anil kumble, ಅನಿಲ್ ಕುಂಬ್ಳೆ

ರೈತ ಪ್ರತಿಭಟನೆಯ ವರದಿಯೊಂದನ್ನು ಉಲ್ಲೇಖಿಸಿ, “ನಾವೇಕೆ ರೈತ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಇದರ ನಂತರ ಭಾರತದ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯವಾಗಿ ಬೆಂಬಲ ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಭಾರತೀಯ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ.

ರೈತ ಹೋರಾಟಕ್ಕೆ ಜಾಗತಿಕವಾಗಿ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ವಿದೇಶಾಂಗ ಸಚಿವಾಲಯ, ರೈತ ಹೋರಾಟವು ದೇಶದ ಆಂತರಿಕ ಸಮಸ್ಯೆಯಾಗಿದ್ದು ವಿದೇಶಿಗರು ಇದರ ಬಗ್ಗೆ ಮಾತನಾಡಬಾರದು ಎಂದು ಹೇಳಿತ್ತು. ಜೊತೆಗೆ #FarmersProtest ಹ್ಯಾಶ್‌ಟ್ಯಾಗ್‌ಗೆ ವಿರುದ್ದವಾಗಿ ’ಇಂಡಿಯಾ ಟುಗೇದರ್‌’ ಮತ್ತು  ’ಇಂಡಿಯಾ ಅಗೇನ್ಸ್ಟ್‌‌ ಪ್ರೊಪಗಾಂಡ’ ಎಂಬ ಹ್ಯಾಶ್ ಟ್ಯಾಗನ್ನು ನೀಡಿತ್ತು.

ಇದನ್ನೂ ಓದಿ: ಕೇಂದ್ರ ಸರ್ಕಾರದ ಪರವಾಗಿ ಕಾಪಿ-ಪೇಸ್ಟ್ ಟ್ವೀಟ್: ಸಿಕ್ಕಿಬಿದ್ದ ಭಾರತೀಯ ಸೆಲೆಬ್ರಿಟಿಗಳು!

ಕೇಂದ್ರ ಸರ್ಕಾರ ನೀಡಿರುವ ಹ್ಯಾಶ್‌ಟ್ರಾಗ್ ಬಳಸಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ, “ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ದೇಶವು ತನ್ನ ಆಂತರಿಕ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಾಮರ್ಥ್ಯ ಹೊಂದಿದೆ” ಎಂದು ಕೇಂದ್ರ ಸರ್ಕಾರದ ಪರವಾಗಿ ಬೌಲಿಂಗ್ ಮಾಡಿದ್ದರು.

ಇದರ ವಿರುದ್ದ ಕನ್ನಡಿಗರು ತಿರುಗಿಬಿದ್ದಿದ್ದು, ನೂರಕ್ಕೂ ಹೆಚ್ಚು ರೈತರು ದಿಲ್ಲಿಯ ಕೊರೆಯುವ ಚಳಿಯಲ್ಲಿ ಸತ್ತು ಹೋದಾಗ ದೇಶದ ಘನತೆ, ಮರ್ಯಾದೆಯ ಪ್ರಶ್ನೆ ಎದೆಯಲ್ಲಿ ಮೂಡಲಿಲ್ಲವೇ? ಆಳುವ ಪಕ್ಷದ ಗುಲಾಮಗಿರಿ ಮಾಡುವುದಕ್ಕಿಂತ ಜನರ ಪರವಾಗಿ ನಿಂತುಕೊಳ್ಳಿ. ಇತಿಹಾಸ ನೆನಪಿಸಿಕೊಳ್ಳುತ್ತದೆ. ನಾಚಿಕೆಯಾಗಬೇಕು ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌‌ಬರ್ಗ್ ಮತ್ತು ಪಾಪ್‌ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?

