Homeಅಂತರಾಷ್ಟ್ರೀಯನಿಷೇಧ ತೆರವು; ಶನಿವಾರದಿಂದ ದುಬೈಗೆ ಏರ್ ಇಂಡಿಯಾ ಸೇವೆ ಪ್ರಾರಂಭ

ನಿಷೇಧ ತೆರವು; ಶನಿವಾರದಿಂದ ದುಬೈಗೆ ಏರ್ ಇಂಡಿಯಾ ಸೇವೆ ಪ್ರಾರಂಭ

ದುಬೈ ವಿಮಾನಯಾನ ಪ್ರಾಧಿಕಾರ ಶುಕ್ರವಾರದಿಂದ 15 ದಿನಗಳವರೆಗೆ ಏರ್ ಇಂಡಿಯಾ ವಿಮಾನಗಳನ್ನು ನಿಷೇಧಿಸಿತ್ತು.

- Advertisement -
- Advertisement -

ಕೊರೊನಾ ಸೋಂಕಿದ್ದ ಇಬ್ಬರು ಪ್ರಯಾಣಿಕರನ್ನು ವಿಮಾನಯಾನಕ್ಕೆ ಅನುಮತಿ ನೀಡಿದ ಕಾರಣಕ್ಕೆ ದುಬೈ ಏವಿಯೇಷನ್ ಅಥಾರಿಟಿ(DCA) ಏರ್ ಇಂಡಿಯಾಗೆ ವಿಧಿಸಿದ್ದ 15 ದಿನಗಳ ನಿಷೇಧವನ್ನು ತೆರವುಗೊಳಿಸಲಾಗಿದ್ದು, ಶನಿವಾರದಿಂದ ದುಬೈಗೆ ವಿಮಾನಯಾನಗಳನ್ನು ಪುನರಾರಂಭವಾಗಲಿದೆ.

ಸೇವೆಯನ್ನು ಪುನಃಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್‌ ಹೊಂದಿರುವ ಇಬ್ಬರು ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡಿದ್ದ ಕಾರಣಕ್ಕೆ DCA ಶುಕ್ರವಾರದಿಂದ 15 ದಿನಗಳವರೆಗೆ ಏರ್ ಇಂಡಿಯಾ ವಿಮಾನಗಳನ್ನು ನಿಷೇಧಿಸಿತ್ತು.

ಇದನ್ನೂ ಓದಿ: ಅದಾನಿಗೆ ವಿಮಾನ ನಿಲ್ದಾಣ ನಿರ್ವಹಣೆ ವಿರುದ್ದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಈ ಹಿಂದೆ ಕೂಡಾ ಇದೇ ರೀತಿಯ ಘಟನೆ ನಡೆದ ಬಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಮತ್ತೇ ಕೂಡಾ ಘಟನೆ ಮರುಕಳಿಸಿದ್ದಕ್ಕೆ ಶುಕ್ರವಾರ ನಿಷೇಧ ಹೇರಲಾಗಿತ್ತಾದರು, ಇದೀಗ ಶನಿವಾರದಿಂದ ನಿಷೇಧವನ್ನು ತೆರವುಗೊಳಿಸಲಾಗಿದೆ.

ದೆಹಲಿ ಮತ್ತು ಜೈಪುರದ ಪ್ರಯಾಣಿಕರಿಬ್ಬರಿಗೆ ಕೊರೊನಾ ಪಾಸಿಟಿವ್‌ ಆಗಿದ್ದ ಪ್ರಯಾಣಿಕರನ್ನು ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿತ್ತು. ಪ್ರಯಾಣಿಕರ ವೈದ್ಯಕೀಯ ಚಿಕಿತ್ಸೆ ಮತ್ತು ಕ್ವಾರಂಟೈನ್ ಶುಲ್ಕವನ್ನು ಏರ್ ಇಂಡಿಯಾ ಭರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ (DCA) ತಿಳಿಸಿತ್ತು.

ಇದನ್ನೂ ಓದಿ: ಕೋಯಿಕೋಡ್ ವಿಮಾನ ದುರಂತ ಅಪಘಾತವಲ್ಲ, ಭೀಕರ ಕೊಲೆ!: ಕ್ಯಾಪ್ಟನ್ ಮೋಹನ್ ರಂಗನಾಥನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...