Homeಕರ್ನಾಟಕಬಿಬಿಎಂಪಿ ಆಯುಕ್ತ ಸೇರಿದಂತೆ 17 ಐಎಎಸ್ ಅಧಿಕಾರಿಗಳ ವರ್ಗಾವಣೆ!

ಬಿಬಿಎಂಪಿ ಆಯುಕ್ತ ಸೇರಿದಂತೆ 17 ಐಎಎಸ್ ಅಧಿಕಾರಿಗಳ ವರ್ಗಾವಣೆ!

- Advertisement -
- Advertisement -

ಹೊಸದಾಗಿ ಸೃಷ್ಟಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರ ಹುದ್ದೆಗೆ ಗೌರವ್ ಗುಪ್ತಾ ಅವರನ್ನು ನೇಮಿಸಲಾಗಿದ್ದು, ಇವರ ಈ ಮೊದಲು ಬಿಬಿಎಂಪಿಯ ಆಡಳಿತಾಧಿಕಾರಿಯಾಗಿದ್ದರು. ಈಗ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನೂ ಗುಪ್ತಾ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಇವರೂ ಸೇರಿದಂತೆ 17 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಗೌರವ್ ಗುಪ್ತಾ ನೇಮಕದಿಂದ ತೆರವಾಗಿರುವ ಆಡಳಿತಾಧಿಕಾರಿ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿ ರಾಕೇಶ್ ಸಿಂಗ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಕೇಶ್‌ ಸಿಂಗ್‌ ಅವರಿಗೆ ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಜತೆಗೆ ಹೆಚ್ಚುವರಿಯಾಗಿ ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆ ನೀಡಲಾಗಿದೆ.

ಬೆಂಗಳೂರಿನ ಆಡಳಿತದಲ್ಲಿ ಭಾರಿ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ 17 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಬಿಬಿಎಂಪಿ ಆಯುಕ್ತರಾಗಿದ್ದ ಎನ್‌. ಮಂಜುನಾಥ್‌ ಪ್ರಸಾದ್‌ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಇದೇ ಹುದ್ದೆಯಲ್ಲಿದ್ದರು. ಈಗ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

ಇಷ್ಟೆ ಇದಲ್ಲದೆ, ಹೆಚ್. ಎನ್ ಗೋಪಾಲಕೃಷ್ಣ ಅವರನ್ನು ಐಟಿಬಿಟಿ ನಿರ್ದೇಶಕರನ್ನಾಗಿ, ಎಸ್. ಹೊನ್ನಾಂಬ ಅವರನ್ನು ಗಣಿ ಮತ್ತು ಭೂ ವಿಜ್ಞಾನ ನಿರ್ದೇಶಕಿಯನ್ನಾಗಿ, ಸಿಂಧು ಬಿ ರೂಪೇಶ್ ಅವರನ್ನು ಪ್ರವಾಸೋದ್ಯಮ‌‌ ಇಲಾಖೆ ನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು

  1. ಉಮೇಶ್ ಕುಮಾರ್-ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧ
  2. ರೂಪಾ ಡಿ – ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ
  3. ಎನ್. ಶಶಿಕುಮಾರ್- ಎಸ್​​ಪಿ, ವೈರ್​​ಲೆಸ್, ಬೆಂಗಳೂರು
  4. ಡಾ. ರೋಹಿಣಿ ಕಟೋಚ್- ಎಸ್​​ಪಿ, ಸಿಐಡಿ
  5. ಎಂ.ಎನ್. ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ
  6. ಬಿ. ರಮೇಶ್- ಎಸ್​​ಪಿ, ಸಿಐಡಿ
  7. ಈಡಾ ಮಾರ್ಟಿನ್ ಮಾರ್ಬನ್ಯಾಂಗ್ – ಎಸ್​​​ಪಿ, ಎಎನ್ಎಫ್, ಕಾರ್ಕಳ
  8. ನಿಕ್ಕಂ ಪ್ರಕಾಶ್ ಅಮೃತ್- ಎಸ್​​ಪಿ, ರಾಯಚೂರು
  9. ಇಲಕ್ಕಿಯಾ ಕರುಣಾಗರನ್ – ಎಸ್​​ಪಿ, ಕೆಜಿಎಫ್
  10. ಧರ್ಮೇಂದರ್ ಕುಮಾರ್ ಮೀನಾ- ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು ನಗರ
  11. ಡಾ. ಸುಮನ್ ಪೆನ್ನೇಕರ್- ಉಪ ನಿರ್ದೇಶಕಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
  12. ಹರೀಶ್ ಪಾಂಡೆ- ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಗರ
  13. ಮೊಹಮ್ಮದ್ ಸುಜೀತ- ಡಿಸಿಪಿ, ಸಿಎಆರ್ ಬೆಂಗಳೂರು
  14. ಸಿಮಿ ಮರಿಯಂ ಜಾರ್ಜ್- ಎಸ್​​ಪಿ, ಕಲ್ಬುರ್ಗಿ
  15. ಡಾ. ಸಿ.ಬಿ. ವೇದಮೂರ್ತಿ- ಎಸ್​​ಪಿ, ಗುಪ್ತಚರ, ಬೆಂಗಳೂರು
  16. ಡಿ. ದೇವರಾಜ- ಡಿಸಿಪಿ, ವೈಟ್ ಫೀಲ್ಡ್, ಬೆಂಗಳೂರು
  17. ಸಂಜೀವ್ ಎಂ. ಪಾಟೀಲ್- ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ನಗರ

ಇದನ್ನೂ ಓದಿ: ರಾಜ್ಯಪಾಲರಿಗೆ ದೂರು: ಈಶ್ವರಪ್ಪ ವಿರುದ್ದ ಮುಗಿಬಿದ್ದ ಬಿಜೆಪಿ ಶಾಸಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...