Homeಮುಖಪುಟಲೋಕಸಭೆಯಲ್ಲಿ 20 ನಿಮಿಷ ಮೈಕ್ರೊಫೋನ್‌ ಮ್ಯೂಟ್: ಇದು ಪ್ರಜಾಪ್ರಭುತ್ವವೇ? ಎಂದ ಕಾಂಗ್ರೆಸ್

ಲೋಕಸಭೆಯಲ್ಲಿ 20 ನಿಮಿಷ ಮೈಕ್ರೊಫೋನ್‌ ಮ್ಯೂಟ್: ಇದು ಪ್ರಜಾಪ್ರಭುತ್ವವೇ? ಎಂದ ಕಾಂಗ್ರೆಸ್

- Advertisement -
- Advertisement -

ರಾಹುಲ್ ಗಾಂಧಿ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ಲೋಕಸಭೆಯ ಕಲಾಪದ ವೇಳೆ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ 20 ನಿಮಿಷಗಳ ಕಾಲ ಮೈಕ್ರೊಫೋನ್‌ಗಳನ್ನು ಮ್ಯೂಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.

ಸಂಸದ ರಾಹುಲ್ ಗಾಂಧಿ ಅವರು ಲಂಡನ್ ಸಂಸತ್ತಿನಲ್ಲಿ ಬ್ರಿಟಿಷ್ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಾ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಮೈಕ್‌ಗಳನ್ನು ಆಗಾಗ್ಗೆ ಮ್ಯೂಟ್ ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ನಾಲ್ಕು ದಿನಗಳ ನಂತರ ಮತ್ತೆ ಅದು ಮರುಕಳಿಸಿದೆ.

ಸಂಸತ್ ಟಿವಿಯಲ್ಲಿ ಲೋಕಸಭೆಯ ಕಲಾಪಗಳ ನೇರ ಪ್ರಸಾರದ ಕಿರು ವಿಡಿಯೋವನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಪ್ರತಿಪಕ್ಷಗಳ ಸಂಸದರು ಆರಂಭದಲ್ಲಿ ”ರಾಹುಲ್ ಜಿ ಕೊ ಬೋಲ್ನೆ ದೋ [ರಾಹುಲ್ ಜಿ ಮಾತನಾಡಲಿ]” ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಬಂದಿದೆ.

”ಪ್ರತಿಪಕ್ಷಗಳ ಧ್ವನಿ ಕೇಳದಂತೆ ತಡೆಯಲು ಮೈಕ್ರೋಫೋನ್ ಮ್ಯೂಟ್ ಮಾಡುವುದು ಪ್ರಜಾಪ್ರಭುತ್ವವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಟೆಲಿಕಾಸ್ಟ್‌ನಿಂದ ಆಡಿಯೋ ಸುಮಾರು ಮುಂದಿನ 20 ನಿಮಿಷಗಳವರೆಗೆ ಕೇಳಿಸುವುದಿಲ್ಲ. ಸ್ಪೀಕರ್ ಓಂ ಬಿರ್ಲಾ ಅವರು ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸದಸ್ಯರನ್ನು ಒತ್ತಾಯಿಸಿದಾಗ, ಅವರು ನಿಲ್ಲಿಸುವುದಿಲ್ಲ. ನಂತರ ಸದನವನ್ನು ಮುಂದೂಡಲಾಯಿತು.

ಪ್ರತಿಪಕ್ಷಗಳ ನಾಯಕರು ಸ್ಪೀಕರ್ ಕುರ್ಚಿಯ ಬಳಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಮತ್ತು ಸಂಸದರು ಖಜಾನೆ ಪೀಠದ ಮೇಲೆ ಕುಳಿತು ತಮ್ಮ ಕಾಲುಗಳ ಮೇಲೆ ಕುಳಿತುಕೊಂಡಿರುವುದನ್ನು ದೃಶ್ಯಗಳು ತೋರಿಸಿವೆ.

ಉದ್ದೇಶಪೂರ್ವಕವಾಗಿ ಆಡಿಯೋ ಮ್ಯೂಟ್ ಮಾಡಿಲ್ಲ ಎಂದು ಸರ್ಕಾರಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ”ಇದು ತಾಂತ್ರಿಕ ದೋಷವಾಗಿದೆ, ಉದ್ದೇಶಪೂರ್ವಕವಾಗಿ ಮಾಡಲಾಗಿಲ್ಲ. ಪ್ರತಿದಿನ ಘೋಷಣೆ ಕೂಗುವಿಕೆಯನ್ನು ಅಡ್ಡಿಪಡಿಸುವ ಸಮಯದಲ್ಲಿ ಪ್ರಸಾರ ಮಾಡಲಾಗುತ್ತಿದೆ” ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಚಾನಲ್ ಹೇಳಿದೆ.

ಬುಧವಾರ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ”ಕಳೆದ ಮೂರು ದಿನಗಳಿಂದ ತಮ್ಮ ಮೈಕ್ರೊಫೋನ್‌ನ್ನು ಮ್ಯೂಟ್ ಮಾಡಲಾಗಿದೆ” ಎಂದು ಆರೋಪಿಸಿ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

”ಮಾರ್ಚ್ 13, 2023 ರಿಂದ, ಸದನದಲ್ಲಿ ಸರ್ಕಾರಿ ಪ್ರಾಯೋಜಿತ ತೊಂದರೆ ಕಂಡುಬಂದಿದೆ. ಿದನ್ನು ಗಮನಿಸಿದ ನಾನು ಹತಾಶೆಕೊಂಡಿದ್ದೇನೆ. ವಿರೋಧ ಪಕ್ಷದ ಒಬ್ಬ ಸದಸ್ಯನ ಪ್ರತಿಷ್ಠೆಯನ್ನು ಹಾಳುಮಾಡಲು ಅಧಿಕಾರದಲ್ಲಿರುವ ಪಕ್ಷದ ಕಡೆಯಿಂದ ಸಂಚು ರೂಪಿಸಿದಂತೆ ನನಗೆ ತೋರುತ್ತದೆ” ಎಂದು ಅವರು ಹೇಳಿದ್ದಾರೆ.

ಲಂಡನ್‌ನಲ್ಲಿ ಮಾಡಿದ “ಪ್ರಜಾಪ್ರಭುತ್ವ-ದಾಳಿ” ಟೀಕೆಗಳಿಗಾಗಿ ಭಾರತೀಯ ಜನತಾ ಪಕ್ಷದ ಸಂಸದರು ಗಾಂಧಿಯವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತಿರುವುದರಿಂದ ಸಂಸತ್ತಿನ ಕಲಾಪಗಳು ಈ ವಾರದುದ್ದಕ್ಕೂ ಪದೇ ಪದೇ ಅಡ್ಡಿಪಡಿಸುತ್ತಿವೆ. ಮತ್ತೊಂದೆಡೆ ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಕೋರಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read