ಡೆತ್‌ನೋಟ್ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಹಾಸ್ಯಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಆಕ್ಷೇಪ ವ್ಯಕ್ತಪಡಿಸಿದ್ದು, “ಇದು ಅಸೂಕ್ಷ್ಮ” ಎಂದು ಟೀಕಿಸಿದ್ದಾರೆ.
ಪ್ರಧಾನಿ ಮತ್ತು ಅವರ ಹಾಸ್ಯಕ್ಕೆ ಮನದುಂಬಿ ನಗುತ್ತಿರುವವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ‘ಅಪಹಾಸ್ಯ’ ಮಾಡುವ ಬದಲು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಬುಧವಾರ ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ತಮ್ಮ ಮಗಳ ಆತ್ಮಹತ್ಯೆ ಟಿಪ್ಪಣಿಯನ್ನು ಓದುತ್ತಿರುವ ಪ್ರಾಧ್ಯಾಪಕರೊಬ್ಬರು- ಎಷ್ಟು ವರ್ಷಗಳ ಪ್ರಯತ್ನದ ಹೊರತಾಗಿಯೂ ಕಾಗುಣಿತ ತಪ್ಪಾಗಿದೆ- ಎಂದು ಹೇಗೆ ಟೀಕಿಸಿದ್ದರು” ಎಂದು ಹಾಸ್ಯ ಮಾಡಿದ್ದರು. ಇದನ್ನು ಕೇಳಿ, ಅಲ್ಲಿಂದ ಮಾಧ್ಯಮ ಸಿಬ್ಬಂದಿ ಗಹಗಹಿಸಿ ನಗುವುದನ್ನು ಕಾಣಬಹುದು.
Depression and suicide, especially among the youth IS NOT a laughing matter.
According to NCRB data, 164033 Indians committed suicide in 2021. Of which a huge percentage were below the age of 30. This is a tragedy not a joke.
The Prime Minister and those laughing heartily at… pic.twitter.com/yoPt5c8Kx7
— Priyanka Gandhi Vadra (@priyankagandhi) April 27, 2023
ಮೋದಿಯವರು ಮಾಡಿರುವ ಹಾಸ್ಯದ ವೀಡಿಯೊವನ್ನು ಟ್ಯಾಗ್ ಮಾಡಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿಯವರು, “ಖಿನ್ನತೆ ಮತ್ತು ಆತ್ಮಹತ್ಯೆ ಎಂಬುದು, ವಿಶೇಷವಾಗಿ ಯುವಜನರಿಗೆ ಹಾಸ್ಯದ ವಿಚಾರವಲ್ಲ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, 2021ರಲ್ಲಿ 1,64,033 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನ ಶೇಕಡಾವಾರು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ದುರಂತವಲ್ಲದೆ, ತಮಾಷೆಯ ವಿಚಾರವಲ್ಲ” ಎಂದು ತಿಳಿಸಿದ್ದಾರೆ.
“ಪ್ರಧಾನಿ ಮತ್ತು ಅವರ ಹಾಸ್ಯಕ್ಕಾಗಿ ಮನದುಂಬಿ ನಗುವವರು ಈ ಸೂಕ್ಷ್ಮವಲ್ಲದ, ಅಸ್ವಸ್ಥ ರೀತಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇದರ ಬದಲು ಉತ್ತಮ ಶಿಕ್ಷಣ ಮತ್ತು ಜಾಗೃತಿ ಮೂಡಬೇಕು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.
ಮಾನಸಿಕ ಆರೋಗ್ಯ ಸಮಸ್ಯೆಯ ಕುರಿತು ಕೆಲಸ ಮಾಡುವ ‘ದಿ ಲೈವ್ ಲವ್ ಲಾಫ್’ ಸಂಸ್ಥೆ ಮತ್ತು ಪ್ರಧಾನಿ ಮೋದಿಯವರನ್ನು ಟ್ವೀಟ್‌ನಲ್ಲಿ ಟ್ಯಾಗ್ ಅವರು ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. “ಸಾವಿರಾರು ಕುಟುಂಬಗಳು ಆತ್ಮಹತ್ಯೆಯ ಕಾರಣದಿಂದಾಗಿ ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತವೆ. ಪ್ರಧಾನ ಮಂತ್ರಿಗಳು ಅವರನ್ನು ವ್ಯಂಗ್ಯ ಮಾಡಬಾರದು” ಎಂದು ಅವರು ಮನವಿ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ರಾಹುಲ್ ಅವರ ಹೇಳಿಕೆಯನ್ನು ರೀಟ್ವೀಟ್ ಮಾಡಲಾಗಿದೆ.
ಸಾವಿರಾರು ಕುಟುಂಬಗಳು ಆತ್ಮಹತ್ಯೆಯ ಕಾರಣದಿಂದಾಗಿ ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತವೆ.
ಪ್ರಧಾನ ಮಂತ್ರಿಗಳು ಅವರನ್ನು ವ್ಯಂಗ್ಯ ಮಾಡಬಾರದು.
– @RahulGandhi https://t.co/zgd0yxffGV— Karnataka Congress (@INCKarnataka) April 27, 2023
ಇದನ್ನೂ ಓದಿರಿ: ಡೀಫಾಲ್ಟ್ ಜಾಮೀನು ತಡೆಯಲು ತನಿಖೆ ಪೂರ್ಣಗೊಳಿಸುವ ಮುನ್ನವೇ ಚಾರ್ಜ್‌ಶೀಟ್ ಸಲ್ಲಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್


