Homeಅಂಕಣಗಳುದೇಶದ ದುಬಾರಿ 'ನಾಮಿನೇಶನ್'ನಲ್ಲಿ ಖರ್ಚೇ ಇಲ್ಲದ ಚುನಾವಣೆಯ ಭೋಂಗು!

ದೇಶದ ದುಬಾರಿ ‘ನಾಮಿನೇಶನ್’ನಲ್ಲಿ ಖರ್ಚೇ ಇಲ್ಲದ ಚುನಾವಣೆಯ ಭೋಂಗು!

- Advertisement -
- Advertisement -

ಇದನ್ನು ಓದುವ ಹೊತ್ತಿಗೆ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿರುತ್ತಾರೆ. ಈಗಷ್ಟೇ ಸಾರ್ವಜನಿಕ ಭಾಷಣ ಮಾಡಿದ ಅವರು, ‘ಖರ್ಚೇ ಇಲ್ಲದೇ ಚುನಾವಣೆ’ ಮಾಡುವ ಕುರಿತು ಬೋಧನೆ ಮಾಡಿದರು! ವಿಚಿತ್ರ ಎಂದರೆ ನಿನ್ನೆ ಏ 25 ಮತ್ತು ಇವತ್ತು ಏ 26ರಂದು ಮೋದಿಯ ನಾಮಿನೇಶನ್ ವೈಭವ ನೋಡಿದರೆ, ಇದೊಂದು ದುಬಾರಿ ನಾಮಿನೇಶನ್ ಎಂಬುದು ಕಣ್ಣಿಗೆ ಹೊಡೆಯುತ್ತದೆ. ಬಹುಷ: ಕಾಶಿ ವಿಶ್ವನಾಥನೂ ಈ ಹುಸಿ ಮಾತುಗಳನ್ನು ಕೇಳಿ ನಕ್ಕಿರಬೇಕೇನೋ?

ವಿಚಿತ್ರ ಎಂದರೆ, ವಾರಣಾಸಿಯಲ್ಲಿ ಅವರು ಖರ್ಚೇ ಇಲ್ಲದೇ ಚುನಾವಣೆ ಮಾಡುತ್ತಾರಂತೆ! ದಶ್ವಾಶಮೇಧ, ಗಂಗಾ ಆರತಿ ಮತ್ತು ಮಣ್ಣುಮಸಿ ಅಂತೆಲ್ಲ ನಿನ್ನೆ ಏ 25ರಂದು ಅದೆಷ್ಟು ಕೋಟಿಗಳನ್ನು ವ್ಯಯಿಸಲಾಗಿದೆ. ಇದು ಖರ್ಚೇ ಇಲ್ಲದ ಚುನಾವಣೆಯೇ ಮೋದೀಜಿ?

ಹಾಗೆ ನೋಡಿದರೆ, ಇವತ್ತು ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿದ ಹಣದಲ್ಲಿ ಶೇ. 98ರಷ್ಟು ಬಿಜೆಪಿ ಮಡಿಲಿಗೆ ಸೇರಿದೆ. ಅನಾಮಧೇಯ ಫಂಡಿಂಗ್‌ನಲ್ಲೂ ಬಿಜೆಪಿ ಸಾವಿರಾರು ಕೋಟಿ ಪಡೆದಿದೆ. ಕಳೆದ ವರ್ಷ 2017-18ರಲ್ಲಿ ಚುನಾವಣೆಯ ಉದ್ದೇಶಕ್ಕೆ ಕಾಂಗ್ರೆಸ್ 29.22 ಕೋಟಿ ರೂ ವ್ಯಯಿಸಿದ್ದರೆ, ಬಿಜೆಪಿ 567.43 ಕೋಟಿ ರೂ ವ್ಯಯಿಸಿದೆ!

ಸರ್ಕಾರದ ಜಾಹಿರಾತಿಗಾಗಿ ಬಿಜೆಪಿ ನಾಲ್ಕೂವರೆ ವರ್ಷದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಸದ್ಯ ಚುನಾವಣೆಗೆ ಅತಿ ಹೆಚ್ಚು ಖರ್ಚು ಮಾಡುತ್ತಿರುವುದೂ ಬಿಜೆಪಿಯೇ.
ಸಂಪೂರ್ಣದ ಹಣದ ಅಲೆಯ ಮೇಲೇ ಚುನಾವಣೆ ಮಾಡುತ್ತಿರುವ ಬಿಜೆಪಿ ಮೋದಿಯ ನಾಮಪತ್ರ ಸಲ್ಲಿಕೆಗೇ ಹತ್ತಾರು ಕೋಟಿ ವ್ಯಯಿಸಿದೆ. ಆದರೆ, ನಾಮಪತ್ರ ಸಲ್ಲಿಕೆಗೂ ಮೊದಲು ಸಾರ್ವಜನಿಕ ಭಾಷಣ ಮಾಡಿದ ಮೋದಿ, ‘ಬಿನಾ ಖರ್ಚಾ ಚುನಾವ್’ ( ಖರ್ಚೇ ಮಾಡದೇ ಚುನಾವಣೆ) ಬಗ್ಗೆ ಭೋಗು ಬಿಟ್ಟಿರುವುದು ಇವತ್ತಿನ ದೊಡ್ಡ ಜೋಕ್ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...