Homeಮುಖಪುಟಶೋಪಿಯಾನ ಯುವಕರ ಹತ್ಯೆಯಲ್ಲಿ ಸೈನಿಕರು ಕಾನೂನು ಉಲ್ಲಂಘನೆ ಮಾಡಿದ್ದಾರೆ: ಭಾರತೀಯ ಸೇನೆ

ಶೋಪಿಯಾನ ಯುವಕರ ಹತ್ಯೆಯಲ್ಲಿ ಸೈನಿಕರು ಕಾನೂನು ಉಲ್ಲಂಘನೆ ಮಾಡಿದ್ದಾರೆ: ಭಾರತೀಯ ಸೇನೆ

ಮೂವರು ಯುವಕರನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆಗೈಯ್ಯಲಾಗಿತ್ತು ಎಂಬ ಆರೋಪವನ್ನು ಅವರ ಕುಟುಂಬಗಳು ಮಾಡಿದ್ದವು.

- Advertisement -
- Advertisement -

ಶೋಪಿಯಾನದಲ್ಲಿ ಮೂವರು ಯುವಕರನ್ನು ಹತ್ಯೆ ಮಾಡಿದ್ದ ಘಟನೆಯಲ್ಲಿ ಕಾನೂನು ಉಲ್ಲಂಘನೆ ಕಂಡುಬಂದಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಸೈನಿಕರು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(AFSPA) ಉಲ್ಲಂಘಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ಜುಲೈ 18 ರಂದು ಸೈನ್ಯವು ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಎಂಬ ಅನುಮಾನದ ಮೇಲೆ ಮೂವರು ಯುವಕರನ್ನು ಕೊಂದಿತ್ತು. ಈ ಘಟನೆಯ ತನಿಖೆ ನಡೆಸಲಾಗಿತ್ತು.

ಇದನ್ನೂ ಓದಿ: ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ

ಮಿಲಿಟರಿ ದಳದಲ್ಲಿ ನಡೆಸಿದ ಆಂತರಿಕ ತನಿಖೆಯಲ್ಲಿ ಈ ವಿಷಯ ಕಂಡುಕೊಂಡಿದ್ದು, ಯುವಕರನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆಗೈಯ್ಯಲಾಗಿತ್ತು ಎಂಬ ಆರೋಪವನ್ನು ಅವರ ಕುಟುಂಬಗಳು ಮಾಡಿದ್ದವು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ಆಗ ಸೈನ್ಯವು ಈ ವಿಷಯವನ್ನು ಪರಿಶೀಲಿಸಿತ್ತು.

1990 ರ AFSPA ಕಾಯ್ದೆಯು ಸೈನ್ಯವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಈ ಕಾಯ್ದೆಯ ಉಲ್ಲಂಘನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ ಎಂದು ಸೈನ್ಯವು ತಿಳಿಸಿದೆ.

 

ರಾಜೌರಿಯ ನಿವಾಸಿಗಳಾದ ಇಮ್ತಿಯಾಜ್ ಅಹ್ಮದ್, ಅಕ್ಬರ್ ಅಹ್ಮದ್ ಮತ್ತು ಮೊಹಾದ್ ಇಬಾರ್ ಎಂಬವರನ್ನು ಸೈನ್ಯದಿಂದ ಕೊಲ್ಲಲ್ಪಟ್ಟಿದ್ದರು.

ಇದನ್ನೂ ಓದಿ: ಲಡಾಖ್‌ನಿಂದ ಚೀನಾ ಸೈನ್ಯವನ್ನು ಯಾವಾಗ ಹೊರಗೆ ಹಾಕುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...