ಸಂಯುಕ್ತ ಹೋರಾಟ ಕರ್ನಾಟಕ, “ಪ್ರತಿಭಟನೆ ಶುರುವಾದಾಗಿಂದ ನೂರಕ್ಕು ಹೆಚ್ಚು ರೈತರು ಸತ್ತಿದ್ದಾರೆ‌. ಸೆಪ್ಟೆಂಬರ್‌ನಿಂದ ಕರ್ನಾಟಕದ‌ ಹಾಗೂ ಕೇಂದ್ರದ ಕೃಷಿ ಕಾಯಿದೆ ತಿದ್ದುಪಡಿಗಳನ್ನು ಕರ್ನಾಟಕದಲ್ಲಿ‌ ವಿರೋಧಿಸುತಿದ್ದೇವೆ. ಒಮ್ಮೆಯಾದರು ಬಂದು ನಮ್ಮ ರೈತರು ಏಕೆ‌ ಹೊರಾಡುತಿದ್ದಾರೆ ಕೇಳಿದಿರೆ ಕುಂಬ್ಳೆ ಅವರೆ ? ಈಗ ಏನು ಟ್ವೀಟ್‌ ಮಾಡೋದು. ನಿಮ್ಮ ನಿಲುವು ಬಹಳ‌ ನೋವು ತಂದಿದೆ” ಎಂದು ಹೇಳಿದೆ.

ಸಂಯುಕ್ತ ಹೋರಾಟ ಕರ್ನಾಟಕವು ರೈತ, ಕಾರ್ಮಿಕ, ಮಹಿಳಾ ಹಾಗೂ ವಿದ್ಯಾರ್ಥಿಗಳ ಸಂಯುಕ್ತ ಹೋರಾಟದ ಒಕ್ಕೂಟವಾಗಿದೆ.

ಲೇಖಕ ಶ್ರೀನಿವಾಸ ಕಾರ್ಕಾಳ ಅವರು, “ಮಾನವ ಹಕ್ಕುಗಳ ಉಲ್ಲಂಘನೆಯು ಯಾವುದೆ ದೇಶದ ಆಂತಕರಿಕ ವಿಷಯವಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ ರಿಹಾನ್ನಾ: ಗೌರವಾರ್ಥವಾಗಿ ಹಾಡು ಸಮರ್ಪಿಸಿದ ದಿಲ್ಜಿತ್‌!

ಚೇತನ್ ಕೃಷ್ಣಾ ಅವರು, “ಕನ್ನಡಿಗರಾಗಿ ನೀವು ಇಂತಹ ಮನೆ ಹಾಳು ಸರಕಾರಕ್ಕೆ ಬಕೆಟ್ ಹಿಡಿಯುವುದು ನ್ಯಾಯವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ರೇಖಾ ಶ್ರೀನಿವಾಸ್ ಅವರು, “ಅಮೇರಿಕದ ಮಾಜಿ ಅಧ್ಯಕ್ಷ ಟ್ರಂಪ್ ಭಾರತವನ್ನು ಕೊಳಕು ದೇಶ ಅಂದಾಗ ಯಾರು ಮಾತಾಡಲಿಲ್ಲ. ಆದರೆ ಇಲ್ಲಿನ ರೈತರ ಬಗ್ಗೆ ಅನುಕಂಪ ತೋರಿಸಿದ ವಿದೇಶಿಯರು ಮಾಡಿದ ಒಂದೇ ಒಂದು ಬರಹಕ್ಕೆ ಎಷ್ಟು ಮಾತಾಡುತಿರೋ. ಇಷ್ಟು ದಿನ ರೈತ ಬೆಳೆದ ಅನ್ನ ತಿಂದಿದ್ದಕ್ಕಾದ್ರು ಸ್ವಲ್ಪ ನಿಯತ್ತು ಇರಲಿ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!

ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್‌ ಅವರು, “ನೂರಕ್ಕೂ ಹೆಚ್ಚು ರೈತರು ದಿಲ್ಲಿಯ ಕೊರೆಯುವ ಚಳಿಯಲ್ಲಿ ಸತ್ತುಹೋದಾಗ ದೇಶದ ಘನತೆ, ಮರ್ಯಾದೆಯ ಪ್ರಶ್ನೆ ಎದೆಯಲ್ಲಿ ಮೂಡಲಿಲ್ಲವೇ? ರೈತರ ಮೇಲೆ ದಾಳಿಯಾದಾಗ, ಸುಳ್ಳು ಕೇಸು ಹಾಕಿದಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು ಸರ್? ಆಳುವ ಪಕ್ಷದ ಗುಲಾಮಗಿರಿ ಮಾಡುವುದಕ್ಕಿಂತ ಜನರ ಪರವಾಗಿ ನಿಂತುಕೊಳ್ಳಿ. ಇತಿಹಾಸ ನೆನಪಿಸಿಕೊಳ್ಳುತ್ತದೆ. ನಾಚಿಕೆಯಾಗ ಬೇಕು ನಿಮಗೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಸರ್ಕಾರದಿಂದ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ – ರಾಹುಲ್ ಗಾಂಧಿ

