Homeಮುಖಪುಟವಾಟ್ಸಾಪ್ ಪೋಲ್ ರಚಿಸಬಹುದು: ಹೇಗೆಂದು ಇಲ್ಲಿ ತಿಳಿಯಿರಿ

ವಾಟ್ಸಾಪ್ ಪೋಲ್ ರಚಿಸಬಹುದು: ಹೇಗೆಂದು ಇಲ್ಲಿ ತಿಳಿಯಿರಿ

- Advertisement -
- Advertisement -

ಅತಿ ಹೆಚ್ಚು ಜನರು ಬಳಸುವ, ಬಳಕೆದಾರರ ಸ್ನೇಹಿ ಮೇಜೆಂಜರ್ ಆಪ್ ಆದ ವಾಟ್ಸಾಪ್ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದೆ. ಇತ್ತೀಚೆಗೆ ತಾನೇ ವಾಟ್ಸಾಪ್ ಕಮ್ಯೂನಿಟಿಯನ್ನು ಪರಿಚಯಿಸಿದ್ದ ಮೆಟಾ ಕಂಪನಿಯು ಈಗ ವಾಟ್ಸಾಪ್ ಪೋಲ್ ರಚಿಸುವ ಅವಕಾಶವನ್ನು ಸಹ ನೀಡಿದೆ. ಆಂಡ್ರಾಯ್ಡ್ ಮತ್ತು iOS ಎರಡೂ ಫ್ಲಾಟ್‌ಫಾರಂಗಳಲ್ಲಿ ವಾಟ್ಸಾಪ್ ಪೋಲ್ ರಚಿಸಬಹುದಾಗಿದೆ. ಆದರೆ ವಾಟ್ಸಾಪ್ ವೆಬ್‌ನಲ್ಲಿ ಈ ಅವಕಾಶ ಇನ್ನೂ ಬಳಕೆಗೆ ಬಂದಿಲ್ಲ. ಅಲ್ಲಿ ಪೋಲ್ ಕ್ರಿಯೇಟ್ ಮಾಡಲಾಗದಿದ್ದರೂ ಮತ ಚಲಾಯಿಸಬಹುದಾಗಿದೆ.

ಪೋಲ್ ರಚಿಸುವುದು ಹೇಗೆ?

ಇತ್ತೀಚಿನ ವಾಟ್ಸಾಪ್ ಅಪ್ಟೇಡ್ ಆದ ಮೊಬೈಲ್‌ಗಳಲ್ಲಿ ಈ ಅವಕಾಶವಿದೆ. ಗುಂಪುಗಳಲ್ಲಿ ಮತ್ತು ವಯಕ್ತಿಕ ಚಾಟ್ ಎರಡೂ ಕಡೆ ಪೋಲ್ ಕ್ರಿಯೇಟ್ ಮಾಡಬಹುದು. ಯಾವುದೇ ಗುಂಪಿನಲ್ಲಿ ನಾವು ಫೈಲ್ ಆಡ್ ಮಾಡುವ ಬಟನ್ ಕ್ಲಿಕ್ ಮಾಡಿದರೆ ಕೊನೆಯ ಆಯ್ಕೆಯಾಗಿ ಪೋಲ್ ಆಪ್ಶನ್ ತೆರೆದುಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಪ್ರಶ್ನೆ ಬರೆದು ಅದಕ್ಕೆ 12 ಆಯ್ಕೆಗಳನ್ನು ನೀಡಬಹುದು.

ಒಂದೇ ಆಯ್ಕೆಯನ್ನು ನೀವು ಎರಡು ಬಾರಿ ನೀಡಿದರೆ ವಾಟ್ಸಾಪ್ ಅಲರ್ಟ್ ಮೆಸೇಜ್ ತೋರಿಸುತ್ತದೆ. ನಿಮಗೆ ಬೇಕಾದಷ್ಟು ಆಯ್ಕೆ ನೀಡಿ ಮುಂದಕ್ಕೆ ಮಾರ್ಕ್ ಒತ್ತಿದ್ದರೆ ಪೋಲ್ ಕ್ರಿಯೇಟ್ ಆಗುತ್ತದೆ.

ಮತ ಚಲಾಯಿಸುವುದು

ಒಮ್ಮೆ ಪೋಲ್ ಕ್ರಿಯೇಟ್ ಆದ ನಂತರ ಗುಂಪಿನಲ್ಲಿರುವ ಎಲ್ಲರೂ ತಮಗಿಷ್ಟ ಆಯ್ಕೆಯ ಮೇಲೆ ಕ್ಲಿಕ್ ಮಾಡುವು ಮೂಲಕ ಮತ ಚಲಾಯಿಸಬಹುದು. ಅದರ ಕೆಳಗೆ ವ್ಯೂವ್ ವೋಟ್ಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಯಾರು ಯಾವ ಆಯ್ಕೆ ಮಾಡಿದ್ದಾರೆ ಎಂಬುದರ ವಿವರ ದೊರೆಯುತ್ತದೆ. ಕೈತಪ್ಪಿನಿಂದ ತಪ್ಪು ಆಯ್ಕೆ ಮಾಡಿದರೆ ಅದರ ಮೇಲೆ ಮತ್ತೆ ಕ್ಲಿಕ್ ಮಾಡುವ ಮೂಲಕ ಮತ ವಾಪಸ್ ಪಡೆಯಬಹುದಾಗಿದೆ.

ಕೊರತೆ

ಇದರಲ್ಲಿ ಬಹುಮುಖ್ಯ ಕೊರತೆಯೆಂದರೆ ಮತ ಚಲಾಯಿಸುವವರು ಒಂದು ಆಯ್ಕೆ ಮಾತ್ರವಲ್ಲದೆ ಎಷ್ಟು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಇದರಿಂದಾಗಿ ಹೌದು ಮತ್ತು ಇಲ್ಲ ಎಂಬ ಎರಡೂ ಆಯ್ಕೆಯನ್ನು ಮಾಡಿಕೊಳ್ಳುವುದರಿಂದ ಅವರ ನಿರ್ಧಿಷ್ಟ ಮತ ಯಾವುದಕ್ಕೆ ಎಂಬುದಕ್ಕೆ ತಿಳಿಯುವುದು ಕಷ್ಟ.

ಒಟ್ಟಿನಲ್ಲಿ ವಾಟ್ಸಾಪ್‌ನ ಈ ಪೋಲ್ ಅವಕಾಶವನ್ನು ಜನರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: ವಾಟ್ಸ್‌ಅಪ್‌‌ ಕಮ್ಯುನಿಟಿ’ ರಚಿಸುವುದು ಹೇಗೆ? ಏನಿದರ ವಿಶೇಷ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read