ಲಿ ಶೇಕಡಾ 6.6 ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಇತ್ತೀಚೆಗೆ, ಸಾಂಕ್ರಾಮಿಕ ರೋಗದ ರಾಷ್ಟ್ರೀಯ ಸಂಯೋಜಕರಾದ ನಾಚ್ಮನ್ ಆಶ್, “ಫೈಜರ್ ಲಸಿಕೆ ನಾವು ಅಂದುಕೊಂಡಿದ್ದಕ್ಕಿಂತ ಕಡಿಮೆ ಪರಿಣಾಮಕಾರಿಯಾಗಿದೆ” ಎಂದು ಹೇಳಿದ್ದರು ಎಂಬುದಾಗಿ ‘ವಿಯೋನ್’ ವರದಿ ಮಾಡಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶ: ನಮ್ಮ ಭೂ ಪ್ರದೇಶದಲ್ಲಿ ಗ್ರಾಮ ನಿರ್ಮಿಸಿದ್ದೇವೆ ಎಂದ ಚೀನಾ!
ಡಿಸೆಂಬರ್ 19 ರಿಂದ ಇಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಲಾಗಿತ್ತು. ಇದರ ಭಾಗವಾಗಿ ವೃದ್ಧರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಮೊದಲ ಆದ್ಯತೆ ನೀಡಲಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಒಂದು ತಿಂಗಳಿನಿಂದ ಲಸಿಕೆ ನೀಡಲಾಗುತ್ತಿದ್ದು, 9 ದಶಲಕ್ಷ ಜನಸಂಖ್ಯೆಯಲ್ಲಿ 2.2 ದಶಲಕ್ಷ ಜನರಿಗೆ ಈಗಾಗಲೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಯುಲಿ ಎಡೆಲ್‌ಸ್ಟೈನ್ ಮಂಗಳವಾರ ಹೇಳಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗ ದೇಶದಲ್ಲಿ ಮೂರನೆ ಲಾಕ್‌ಡೌನ್ ಅನ್ನು ವಿಧಿಸಲಾಗಿದೆ. ಕೊರೊನಾ ಪ್ರಾರಂಭವಾದಾಗಿನಿಂದ ಇಸ್ರೇಲ್‌ನಲ್ಲಿ ಅರ್ಧ ಮಿಲಿಯನ್‌ಗೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 4,005 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಖಾತೆ ಬದಲಾವಣೆ: ಯಡಿಯೂರಪ್ಪಗೆ ಸೆಡ್ಡು ಹೊಡೆದು ಶೆಟ್ಟರ್ ಪಾಳಯಕ್ಕೆ ಜಿಗಿದರೆ ಮಾಧುಸ್ವಾಮಿ?