Homeಅಂಕಣಗಳು“ಮನ್ನೆ ದಿನ ದೀಪ ಹಚ್ಚಿದೇನಕ್ಕ?": ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

“ಮನ್ನೆ ದಿನ ದೀಪ ಹಚ್ಚಿದೇನಕ್ಕ?”: ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ,
‘ಮನ್ನೆ ದಿನ ದೀಪ ಹಚ್ಚಿದ್ದೇನಕ್ಕ’ ಎಂದ.
“ಯಾಕ್ಲ.”
“ಇದೇನಕ್ಕ ಹಿಂಕೇಳ್ತಿ, ಮೋದಿ ದೀಪ ಹಚ್ಚಗಂಡು ಕುಂತಿರಿ ಅಂತ ಹೇಳಿದ್ನ ಮರತುಬುಟ್ಟಾ.”
“ಎಲ್ಲೇಳಿದ್ದಾ.”
“ಟಿವಿಲಿ ಕಾಣಿಸಿಗಂಡು ಹೇಳಿದ್ದ ಕಣಕ್ಕ.”
“ಏನಂತ ಹೇಳಿದ್ದಾ”

ಐದನೆ ತಾರೀಖು ರಾತ್ರಿ ವಂಬತ್ತು ಗಂಟೆಗೆ, ಲೈಟಾಪು ಮಾಡಿಕಂಡು, ದೀಪ ಹಚಗಂಡು ವಂಬತ್ತು ನಿಮಿಸ ಮನೆಲಿ ಕುಂತಿರಿ ಅಂತ ಹೇಳಿದ್ದ.”
“ಅದ್ಯಾಕಂಗೇಳಿದ್ದ.”
“ಈ ಕೊರೊನ ವೈರಸ್ ಅದೆ ನೋಡು ಅದು ಬೆಳಕಲ್ಲಿ ಯಲ್ಲಾ ಕಡಿಕೂ ದುಂಬು ತೇಲಿದಂಗೆ ತೇಳಿಕಂಡು ಹೋಯ್ತದಂತೆ. ಆಗ ಯಲ್ಲಾ ದೀಪನು ಆರಿಸಿ. ಅಣತೆ ಹಚಿದ್ರೆ ಅದರತ್ರ ಬಂದು ಸತ್ತೋದವಂತೆ.”
“ಓಹೊ ಲೈಟ್ ಬೆಳಕಿಗೆ ಈಚಉಳ ಬಂದು ಬೀಳ್ತವೆ ನೋಡು ಅಂಗೆ.”
“ಎಜ್ಲಾಟ್ಳಿ ಕರಟ್ ಕಣಕ್ಕ.”
“ಅದವುನಿಗ್ಯಂಗೆ ಗೊತ್ತಾಯಿತ್ಲ.”
“ಅವುನುನ್ನೆನು ಅನ್ನಕಂಡಿದ್ದಿಯಕ್ಕ ನೀನು, ಪ್ರಧಾನಿನೆ ಆಗದೆಯಿದ್ರೆ ಬಿ.ಜೆ.ಪಿ ವಿಜ್ಞಾನಿಯಾಗಿರತಿದ್ದ.”
“ನಾವು ದೀಪ ಹಚ್ಚಲಿಲ್ಲಕಂಡ್ಳ ವಂಬತ್ತು ಗಂಟಗ್ಯಲ್ಲ ಉಂಡು ಮನಿಕಂಬುಡ್ತಿವಿ.”
“ಓ ಮೋದಿ ಮಾತು ಕೇಳಿಲ್ಲ ನೀನು, ಅಂಗರೆ ದೇಸದ್ರೊಹಿ ಕಣಕ್ಕ ನೀನು.”
“ನಾನ್ಯಾಕ್ಲ ದೇಸದ್ರೊಯಿಯಾಗ್ಲಿ.”
“ಕಾಲ ಬದ್ಲಾಗ್ಯದೆ ಕಣಕ್ಕ, ಮೋದಿ ಮಾತು ಕೇಳದೊರ್ಯಲ್ಲ ದೇಸದ್ರೊಹಿಗಳು, ಇಡೀ ದೇಸನೆ ದೀಪ ಹಚಿದಾಗ ನೀನು ಮನಗಿದ್ದೆ ಅಂತಿಯಲ್ಲ. ಕೊರೋನ ಬರದಿಲವ ನಿನ್ನ ಮನಿಗೆ.”
“ಇಡೀ ದೇಸನೆ ದೀಪ ಹಚ್ಚಿದ ಮ್ಯಾಲೆ ಅದು ವಂಟೋಗಿರದಿಲವೇನ್ಲ.”
“ಹೋಗಿಲವಂತೆ ಕಣಕ್ಕ. ಸುಮಾರು ಐದು ಪರಸೆಂಟು ಜನ ದೀಪ ಹಚ್ಚಿರಲಿಲವಂತೆ, ಅಂಗಾಗಿ ಉಳಕಂಡದಂತೆ.”