ಇದನ್ನೂ ಓದಿ: ಭ್ರಷ್ಟ ನಾಯಕರನ್ನು ಖರೀದಿಸಬಹುದು; ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನಲ್ಲ – ಮಮತ ಬ್ಯಾನರ್ಜಿ

ಇದನ್ನೂ ಓದಿ: ಅದಾನಿಗೆ ಮಂಗಳೂರು ಏರ್‌ಪೋರ್ಟ್ ಗುತ್ತಿಗೆ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್

ಇದನ್ನೂ ಓದಿ: ನೀವು ಸುಳ್ಳು ಹೇಳುವ ವಿಧಾನ ನನಗೆ ಇಷ್ಟ: ಕಂಗನಾಗೆ ಕುನಾಲ್ ವ್ಯಂಗ್ಯ

3 COMMENTS

 1. ರಸ್ತೆಯನ್ನು ರಿಪೇರಿ ಮಾಡುವುದು ಬಿಟ್ಟ, ರೈತರ
  ಪರವಾದ ಬೇಡಿಕೆಯನ್ನು ನ್ಯಾಯೋಚಿತ ರೀತಿಯಲ್ಲಿ ಹೋರಾಟದ ಹಾದಿ ಹಿಡಿದವರ ಹಾದಿಗೆ ಮೊಳೆ ಹೊಡೆದವರ ಪರವಾದ ನಿಮ್ಮ ಗೂಗ್ಲಿ ಬೌಲಿಂಗ್ ಇಲ್ಲಿ ಟ್ವಿಸ್ಟ್ ಆಗೋದಿಲ್ಲ ಕುಂಬ್ಳೆ ಅಣ್ಣಾ…
  ನೀವೇನೋ ಕ್ರಿಕೆಟ್ ಆಟದಿಂದ ಗಳಿಸಿದ ಕೀರ್ತಿಗೆ ಬೇರಾರೂ ಕಾರಣರಲ್ಲ…ನಿಮ್ಮ ಯಶಸ್ಸಿನ ಪಾಲುದಾರಿಯಲ್ಲಿ ರೈತ, ಕಾರ್ಮಿಕರು ಕೂಡಾ…
  ಈ ಹೋರಾಟದಲ್ಲಿ ಹತ್ತಾರು ರೈತರ ಜೀವಗಳು ತ್ಯಾಗ
  ಬಲಿದಾನವಾಗಿವೆ.ನೀವೇನು ಅರ್ಪಿಸಬಲ್ಲಿರಿ ..?

 2. ಎಡ ಪಂಥಿಯರ ಯೋಚನೆಗಳು ಯಾವತ್ತೂ ಬಲಗೈಯಿಯವರು ಎಡಗೈಯಿಂದ ಮಾಡುವ ಕೆಲಸಗಳಿಗೆ ಸಮವಾಗಿರುತ್ತೆ.

 3. ಅನಿಲ್ ಕುಂಬ್ಳೆ ಅವರ ಬಗ್ಗೆ‌ ಇದ್ದ ಅದೆಷ್ಟು ಗೌರವದ ಬಂಡಲ್ಗಳು ಇಂದು ಉರುಳಿ ಬಿತ್ತು. ಅವರಿಗೆ ಆಳುವ ಪಕ್ಷದ ಎಂಎಲ್ಸಿ ಏನಾದರೂ ಆಗುವ ಮೊದಲ ಹರಕೆಯ ಉರುಳು ಸೇವೆ ಇದು.
  ರೈತರು ಯಾಕೆ ಚಳುವಳಿ ಮಾಡುತ್ತಿದ್ದಾರೆ ಅನ್ನುವ‌ ಕನಿಷ್ಠ ವಿಚಾರವೇ ಏನಾದರೂ ನಿಮಗೆ ತಿಳಿದಿದೆಯೇ?
  ಹತ್ತಿಕ್ಕಿ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈ ಹಾಕ ಬೇಡಿ…..ಪ್ಲೀನ್…

LEAVE A REPLY

Please enter your comment!
Please enter your name here