Homeರಂಜನೆಕ್ರೀಡೆರೋಚಕ ಘಟ್ಟ ತಲುಪಿದ ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ಪ್ಲೇ-ಆಫ್ ಪ್ರವೇಶ ಸುಲಭವಲ್ಲ!

ರೋಚಕ ಘಟ್ಟ ತಲುಪಿದ ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ಪ್ಲೇ-ಆಫ್ ಪ್ರವೇಶ ಸುಲಭವಲ್ಲ!

- Advertisement -
- Advertisement -

ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಇದೀಗ ರೋಚಕ ಘಟ್ಟ ತಲುಪಿದೆ. ಈಗಾಗಲೇ ಪಟ್ನಾ ಪೈರೇಟ್ಸ್, ದಬಾಂಗ್ ಡೆಲ್ಲಿ ಮತ್ತು ಯು.ಪಿ ಯೋಧ ತಂಡಗಳು ಪ್ಲೇ-ಆಫ್‌ ಪ್ರವೇಶಿಸಿವೆ. ಪ್ಲೇ-ಆಫ್‌ ನ ಉಳಿದ ಮೂರು ಸ್ಥಾನಕ್ಕಾಗಿ 5 ತಂಡಗಳು ಪೈಪೋಟಿ ನಡೆಸುತ್ತಿವೆ. ಪ್ರತಿಯೊಂದು ತಂಡವೂ ಪ್ಲೇ-ಆಫ್‌ಗೆ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿವೆ. ಈ ನಡುವೆ ಗುರುವಾರ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆಲುವನ್ನೇನೋ ಸಾಧಿಸಿದೆ. ಆದರೂ ಪ್ಲೇ-ಆಫ್ ಪ್ರವೇಶ ಮಾತ್ರ ಇನ್ನೂ ಖಚಿತವಾಗಿಲ್ಲ. ಬದಲಾಗಿ ಇತರೆ ತಂಡಗಳ ಸೋಲು-ಗೆಲುವಿನ ಮೇಲೆ ಬುಲ್ಸ್ ಭವಿಷ್ಯ ನಿರ್ಧಾರವಾಗಲಿದೆ.

ಅಂಕಪಟ್ಟಿ ಲೆಕ್ಕಾಚಾರ

ಕಬಡ್ಡಿ ಅಂಕಪಟ್ಟಿಯ ಮೊದಲ ಮೂರು ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ (81 ಅಂಕ) ದಬಾಂಗ್ ಡೆಲ್ಲಿ(70 ಅಂಕ) ಮತ್ತು ಯುಪಿ ಯೋಧ (68 ಅಂಕ) ಈಗಾಗಲೇ ಪ್ಲೇ-ಆಫ್ಗೆ ಬಹುತೇಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಆದರೆ, 4ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಈಗಾಗಲೇ ತನ್ನ ಎಲ್ಲಾ ಪಂದ್ಯಗಳನ್ನೂ ಆಡಿದ್ದು 66 ಅಂಕಗಳನ್ನು ಗಳಿಸಲಷ್ಟೇ ಶಕ್ತವಾಗಿದೆ. ಬೇರೆ ಪ್ರತಿಸ್ಪರ್ಧಿ ತಂಡಗಳ ಸೋಲು ಬೆಂಗಳೂರು ಬುಲ್ಸ್ ಪ್ಲೇ-ಆಫ್‌ಗೆ ದಾರಿಯಾಗಲಿದೆ.

ತೆಲುಗು ಟೈಟನ್ಸ್, ಬೆಂಗಾಲ್ ವಾರಿಯರ್ಸ್, ಯು ಮುಂಬಾ ಮತ್ತು ತಮಿಳು ತಲೈವಾಸ್ ತಂಡಗಳು ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿವೆ. ಆದರೆ 63 ಅಂಕಗಳನ್ನು ಗಳಿಸಿರುವ ಹರ್ಯಾಣ ಸ್ಟೀಲರ್ಸ್ ಮತ್ತು 62 ಅಂಕಗಳನ್ನು ಗಳಿಸಿರುವ ಪಿಂಕ್ ಪ್ಯಾಂಥರ್ಸ್ ಕ್ರಮವಾಗಿ ಐದು-ಆರನೇ ಸ್ಥಾನದಲ್ಲಿದ್ದು ಈ ತಂಡಗಳು ಇನ್ನೂ ಒಂದು ಪಂದ್ಯನ್ನು ಆಡಬೇಕಿದೆ. 60 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿರುವ ಪುಣೇರಿ ಪಲ್ಟನ್ ಮತ್ತು 57 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡ ಇನ್ನೂ ಎರಡು ಪಂದ್ಯಗಳಲ್ಲಿ ಗೆಲುವಿಗಾಗಿ ಸೆಣಸಲಿದೆ. ಬೆಂಗಳೂರು ಬುಲ್ಸ್‌ನೊಂದಿಗೆ ಇಷ್ಟು ತಂಡಗಳು ಪ್ಲೇ-ಆಫ್‌ ಮೇಲೆ ಕಣ್ಣಿಟ್ಟಿವೆ.

photo courtesy: Pro kabaddi app

ಈ ತಂಡಗಳ ಪೈಕಿ ಪಿಂಕ್ ಪ್ಯಾಂಥರ್ಸ್, ಹರಿಯಾಣ ಸ್ಟೀಲರ್ಸ್, ಗುಜರಾತ್ ಜೈಂಟ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳಿಗೆ ಪ್ಲೇ-ಆಫ್ ಪ್ರವೇಶಿಸಲು ಸಾಕಷ್ಟು ಅವಕಾಶಗಳು ಇವೆ. ಒಂದು ವೇಳೆ ಈ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಗೆಲುವಿನ ಪ್ರದರ್ಶನ ನೀಡಿದರೆ ಬೆಂಗಳೂರು ಬುಲ್ಸ್ ಪ್ಲೇ-ಆಫ್ ಕನಸು ಬಹುತೇಕ ಭಗ್ನವಾದಂತೆಯೇ. ಆದರೆ ಮೇಲಿನವುಗಳಲ್ಲಿ ಎರಡು ತಂಡಗಳು ಹೊರಹೋದರೆ ಬೆಂಗಳೂರಿಗೆ ಅವಕಾಶ ತೆರೆದುಕೊಳ್ಳುತ್ತದೆ.