“ಸಾಬರ್ಯಾರೂ ದೀಪ ಹಚ್ಚಿರಲಿಲವಂತೆ ಕಣೊ” ಎಂದ ಉಗ್ರಿ.
“ಸಾಬರ್ಯಾರು ಮೋದಿ ಮಾತ ಕೇಳ್ಯರು.”
“ಅಂಗರವುನ ಮಾತ ಕೇಳದಿಲವೇನ್ಲ ಸಾಬ್ರು.”
“ಇಲ್ಲ ಕಣಕ್ಕ, ಮೋದಿ ಇಡೀ ದೇಸಕೆ ಪ್ರಧಾನಮಂತ್ರಿಯಾಗಿದ್ರೆ ಕೇಳತಿದ್ರು. ಆದ್ರವುನು ಬಿಜೆಪಿ ಪ್ರಧಾನಿಯಾಗಿದ್ದಕಂಡು, ಆರೆಸೆಸ್ ಹೇಳಿದಂಗೆ ಕೇಳ್ತನೆ ಆಂತ ಸಾಬರು ಅವುನೇಳಿದ್ದ ಮಾತ ಕೇಳದಿಲ್ಲ.”
“ಸಾಬರೇನು ಮೋದಿಗೆ ಸಮಸ್ಯೆ ಅಲ್ಲ ಕಣೊ. ಅವುರು ಗಾಂಧೀಜಿ ಕಾಲದಿಂದ ಸಮಸ್ಸೆನೆ. ಪ್ರಪಂಚಕೆ ಸಮಸ್ಯಾದೋರು ಮೋದಿಗೆ ಯಾವ ಲ್ಯಕ್ಕ.”
“ಅದ್ಯಾಕ್ಲ ಸಾಬರಿಗೆ ಬೈತಿರಿ.”
“ಅವುರು ಡೆಲ್ಲಿಲಿ ಸಭೆ ಮಾಡಿದ್ರಂತೆ, ಅಲ್ಲಿಗೆ ಕೊರೋನಾ ಇದ್ದೊರ ಕರಿಸಿ, ಯಲ್ಲಾರಾ ತಬ್ಬಿಕಂಡು ಕ್ಯಾಕರಿಸಿ ಕೆಮ್ಮಿಕಂಡು ದೇಸದ ತುಂಬ ಚಲ್ಲಾಪಿಲ್ಲಿಯಾಗಿ ಹೋಗಿ ಹರಡಿದರಂತೆ ಕೊರೋನಾವಾ.”
“ಮತ್ತೆ ಚೀಣಾ ದೇಸದಿಂದ ಬತ್ತು ಅಂತಿದ್ರು.”
“ಅದು ಮದ್ಲು, ಈಗ ಬಿಜೆಪಿಗಳಿಗೆ ಸಾಬರು ಸಿಕ್ಕಿರದ್ರಿಂದ ಅವುರ ತಲಿಗಾ ಕಟ್ಟಿ ತಮಾಸಿ ನೋಡ್ತ ಅವುರೆ.”
“ಥೂ ಅಂಗೆ ಮಾಡಬಾರ್ದು ಕಂಡ್ಳ.”
“ಅವು ಅಂಗೆ ಮಾಡ್ತವೆ ಕಣ.., ಅವುಸ್ತಿಕೊಡಕ್ಕೊದ ದಾಗುಟ್ರು ಕಾಂಪೌಡ್ರಗ್ಯಲ್ಲ ವಡದೋಡಿಸ್ಯವೆ.”
“ಅವು ಮಲ್ಲಾಗ್ರು ಬರ ಅವುಕೇನು ಬತ್ಲ.”
“ನೋಡಕ್ಕ, ಸಾಬರ ಮ್ಯಾಲೆ ಈ ಮೋದಿ ಕಡಿಯೋರು ಯರಡು ಮೂರು ಕಾನೂನು ತಂದು ನೀವು ನಮ್ಮ ದೇಸದೋರಲ್ಲ, ಪಾಕಿಸ್ತಾನದೊರು, ಬಾಗ್ಲಾದೇಸದೊರು, ಅಲ್ಲಿಗೆ ರವಾನಿಸ್ತೀವಿ ಅಂತ ಹೆದರಿಸಿದ್ರು. ಆಗ ಅವುರ್ಯಲ್ಲ ಡೆಲ್ಲಿಲಿ ಸಭೆ ಸೇರಿ, ಗಲಾಟೆ ಮಾಡಿದ್ರು. ಅವುರ ಮ್ಯಾಲೆ ಗೂಂಡಾಗಳ ಚೂ ಬಿಟ್ಟು ಗುಂಡಾರಿಸಿ ಐವತ್ತು ಜನ ಕೊಂದಾಕಿದ್ರು ಇದು ಸರಿಯೇನಕ್ಕ.”
“ತೆಪ್ಪು. ಅಂಗೆ ಮಾಡಿದ್ರೆ ಅವುರೆಲ್ಲಿಗೋಗಬೇಕ್ಲ.”
