Homeರಂಜನೆಕ್ರೀಡೆದೆಹಲಿ: ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ ಬಹಿಷ್ಕರಿಸುವ ಪಟ್ಟಿಗೆ ಉಕ್ರೇನ್ ಸೇರ್ಪಡೆ

ದೆಹಲಿ: ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ ಬಹಿಷ್ಕರಿಸುವ ಪಟ್ಟಿಗೆ ಉಕ್ರೇನ್ ಸೇರ್ಪಡೆ

- Advertisement -
- Advertisement -

ನವದೆಹಲಿಯಲ್ಲಿ ಮಾರ್ಚ್ ತಿಂಗಳು ನಡೆಯಲಿರುವ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ್ನು ಬಹಿಷ್ಕರಿಸುವ ದೇಶಗಳ ಪಟ್ಟಿಗೆ ಇದೀಗ ಉಕ್ರೇನ್ ಸೇರಿಕೊಂಡಿದೆ. ”ರಷ್ಯಾ ಮತ್ತು ಬೆಲಾರಸ್‌ನ ಬಾಕ್ಸರ್‌ಗಳ ಉಪಸ್ಥಿತಿಯಿಂದಾಗಿ ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದೆ. ಪುರುಷರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಸ್ಪರ್ಧಿಸುವುದಿಲ್ಲ” ಎಂದು ಉಕ್ರೇನ್ ಹೇಳಿದೆ.

ಉಕ್ರೇನ್‌ನ ಬಾಕ್ಸಿಂಗ್ ಫೆಡರೇಶನ್ (ಎಫ್‌ಬಿಯು) ಉಪಾಧ್ಯಕ್ಷ ಒಲೆಗ್ ಇಲ್ಚೆಂಕೊ ಅವರು, ”ನಮ್ಮ ದೇಶದ ಬಾಕ್ಸರ್‌ಗಳು ಆಕ್ರಮಣಕಾರಿ ದೇಶಗಳ ಕ್ರೀಡಾಪಟುಗಳ ಜೊತೆ ಒಂದೇ ವೇದಿಕೆಯಲ್ಲಿ ಸ್ಪರ್ಧಿಸುವುದಿಲ್ಲ” ಎಂದು ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಶುಕ್ರವಾರಕ್ಕೆ ಒಂದು ವರ್ಷ ಕಳೆಯುತ್ತದೆ. ಈ ದಾಳಿ ನಂತರ ಇಂಟರ್ನ್ಯಾಷನಲ್ ಬಾಕ್ಸಿಂಗ್ ಫೆಡರೇಶನ್ ಹೆಚ್ಚು ಸಮಸ್ಯೆಗಳನ್ನು ಎದುರಿಸಿದೆ. ”ಆಕ್ರಮಣಕಾರಿ ದೇಶಗಳಾದ ರಷ್ಯಾ ಮತ್ತು ಬೆಲಾರಸ್‌ನ ಪ್ರತಿನಿಧಿಗಳು ಸ್ಪರ್ಧಿಸುವ ವೇದಿಕೆಯಲ್ಲಿ ನಮ್ಮ ಕ್ರೀಡಾಪಟುಗಳು ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಉಕ್ರೇನ್ ಪ್ರತಿನಿಧಿಗಳು ಸ್ಪರ್ಧಿಸುವುದಿಲ್ಲ” ಇದು ನಮ್ಮ ಸ್ಪಷ್ಟ ಉತ್ತರವಾಗಿದೆ ಎಂದು ಇಲ್ಚೆಂಕೊ ಹೇಳಿದ್ದಾರೆ.

ಇದನ್ನೂ ಓದಿ: ಕಲಾಪದ ವೇಳೆ ಮೇಯರ್ ಒಬೆರಾಯ್ ಮೇಲೆ ಬಿಜೆಪಿಗರಿಂದ ಹಲ್ಲೆಗೆ ಯತ್ನ: ಆರೋಪ

ಕ್ರೆಮ್ಲೆವ್ ಅವರು ಕಳೆದ ಅಕ್ಟೋಬರ್‌ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಶಿಫಾರಸುಗಳಿಗೆ ವಿರುದ್ಧವಾಗಿ ನಡೆದುಕೊಂಡರು ಮತ್ತು ರಷ್ಯಾ ಮತ್ತು ಬೆಲಾರಸ್‌ನ ಬಾಕ್ಸರ್‌ಗಳು ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ತಮ್ಮದೇ ಧ್ವಜದ ಅಡಿಯಲ್ಲಿ ಸ್ಪರ್ಧಿಸುವ ನಿಷೇಧವನ್ನು ಅವರು ಉಲ್ಲಂಘಿಸಿದರು.

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ರಷ್ಯಾ ಮತ್ತು ಬೆಲಾರಸ್‌ನ ಬಾಕ್ಸರ್‌ಗಳ ಸೇರ್ಪಡೆಯಿಂದಾಗಿ ಹಲವು ದೇಶಗಳು ಹಿಂದೆ ಸರಿಯಲು ನಿರ್ಧರಿಸಿವೆ. ಮಾರ್ಚ್ 15 ರಿಂದ 26 ರವರೆಗೆ ನವದೆಹಲಿಯ ಕೆಡಿ ಜಾಧವ್ ಕ್ರೀಡಾಂಗಣ ನಡೆಯಲಿರುವ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಿಂದ ಉಕ್ರೇನ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಸ್ವಿಟ್ಜರ್ಲೆಂಡ್, ಪೋಲೆಂಡ್, ನೆದರ್ಲ್ಯಾಂಡ್ಸ್, ಐರ್ಲೆಂಡ್, ಜೆಕ್ ರಿಪಬ್ಲಿಕ್, ಸ್ವೀಡನ್ ಮತ್ತು ಕೆನಡಾ ದೇಶಗಳು ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿವೆ.

ಭಾರತದ ಬಾಕ್ಸಿಂಗ್ ಫೆಡರೇಶನ್ ಬುಧವಾರ ಮಾಹಿತಿ ನೀಡಿದ್ದು, 74 ದೇಶಗಳ 350ಕ್ಕೂ ಹೆಚ್ಚು ಬಾಕ್ಸರ್‌ಗಳು ಈವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...