ಭಾರತದ ಬಲಪಂಥೀಯರ ವಿರುದ್ದ ನಿರಂತರವಾಗಿ ದಾಳಿ ಮಾಡುತ್ತಲೆ ಬಂದಿರುವ ಅಮೆರಿಕಾದ ಟೆನಿಸ್ ದಂತಕಥೆ ಮಾರ್ಟಿನಾ ನವ್ರಾತಿಲೋವಾ ಅವರು, ಭಾನುವಾರದಂದು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯನ್ನು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಜೀವನದ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಸಂಸದ್ ಟಿವಿಗೆ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದ ಸಮಯದಲ್ಲಿ, ‘‘ಪ್ರಧಾನಿ ನರೇಂದ್ರ ಮೋದಿ ‘ಸರ್ವಾಧಿಕಾರಿ’ ಅಲ್ಲ. ಅವರು ದೇಶ ಕಂಡ ಅತ್ಯಂತ ಪ್ರಜಾಪ್ರಭುತ್ವವಾದಿ ನಾಯಕ” ಎಂದು ಹೇಳಿದ್ದರು.
ಇದನ್ನೂ ಓದಿ: ಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’
ಅಮಿತ್ ಶಾ ಅವರ ಹೇಳಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ಈ ವರದಿಯನ್ನು ಟ್ವೀಟ್ ಮಾಡಿದ್ದ ಹಿಂದೂಸ್ತಾನ್ ಟೈಮ್ಸ್, “ಪ್ರಧಾನಿ ನರೇಂದ್ರ ಮೋದಿ ‘ಸರ್ವಾಧಿಕಾರಿ’ ಅಲ್ಲ, ಬದಲಾಗಿ ಅವರು ದೇಶ ಕಂಡ ಅತ್ಯಂತ ಪ್ರಜಾಪ್ರಭುತ್ವವಾದಿ ನಾಯಕ ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ” ಎಂದು ಬರೆದಿತ್ತು.
Union home minister Amit Shah said that Prime Minister Narendra Modi was not a “dictator” but the most democratic leader the country has ever seen
(Isha Sahai Bhatnagar reports)https://t.co/qK3NQgwHhO
— Hindustan Times (@htTweets) October 10, 2021
ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಮಾರ್ಟಿನಾ ಅವರು, “ಇದು ನನ್ನ ಮುಂದಿನ ಜೋಕ್‌ಗೆ…” ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ತಮ್ಮ ಟ್ವೀಟ್‌ನೊಂದಿಗೆ ಆಶ್ಚರ್ಯ ಮತ್ತು ಭಾವೋದ್ರೇಕವನ್ನು ಬಿಂಬಿಸುವ ಇಮೋಜಿಗಳನ್ನು ಸೇರಿಸಿದ್ದಾರೆ.
And for my next joke …?? https://t.co/vR7i5etQcv
— Martina Navratilova (@Martina) October 10, 2021
ಮಾರ್ಟಿನಾ ಅವರ ಟ್ವೀಟ್ ಭಾತರದ ನೆಟ್ಟಿಗರಲ್ಲಿ ಸಂಚಲನ ಉಂಟು ಮಾಡಿದ್ದು, ಹಲವಾರು ಜನರು ಧನ್ಯವಾದ ಸಲ್ಲಿಸಿದ್ದಾರೆ. ಹಲವು ಜನರು ಭಾತರದ ಬಲಪಂಥೀಯರು ಅವರ ಮೇಲೆ ಮುಗಿಬೀಳುತ್ತಾರೆ ಎಂದು ಕೂಡಾ ಉಲ್ಲೇಖಿಸಿದ್ದಾರೆ. ಅಲ್ಲದೆ, ಈ ಹಿಂದೆ ರೈತ ಹೋರಾಟವನ್ನು ಬೆಂಬಲಿಸಿದ್ದ ಪಾಪ್ ತಾರೆ ರಿಹಾನ್ನ ಅವರ ಜೊತೆಗೆ ದೇಶದ ಬಲಪಂಥೀಯರು ನಡೆದುಕೊಂಡದ್ದನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದೆ’- ಒಕ್ಕೂಟ ಸರ್ಕಾರದ ವಿರುದ್ದವೆ ಹರಿಹಾಯ್ದ ಸಚಿವ ಮಾಧುಸ್ವಾಮಿ
ಇನ್ನೂ ಕೆಲವರು, ದೇಶದ ಸೆಲೆಬ್ರಿಟಿಗಳಾದ ಸಚಿನ್, ವಿರಾಟ್ ಕೋಯ್ಲಿ, ಸೈನಾ ನೆಹ್ವಾಲ್, ಲತಾ ಮಂಗೇಶ್ಕರ್, ಅಕ್ಷಯ್ ಕುಮಾರ್ ಕಂಗನಾ ರಣಾವತ್ ಸೇರಿದಂತೆ ಹಲವಾರು ಜನರನ್ನು ಟ್ಯಾಗ್ ಮಾಡಿ, “ಸರ್ಕಾರ ಇದರ ವಿರುದ್ದ ನಿಮಗೆ ಕೆಲವು ಸಂದೇಶಗಳನ್ನು ನೀಡುತ್ತದೆ, ನೀವು ಅದನ್ನ ಕಾಪಿ ಪೇಸ್ಟ್ ಮಾಡಿ ಕೃತಾರ್ಥರಾಗಿ” ಎಂದು ಟ್ವೀಟ್ ಮಾಡಿದ್ದಾರೆ.