“ಇರುವೆನೂ ಸುಮ್ಮನೆ ಸಾಯದಿಲ್ಲ ಕಣಕ್ಕ. ಕಚ್ಚಿಬುಟ್ಟೆ ಸಾಯ್ತದೆ. ಅಂತಾದ್ರಲ್ಲಿ, ಯಾವ ಸಾಬಿನೂ ಸುಮ್ಮನೆ ಸಾಯದಿಲ್ಲ. ನಾಕುಜನ ತಗದೆ ಹೋಗನ ಅಂತ ತೀರ್ಮಾನ ತಗತನೆ. ಅಂತದ್ಯಾವೊ ವಸಿ ಪೋಲಿ ಬಡ್ಡೆತ್ತವು, ದಾಗುಟ್ರು ಮ್ಯಾಲೆ ಹಲ್ಲೆ ಮಾಡ್ಯವೆ.”
“ಅಂತು ಸಾಬರಿಗೆ ಕ್ಯಟ್ಟೆಸರು ತಂದವೆ ಅನ್ನು.”
“ತರದೇನು ಸಾಬರನ ಅಗಚಿಬುಟ್ರು ಅತ್ತಗೆ” ಎಂದ ಉಗ್ರೀ.
“ಅವುರಿಗೆ ಅಗಚಿಗಂಡರೂ ಸಗತಿನೂ ಅದೆ ಕಣೊ ಉಗ್ರಿ. ಅವುರ ಧರ್ಮನೆ ಅಂಗದೆ.”
“ಕ್ಯರೋನ ಬಂದು ಯಲ್ಲಾರ್ನು ಕ್ಯರಕಂಡೊಯ್ತಾಯಿರುವಾಗ ಧರಮ ಕಡಿಗಂಡೇನ್ಲ.” ಎಂದು ಜುಮ್ಮಿ ಹೇಳುವಾಗ ಸೀರ ಕಾಣಿಸಿಕೊಂಡ.
“ಬಾ ಚಿಗಪ್ಪ. ಈ ಕರೊನ ಬಂದು ಅಮೇರಿಕದಲ್ಲಿ ಲಕ್ಷಾಂತರ ಜನ ಸಾಯ್ತ ಅವುರೆ, ನಮ್ಮ ದೇಸಕ್ಕು ಬಂದ್ರೆ ಕತಿಯೇನು.”
“ಬರ್ಲಿ ಬುಡ್ಳ., ಆಗಿನ ಕಾಲದಲ್ಲಿ ನಮ್ಮಪ್ಪಯಲ್ಲ ಪ್ಳೇಗಿನಲ್ಲಿ ಸತ್ತೋದ್ರು. ಈಗ್ಲು ಅಂಥದೊಂದು ಬಂದದೆ ಒದಿರೋಗ್ಲಿ ಬುಡು.”
‘ಇದೇನು ಚಿಗಪ್ಪ ಹಿಂಗಂತಿ.”
“ಮತ್ತೆ, ಈಗಿನುಡ್ರು ಮಾತ ಕೇಳ್ತವೇನ್ಲ ಹಿರಿಯರೆಗೆ ಗೌರವಕೊಟ್ಟವೇನ್ಲ. ಅದೇನು ಧಿಮಾಕು, ಅದೇನು ಜಂಬಾ, ಅವುರನೇನಾರ ಮಾತಾಡಿಸಕ್ಕಾದತೆ, ಇಂಥ ನನಮಗನವು ಇದ್ರೆಷ್ಟು ಹೋದರೆಷ್ಟು. ಇದು ಬಂದಿದ್ದು ವಳ್ಳೆದೆ ಸುಂಕಿರು. ಜಳ್ಯಲ್ಲ ಹೋಗಿ ಗಟ್ಟಿದು ಉಳಕತ್ತದೆ” ಎಂದು ಸೀರ ನಕ್ಕ.
“ನಗತಿಯಲ್ಲೊ ಚಿಗಪ್ಪ. ವಸ ಜನ ನಿನಿಗೆ ಗೌರವ ಕೊಡಲಿಲ್ಲ ಅಂತ ಕೊರೋನ ಬಂದು ತೂರಿಕಂಡೋಗ್ಲಿ ಅಂತಿಯಲ್ಲಾ. ಲೇ ಉಗ್ರಿ ಸಾಬರ ಬೈತಿಯಲ್ಲೊ ನೋಡಿಲ್ಲೆ ಅವುನೆ ಕೊರೋನಾ ಚಿಗಪ್ಪ.”
“ಅವುಂದೇನ್ಯಲ್ಲ ಆಯ್ತಲ್ಲ ಅಯ್ಯನ ಮಿಸೇನು ನಿಂತೂಗ್ಯದೆ ಚಿಗವ್ವನೂ ಮುದುಕಿಯಾದ್ಲು ಅದ್ಕೆ ಕೊರೋನ ಬರ್ಲಿ ಅಂತ ಕಾಯ್ತ ಕುಂತವನೆ.”
“..!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...