ಬೆಂಗಳೂರು ಬುಲ್ಸ್ ಪ್ಲೇ-ಆಫ್‌ ಕನಸು ನನಸಾಗಲು ಈ ತಂಡಗಳು ಸೋಲಬೇಕು

ಗುಜರಾತ್ ಜೈಂಟ್ಸ್ ತಂಡವು ಯು ಮುಂಬಾ ಮತ್ತು ತಮಿಳು ತಲೈವಾಸ್ ವಿರುದ್ದ ತನ್ನ ಉಳಿದ ಎರಡು ಪಂದ್ಯಗಳನ್ನು ಆಡಲಿದೆ. ಸದ್ಯ 57 ಅಂಕ ಹೊಂದಿರುವ ಅದು ಒಂದು ಪಂದ್ಯ ಸೋತರೂ ಪ್ಲೇ-ಆಫ್‌ ನಿಂದ ಹ ಹೊರ ಹೋಗುತ್ತದೆ.

ಜೈಪುರ್ ಪಿಂಕ್ ಪ್ಯಾಂಥರ್ಸ್ ಸದ್ಯ 21 ಪಂದ್ಯಗಳಿಂದ 62 ಅಂಕ ಪಡೆದಿದೆ. ಅದು ತನ್ನ ಕೊನೆಯ ಪಂದ್ಯವನ್ನು ಪುಣೇರಿ ಪಲ್ಟಾನ್ ವಿರುದ್ಧ ಎದುರಿಸಲಿದೆ. ಅಲ್ಲಿ ಸೋತರೆ ಅದು ಹೊರಬೀಳಲಿದೆ. ಏಕೆಂದರೆ ಪುಣೇರಿ ಪಲ್ಟಾನ್ ಈಗಾಗಲೇ 20 ಪಂದ್ಯಗಳಿಂದ 60 ಅಂಕ ಪಡೆದಿದೆ, ಒಂದು ಪಂದ್ಯ ಗೆದ್ದರೆ 65 ಅಂಕ ತನ್ನದಾಗಿಸಿಕೊಳ್ಳುತ್ತದೆ. ಅಲ್ಲದೆ ಇಂದು ಪುಣೇರಿ ಪಲ್ಟಾನ್ ಬೆಂಗಲ್ ವಾರಿಯರ್ಸ್ ವಿರುದ್ದ ಪಂದ್ಯವಾಡಲಿದ್ದು ಅದು ಗೆದ್ದರೆ ಪ್ಲೇ-ಆಫ್‌ ಸ್ಥಾನ ಖಚಿತ. ಎರಡೂ ಪಂದ್ಯ ಸೋತರೆ ಅದು ಟೂರ್ನಿಯಿಂದ ಹೊರಬೀಳಬೇಕಾಗುತ್ತದೆ.

ಹರಿಯಾಣ ಸ್ಟೀಲರ್ಸ್‌ ಕೂಡ 21 ಪಂದ್ಯಗಳಿಂದ 63 ಅಂಕ ಪಡೆದಿದ್ದು ತನ್ನ ಕೊನೆಯ ಪಂದ್ಯವನ್ನು ಬಲಿಷ್ಟ ಪಟ್ನಾ ಪೈರೇಟ್ಸ್ ವಿರುದ್ಧ ಆಡಬೇಕಿದೆ. ಅಲ್ಲಿ ಗೆದ್ದರೆ ಪ್ಲೇ-ಆಫ್‌ ಖಚಿತ. ಸೋತರೆ ಬೇರೆ ತಂಡಗಳ ಸೋಲಿಗಾಗಿ ಕಾಯಬೇಕಿದೆ. ಫೆಬ್ರವರಿ 19ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಲಿವೆ.

ಪ್ಲೇಆಫ್ ಪಂದ್ಯಾವಳಿ

ಪ್ಲೇಆಫ್‌ನ ಮೊದಲೆರಡು ಸ್ಥಾನಗಳು ನೇರವಾಗಿ ಸೆಮಿಫೈನಲ್ ತಲುಪಲಿವೆ. ಫೆಬ್ರವರಿ 21 ರಂದು 3 v/s 6 ನೇ ಸ್ಥಾನದ ತಂಡಗಳು ಮತ್ತು 4 v/s5 ನೇ ಸ್ಥಾನದ ತಂಡಗಳು ಎಲಿಮಿನೇಟರ್ ಪಂದ್ಯಗಳನ್ನು ಆಡಲಿವೆ. ಅಲ್ಲಿ ಗೆದ್ದವರು ಫೆಬ್ರವರಿ 23 ರಂದು ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಫೆಬ್ರವರಿ 25 ರಂದು ಫೈನಲ್ ಪಂದ್ಯ ನಡೆಯಲಿದೆ.


ಇದನ್ನೂ ಓದಿ: ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾಧ್ಯಮಗಳ ವಿರುದ್ಧ ರೋಹಿತ್‌ ಶರ್ಮಾ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...