ಪಾಪ್ ತಾರೆ ರಿಹಾನ್ನ ಅವರು ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾಗ, ಬಿಜೆಪಿ ಐಟಿ ಸೆಲ್ ನೀಡಿದ್ದ ಸಂದೇಶವನ್ನು ದೇಶದ ಹಲವಾರು ಜನಪ್ರಿಯ ವ್ಯಕ್ತಿಗಳು ಕಾಪಿ ಪೇಸ್ಟ್ ಮಾಡಿ, ಹೊರದೇಶದವರು ನಮ್ಮ ದೇಶದ ಆಂತರಿಕ ವಿಷಯಗಳನ್ನು ತಲೆ ಹಾಕಬಾರದು ಎಂದು ಟ್ವೀಟ್ ಮಾಡಿದ್ದರು. ನಂತರ ಈ ಟ್ವೀಟ್‌ಗಳೆಲ್ಲವೂ ಒಂದೇ ಮಾದರಿಯಲ್ಲಿ ಇದ್ದಿದ್ದನ್ನು ಗುರುತಿಸಿದ್ದ ನೆಟ್ಟಿಗರು ಅವರಿಗೆ ಛೀಮಾರಿ ಹಾಕಿದ್ದರು.
ತನ್ನ ಟ್ವಿಟರ್ ಬಯೋದಲ್ಲಿ “ಈಗ ಮಾತನಾಡುವ ಸಮಯ” ಎಂದು ಬರೆದಿರುವ ಮಾರ್ಟಿನಾ, ಭಾರತದ ಬಲಪಂಥೀಯರ ವಿರುದ್ದ ನಿರಂತರವಾಗಿ ದಾಳಿ ಮಾಡುತ್ತಲೆ ಬಂದಿದ್ದಾರೆ. 2016 ರಲ್ಲಿ, ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಕುರಿತ ಲೇಖನವನ್ನು ಅವರು ಹಂಚಿಕೊಂಡಿದ್ದರು. ಈ ವೇಳೆ ಅವರ ಮೇಲೆ ಭಾರತೀಯ ಬಲಪಂಥೀಯರು ಮುಗಿಬಿದ್ದಿದ್ದರು. 2019 ರಲ್ಲಿ ಕೂಡಾ ಮೋದಿ ಮತ್ತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಅವರು ದಾಳಿ ಮಾಡಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಒಕ್ಕೂಟ ಸರ್ಕಾರದ ಪರವಾಗಿ ಕಾಪಿ-ಪೇಸ್ಟ್ ಟ್ವೀಟ್: ಸಿಕ್ಕಿಬಿದ್ದ ಭಾರತೀಯ ಸೆಲೆಬ್ರಿಟಿಗಳು!
ಇದನ್ನೂ ಓದಿ: ‘ನಾಚಿಕೆಯಾಗ ಬೇಕು ನಿಮಗೆ’: ಅನಿಲ್ ಕುಂಬ್ಳೆ ವಿರುದ್ದ ಕನ್ನಡಿಗರು ಸಿಡಿದಿದ್ದೇಕೆ?
ಇದನ್ನೂ ಓದಿ: ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಬಗೆಗಿನ ಗಮನ ಸೆಳೆದ ವ್ಯಂಗ್ಯಚಿತ್ರಗಳು


