Homeಮುಖಪುಟಉಕ್ರೇನ್‌ಗೆ ಪರಮಾಣು ಬೆದರಿಕೆಯೊಡ್ಡಿದ ರಷ್ಯಾ; ಶಾಂತಿ ಮಾತುಕತೆ ನಡೆಸಲು ಉಭಯ ರಾಷ್ಟ್ರಗಳಿಗೆ ಚೀನಾ ಕರೆ

ಉಕ್ರೇನ್‌ಗೆ ಪರಮಾಣು ಬೆದರಿಕೆಯೊಡ್ಡಿದ ರಷ್ಯಾ; ಶಾಂತಿ ಮಾತುಕತೆ ನಡೆಸಲು ಉಭಯ ರಾಷ್ಟ್ರಗಳಿಗೆ ಚೀನಾ ಕರೆ

- Advertisement -
- Advertisement -

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಲ್ಲಿ ಪರಮಾಣು ಅಸ್ತ್ರಗಳನ್ನು ಬಳಸುವ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆದಷ್ಟು ಬೇಗ ಶಾಂತಿ ಮಾತುಕತೆ ನಡೆಸಲು ಉಭಯ ರಾಷ್ಟ್ರಗಳಿಗೆ ಚೀನಾ ಶುಕ್ರವಾರ ಕರೆ ನೀಡಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಮಾಡಿ ಇಂದಿಗೆ (ಫೆ.24) ಒಂದು ವರ್ಷ ಕಳೆಯುತ್ತಿದೆ. ಈ ಸಂದರ್ಭದಲ್ಲಿ ಬಿಕ್ಕಟ್ಟಿನ ”ರಾಜಕೀಯ ಇತ್ಯರ್ಥ”ದ ಕುರಿತು ರಷ್ಯಾ 12 ಅಂಶಗಳನ್ನು ಬಿಡುಗಡೆಗೊಳಿಸಿದೆ.

”ರಷ್ಯಾ ಮತ್ತು ಉಕ್ರೇನ್ ನಡುವೆ ಸಾಧ್ಯವಾದಷ್ಟು ಬೇಗ ನೇರ ಸಂವಾದವನ್ನು ಪುನರಾರಂಭಿಸಲು ಎಲ್ಲ ಪಕ್ಷಗಳು ಬೆಂಬಲಿಸಬೇಕು” ಎಂದು ಚೀನಾ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಪತ್ರಿಕೆ ಹೇಳಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಉಕ್ರೇನ್‌ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಚೀನಾ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಮಾತ್ರವಲ್ಲ, ಅವುಗಳನ್ನು ಬಳಕೆ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಕ್ರಮಕ್ಕೂ ವಿರೋಧ ವ್ಯಕ್ತಪಡಿಸಿದೆ.

”ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಾರದು ಮತ್ತು ಪರಮಾಣು ಯುದ್ಧಗಳನ್ನು ಮಾಡಬಾರದು. ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆ ಅಥವಾ ಬಳಕೆಯನ್ನು ವಿರೋಧಿಸಬೇಕು” ಎಂದು ಚೀನಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ದೆಹಲಿ: ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ ಬಹಿಷ್ಕರಿಸುವ ಪಟ್ಟಿಗೆ ಉಕ್ರೇನ್ ಸೇರ್ಪಡೆ

”ಎರಡು ದೇಶಗಳು ಹೀಗೆ ಯುದ್ಧದ ಸಂದರ್ಭದಲ್ಲಿ ಪರಮಾಣು ಬಳಸುವ ಮೂಲಕ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ. ಹಾಗಾಗಿ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾಗರಿಕರು ಅಥವಾ ನಾಗರಿಕ ಸೌಲಭ್ಯಗಳ ಮೇಲೆ ದಾಳಿ ಮಾಡುವುದನ್ನು ತಪ್ಪಿಸಬೇಕು” ಎಂದು ಚೀನಾ ಹೇಳಿದೆ.

ಮಿತ್ರ ರಾಷ್ಟ್ರ ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಉಳಿಸಿಕೊಂಡು ಈ ಯುದ್ಧದಲ್ಲಿ ತಟಸ್ಥವಾಗಿ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಚೀನಾ ಪ್ರಯತ್ನಿಸಿದೆ.

ಬುಧವಾರ ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ ಅವರು, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮಾಸ್ಕೋದಲ್ಲಿ ಭೇಟಿಯಾದರು.

ಈ ಬಗ್ಗೆ ಗುರುವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾತನಾಡಿದ್ದು, ”ಚೀನಾ ದೇಶ ಇದೀಗ ಉಕ್ರೇನ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು ಮತ್ತು ಕೆಲವು ಒಳ್ಳೆಯ ಸಂದೇಶಗಳನ್ನು ಕಳುಹಿಸಿದ್ದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.

”ನಾವು ಚೀನಾದೊಂದಿಗೆ ಸಭೆ ನಡೆಸಲು ಬಯಸುತ್ತೇವೆ. ಅವರು ನೀಡುವ ಅಂತಿಮ ತೀರ್ಮಾನಗಳನ್ನು ನೋಡಿದ ನಂತರ ನಾವು ನಮ್ಮ ತೀರ್ಮಾನಗಳನ್ನು ತಿಳಿಸುತ್ತೇವೆ” ಎಂದು ಝೆಲೆನ್ಸ್ಕಿ ಹೇಳಿದರು.

ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡಲು ಶುರುಮಾಡಿದಾಗಿನಿಂದ ಚೀನಾ ಪುಟಿನ್‌ಗೆ ರಾಜತಾಂತ್ರಿಕ ಮತ್ತು ಆರ್ಥಿಕ ಬೆಂಬಲವನ್ನು ನೀಡಿತ್ತು ಆದರೆ ಬಹಿರಂಗವಾಗಿ ಮಿಲಿಟರಿ ಸಹಾಯ ಅಥವಾ ಮಾರಕ ಶಸ್ತ್ರಾಸ್ತ್ರಗಳ ಪೂರೈಕೆ ವಿಚಾರದಿಂದ ದೂರವಿತ್ತು.

ಚೀನಾದ ರಾಜ್ಯ-ನಿಯಂತ್ರಿತ ಸಂಸ್ಥೆಗಳು, ಮಾರಕವಲ್ಲದ ಡ್ರೋನ್‌ಗಳು ಮತ್ತು ಇತರ ಉಪಕರಣಗಳನ್ನು ರಷ್ಯಾ ಮತ್ತು ಉಕ್ರೇನ್‌ಗೆ ಮಾರಾಟ ಮಾಡಿದೆ, ಆದರೆ ಮಾನವರಹಿತ ವೈಮಾನಿಕ ವಾಹನಗಳಂತಹ ಹೆಚ್ಚು-ಅಗತ್ಯವಿರುವ ಸರಬರಾಜುಗಳಿಗಾಗಿ ರಷ್ಯಾ ಇರಾನ್‌ನತ್ತ ಮುಖ ಮಾಡಿತು.

ಉತ್ತರ ಕೊರಿಯಾ, ರಾಕೆಟ್‌ಗಳು ಮತ್ತು ಫಿರಂಗಿ ಶೆಲ್‌ಗಳನ್ನು ಸಹ ಒದಗಿಸಿದೆ ಎಂದು ಅಮೆರಿಕ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...