Homeಮುಖಪುಟವಾಟ್ಸಾಪ್‌ನಲ್ಲಿ ಬರಲಿದೆ ಎಡಿಟ್ ಮಾಡುವ ಅವಕಾಶ

ವಾಟ್ಸಾಪ್‌ನಲ್ಲಿ ಬರಲಿದೆ ಎಡಿಟ್ ಮಾಡುವ ಅವಕಾಶ

- Advertisement -
- Advertisement -

ಜನಪ್ರಿಯ ಮೆಸೇಂಜಿಂಗ್ ತಾಣವಾದ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ವೈಶಿಷ್ಯಗಳನ್ನು ಪರಿಚಯಿಸುತ್ತಿದೆ. ವಿಶ್ವದಾದ್ಯಂತ 200 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಅದು ಸದ್ಯಕ್ಕೆ ಗುಂಪಿನ ಸದಸ್ಯರ ಮಿತಿಯನ್ನು 512 ರಿಂದ 1024 ಏರಿಸಿದ್ದು, ಮುಂದೆ ಎಡಿಟ್ ಅವಕಾಶ ನೀಡಲು ಮುಂದಾಗಿದೆ.

ಇದುವರೆಗೂ ವಾಟ್ಸಾಪ್ ಗುಂಪುಗಳಲ್ಲಿ 512 ಸದಸ್ಯರಿಗೆ ಮಾತ್ರ ಅವಕಾಶವಿತ್ತು. ಆದರೆ ಮತ್ತೊಂದು ಮೆಸೆಂಜಿಂಗ್ ತಾಣವಾದ ಟೆಲಿಗ್ರಾಂ 2 ಲಕ್ಷದವರೆಗೆ ಸದಸ್ಯರನ್ನು ಹೊಂದುವ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗುಂಪಿನ ಮಿತಿಯನ್ನು ಹೆಚ್ಚಿಸುವ ಬೇಡಿಕೆಯಿತ್ತು. ಅದನ್ನು ಪರಿಗಣಿಸಿರುವ ವಾಟ್ಸಾಪ್ ಸದ್ಯಕ್ಕೆ ಗುಂಪಿನ ಸದಸ್ಯರ ಮಿತಿಯನ್ನು 1024ಕ್ಕೆ ಏರಿಸಿದೆ.

ಮುಂದೆ ಬರಲಿದೆ ಎಡಿಟ್ ಆಯ್ಕೆ

ಫೇಸ್‌ಬುಕ್‌ನಲ್ಲಿ ನೀವು ಪೋಸ್ಟ್ ಮಾಡಿದ ಸಂದೇಶವನ್ನು ಮತ್ತೆ ಎಡಿಟ್ ಮಾಡುವ ಅವಕಾಶವಿದೆ. ಸದ್ಯ ವಾಟ್ಸಾಪಿನಲ್ಲಿ ಒಮ್ಮೆ ಸಂದೇಶ ಕಳುಹಿಸಿದರೆ ಅದನ್ನು ಮತ್ತೆ ತಿದ್ದುವ ಅವಕಾಶವಿಲ್ಲ. ಅದನ್ನು ಡಿಲೀಟ್ ಮಾಡಿ ಮತ್ತೆ ಬರೆಯಬೇಕಾದ ಅನಿವಾರ್ಯತೆಯಿದೆ. ಆ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ವಾಟ್ಸಾಪ್ ಕಂಪನಿಯು ಎಡಿಟ್ ಮಾಡುವ ಅವಕಾಶ ನೀಡುವುದಾಗಿ ಘೋಷಿಸಿದ್ದು ಅದರ ಮೇಲೆ ಕೆಲಸ ಮಾಡುತ್ತಿದೆ. ಆ ಸೇವೆ ಜಾರಿಯಾದಲ್ಲಿ ಕಳುಹಿಸಿದ ಸಂದೇಶದಲ್ಲಿ ಏನಾದರೂ ಬದಲಾವಣೆ ಇದ್ದರೆ 15 ನಿಮಿಷದೊಳಗೆ ಎಡಿಟ್ ಮಾಡಬಹುದಾಗಿದೆ. ಇದೇ ರೀತಿಯ ಎಡಿಟ್ ಆಯ್ಕೆ ಟ್ವಿಟರ್‌ನಲ್ಲಿ ಸಹ ತರಲು ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

