Homeಮುಖಪುಟನೀವು ಸುಳ್ಳು ಹೇಳುವ ವಿಧಾನ ನನಗೆ ಇಷ್ಟ: ಕಂಗನಾಗೆ ಕುನಾಲ್ ವ್ಯಂಗ್ಯ

ನೀವು ಸುಳ್ಳು ಹೇಳುವ ವಿಧಾನ ನನಗೆ ಇಷ್ಟ: ಕಂಗನಾಗೆ ಕುನಾಲ್ ವ್ಯಂಗ್ಯ

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಅಂತಾರಾಷ್ಟ್ರೀಯ ಬೆಂಬಲ ವ್ಯಕ್ತವಾಗುತ್ತಿದೆ. ಇಂದು ಪಾಪ್ ಗಾಯಕಿ ರಿಹಾನ್ನಾ ’ನಾವ್ಯಾಕೆ ಈ ವಿಷಯದ ಕುರಿತು ಚರ್ಚಿಸುತ್ತಿಲ್ಲ’ ಎಂದು ಸಿಎನ್‌ಎನ್‌ ಲೇಖನವನ್ನು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

ರಿಹಾನ್ನಾ ಟ್ವೀಟ್ ಮಾಡುತ್ತಿದ್ದಂತೆ ಭಾರತದ ಬಲಪಂಥೀಯರು ಹಾಗೂ ಬಿಜೆಪಿ ಬೆಂಬಲಿಗರು ವಾಡಿಕೆಯಂತೆ ಅವರ ವ್ಯಕ್ತಿತ್ವ ಹರಣ ಸೇರಿಂತೆ, ವೈಯಕ್ತಿಕವಾಗಿ ನಿಂದಿಸಲು ಪ್ರಾರಂಭಿಸಿದ್ದಾರೆ. ಬಾಲಿವುಡ್ ನಟಿ ಹಾಗೂ ಬಿಜೆಪಿಯ ಪ್ರಮುಖ ಬೆಂಬಲಿಗರಾಗಿರುವ ಕಂಗನಾ ರಾಣಾವತ್‌ ಕೂಡಾ ಅವರನ್ನು ಟ್ವಿಟ್ಟರ್‌ನಲ್ಲಿ ನಿಂದಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌‌ಬರ್ಗ್ ಮತ್ತು ಪಾಪ್‌ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?

ರಿಹಾನ್ನಾ ಅವರು ರೈತರ ಬಗ್ಗೆ ನಾವ್ಯಾಕೆ ಚರ್ಚಿಸುತ್ತಿಲ್ಲ ಎಂದು ಹೇಳಿರುವುದಕ್ಕೆ ಕಂಗನಾ ರಾಣಾವತ್‌, “ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ, ಯಾಕೆಂದರೆ ಅವರು ರೈತರಲ್ಲ, ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರು. ಇದರಿಂದಾಗಿ, ಚೀನಾ ದೇಶವು ಅಮೆರಿಕಾವನ್ನು ತನ್ನ ವಸಾಹತು ಮಾಡಿದಂತೆ, ಭಾರತವನ್ನು ಕೂಡಾ ದುರ್ಬಲ ಮಾಡಿ ಸ್ವಾಧೀನ ಮಾಡಿಕೊಳ್ಳಬಹುದು. ಮೂರ್ಖರೇ, ಕುಳಿತುಕೊಳ್ಳಿ, ನಿಮ್ಮಂತೆಯೇ ನಾವು ನಮ್ಮ ರಾಷ್ಟ್ರವನ್ನು ಮಾರಾಟ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರಕ್ಕೆ ಅಕ್ಟೋಬರ್‌‌ವರೆಗೆ ಸಮಯ, ಬಗ್ಗದಿದ್ದರೆ 40 ಲಕ್ಷ ಟ್ರಾಕ್ಟರ್‌ಗಳ‌ ರ್‍ಯಾಲಿ: ಎಚ್ಚರಿಕೆ ರವಾನಿಸಿದ ಟಿಕಾಯತ್

ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟಾಂಡ್ ಅಪ್ ಕಾಮೇಡಿಯನ್ ಕುನಾಲ್ ಕಮ್ರಾ, “ಎಲ್ಲವೂ ಸರಿ, ನೀವು ಸುಳ್ಳು ಹೇಳುವ ದಾರಿ ನನಗೆ ಇಷ್ಟ” ಎಂದು ಹೇಳಿದ್ದಾರೆ.

ಕಂಗಾನಾ ಹೇಳುವಂತೆ ಅಮೆರಿಕವು ಚೀನಾದ ವಸಾಹತು ರಾಷ್ಟ್ರವಾಗಿಲ್ಲ, ಆದರೆ ಭಾರತದ ಅರುಣಾಚಲ ಪ್ರದೇಶದ ಹಳ್ಳಿಯೊಂದನ್ನು ಆಕ್ರಮಿಸಿರುವ ಚೀನಾವು ಅಲ್ಲಿ ಒಂದು ಹಳ್ಳಿಯನ್ನೆ ನಿರ್ಮಾಣ ಮಾಡಿದೆ ಎಂದು ವರದಿಯಾಗಿತ್ತು.

ಪಾಪ್ ಗಾಯಕಿ ರಿಹಾನ್ನಾ ರೈತರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪರ-ವಿರೋಧ ಚರ್ಚೆಗಳಾಗುತ್ತಿದೆ. ಅದಾಗಿಯು ಅವರ ಹೇಳಿಕೆಗಳ ನಂತರ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್, ಅಮೆರಿಕ ನಟಿ ಅಮಂಡ ಸೆರ್ನಿ, ಹಾಲಿವುಡ್ ನಟ ಜೋನ್ ಕಝ್ಝಕ್, ಅಮೆರಿಕ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಅವರ ಸೋದರಿಯ ಮಗಳು ಮೀನಾ ಹ್ಯಾರಿಸ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿಗಳು ರೈತರಿಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ: ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹವಾಗಿದ್ದ ಕೋಟ್ಯಂತರ ರೂ ಏನಾಯ್ತು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...