ನೀವು ಯಾವುದೇ ಕಾಗುಣಿತ ಅಥವಾ ವ್ಯಾಕರಣದ ತಪ್ಪುಗಳನ್ನು ಸರಿಪಡಿಸಲು ಅಥವಾ ಕೆಲವು ಮಾಹಿತಿಯನ್ನು ಸೇರಿಸಲು ಅಥವಾ ತೆಗೆದುಹಾಕಲು ಬಯಸಿದರೆ ಎಡಿಟ್ ಮಾಡಬಹುದಾಗಿದೆ. ಈ ಹೊಸ ಫಿಚರ್ ಅನ್ನು ಟೆಸ್ಟಿಂಗ್ ಪ್ರೋಗ್ರಾಂನಲ್ಲಿ ನೋಂದಾಯಿಸಿದವರಿಗೆ ನೀಡಲಾಗಿದೆ ಎಂದು ವರದಿಯಾಗಿದೆ.

Undo ಆಯ್ಕೆ ಇರುವುದನ್ನು ಗಮನಿಸಿದ್ದೀರಾ?

ವಾಟ್ಸಾಪ್‌ನಲ್ಲಿ ಯಾವುದೇ ಕಾರಣಕ್ಕಾಗಿ ಸಂದೇಶವನ್ನು ನೀವು ಡಿಲೀಟ್ ಮಾಡಿದ್ದಲ್ಲಿ Undo ಆಯ್ಕೆ ಮೂಲಕ ಅದನ್ನು ವಾಪಸ್ ಪಡೆಯುವ ಸೌಲಭ್ಯವಿದೆ. ನೀವು ಸಂದೇಶ ಕಳಿಸಲು ಟೈಪ್ ಮಾಡುತ್ತಿರುವಾಗ ಬೈ ಮಿಸ್ಟೇಕ್  ಅಳಿಸಿಬಿಟ್ಟರೆ Undo ಆಯ್ಕೆ ಮೂಲಕ ವಾಪಸ್ ಪಡೆಯಬಹುದು. ಆದರೆ ಇದಕ್ಕೆ ನಿರ್ಧಿಷ್ಟ ಕಾಲಮಿತಿ ಇರುತ್ತದೆ ಎಂದು ವಾಟ್ಸಾಪ್ ಹೇಳಿದೆ. ನೀವು ಅಳಿಸಿದ ಸಂದೇಶವನ್ನು ನಿಗಧಿತ ಸಮಯದೊಳಗೆ ಮಾತ್ರ ಪಡೆಯಬಹುದು. ಇಲ್ಲದಿದ್ದರೆ ಅದು ಕಣ್ಮರೆಯಾಗಲಿದೆ.

ಇವಿಷ್ಟು ಸದ್ಯಕ್ಕೆ ವಾಟ್ಸಾಪ್ ನೀಡಿರುವ ಕೊಡುಗೆಗಳಾಗಿದ್ದು, ಅದಕ್ಕೆ ಯಾವುದೇ ದರ ನಿಗಧಿ ಮಾಡಿಲ್ಲ. ಮೆಟಾ ಮಾಲಿಕತ್ವದ ವಾಟ್ಸಾಪ್ ತನ್ನ ಸೇವೆಗಳಿಗೆ ಮುಂದೆ ದರ ನಿಗಧಿ ಮಾಡಲಿದೆ ಎಂಬ ಚರ್ಚೆಗಳು ಸಹ ನಡೆಯುತ್ತಿವೆ.

ಇದನ್ನೂ ಓದಿ: ವಾಟ್ಸಾಪ್ ಪೋಲ್ ರಚಿಸಬಹುದು: ಹೇಗೆಂದು ಇಲ್ಲಿ ತಿಳಿಯಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...