Homeರಾಜಕೀಯಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

- Advertisement -
- Advertisement -

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ, ಇವತ್ತು ನಂ ದೇಸುದಾಗೆ ಏನೇನ್ ಅನಾನುಕೂಲ ಆಗ್ಯದೆ ಅನ್ನೋದುನ್ನ ಮರತುಬಿಡಿ. ಅಜಮಾಸು ನಲುವತ್ತು ವರ್ಸುದ ಹಿಂದಿನ ಇತಿಹಾಸುವ ಒಸಿ ನ್ಯೆಪ್ತಿ ಮಾಡ್ಕಳಿ. ಅದುಕ್ಕೆ ಸಮಂಧಪಟ್ಟಂಗೆ ಜಾಗೃತ್ರಾಗಿ. ಅವುತ್ತು ಈ ದ್ಯೇಸುದ ಮ್ಯಾಕೆ ಎಮುರ್ಜೆನ್ಸಿ ಹ್ಯೇರಿದ್ದವುರು, ಅದುನ್ನು ವಿರೋಧಿಸಿದ್ದವುರು, ಇವತ್ತು ಕೇವುಲ ಅಧಿಕಾರುಕ್ಕಾಗಿ ಒಬ್ಬರ ಕೈಯೊಳಿಕ್ಕೆ ಮತ್ತೊಬ್ಬರು ಕೈ ಜ್ಯೋಡಿಸ್ಕ್ಯಂಡ ಕುಂತವುರೆ. ಅವುರಿಗೆ ತಕ್ಕುನ ಪಾಟ ಕಲುಸಿ. ಈಗ ನಾನು ಮೂರು ಸಲ ಎಮುರ್ಜನ್ಸಿ ಅಂತೀನಿ, ನೀವೆಲ್ಲ ಕೈಯೆತ್ತಿ ಅಂಗೇ ಆಕ್ಷುನ್ ಮಾಡ್ಕ್ಯಂತ ರಿಪೀಟ್ ಮಾಡಿ…..’
– ನರೇಂದ್ರ ಮೋದಿ, ಮಾತಿಗೆ ಮರುಳಾದ ದೇಶಕ್ಕೆ ಸಿಕ್ಕಿರೋ ದುಬಾರಿ ದೊರೆ

*****

ಅನಂತ್ಕುಮಾರ್ ಹೆಗುಡೆ ಒಬ್ಬ ಲೋಪರ್ರು ಕಣ್ರೀ… ನೀಚ ಕಣ್ರೀ… ಹುಬ್ಳಿಯಾಗೆ ಯಾರೋ ಹಾರುಸಿದ್ದ ಧ್ವಜುವಾ ನಾನೇ ಹಾರುಸಿದ್ದು ಅಂತ ಆರೆಸ್ಸೆಸ್ನೋರ ಸಭೆಗಳುಲ್ಲಿ ಹ್ಯೇಳ್ಕಂಡ ತಿರುಗ್ಯಾಡ್ತಾ ಅವುನೆ. ಅವುನು ಎಲ್ಲರಿಗೂ ಹೊಡುದವುನೆ. ಬೀಜೇಪಿ ಪಾಲ್ಟಿ ಆಪಿಸ್ನಾಗೇ ಆ ಇಸ್ವೇಸ್ವರ ಹೆಗುಡೆ ಕಾಗೇರಿಗೆ ಯಕ್ಕಡಾ ತಕೊಂಡು ಹೊಡುದಿದ್ದ. ಅವುನಂಥಾ ನೀಚ ಇಡಿ ದೇಸುದಾಗೇ ಯಾರು ಇಲ್ಲ ಬಿಡಿ. ಅವುನು ನಂ ಜಿಲ್ಲೆಗೆ ಸಂಸುದ ಆಗ್ಯಿರೋದೆ ದುರಂತ’
– ಆನಂದ್ ಆಸ್ನೋಟಿಕರ್, ಕರಾವಳಿ ಭಾಗದ ಜೆಡಿಎಸ್ ಪಳೆಯುಳಿಕೆ

*****

ಈ ತಾಜಮಹಲು ಏನ್ ಇದ್ಯೆಲಾ, ಅದು ಅಕ್ಚುಲೀ ಸಿವುನ ದ್ಯೇವುಸ್ತಾನುವಂತೆ. ಅಂಥಾ ದ್ಯೇವುಸ್ತಾನ ಕಂ ಮಹಲುನ್ನ ಹೊಡೆಯೋಕ್ಕೆ ಅಂತ ನಂ ಯೂಪಿ ಸೀಎಂ ಸ್ವಾಮಿಗೊಳಾದ ಆದಿತ್ಯನಾಥುರು ಹೊಂಟವುರೆ. ಅವುರೇನಾದ್ರು ದಿಟವಾಗ್ಲೂ ಆ ಕ್ಯೆಲುಸಕ್ಕೆ ಕೈ ಹಾಕುದ್ರೆ, ಅದುಕ್ಕೆ ಹ್ಯೆಗಲು ಕ್ವೊಡಕ್ಕೆ ನಾನೂ ಸಿದ್ದ. ಬೇಕಾರೆ ಬೀಜೇಪಿಗೂ ಸೇರ್ಕಂಬುಡ್ತೀನಿ. ಜ್ವತೀಗೆ ಇಪ್ಪತ್ತು ಸಾವುರ ಜನಾನು ಕರ್ಕಂಬತ್ತೀನಿ. ಈ ಆಪರ್ರು ಒಪ್ಕಂಡಾರಾ ನಂ ಯೂಪಿ ಸೀಎಂ…
– ಆಜಂ ಖಾನ್, ಸಮಾಜವಾದಿ ಪಾರ್ಟಿಯ ಕಾಂಟ್ರವರ್ಸಿಯಲ್ ಕಿಲಾಡಿ

*****

ನಂ ಕರ್ನಾಟುಕದಲ್ಲಿರೋ ಪರಬಾಸಿಕರನ್ನ ನಡು ರಸ್ತೇನಾಗೇ ಸುಟ್ಟು ಹಾಕ್ಬೇಕು ಕಣ್ರೀ. ಅವುರೆಲ್ಲ ಇಲ್ಲಿಗೆ ಬಂದು ವಕ್ಕರಿಸಿಕ್ಯಂಡಿದ್ದುರಿಂದ್ಲೇ ಬೆಂಗ್ಳೂರು ನಂ ಕೈತ್ಯೆಪ್ಪಿ ಹೋಗೈತಿ. ಅವುರನ್ನು ಇಲ್ಲಿಂದ ಹೊರಕ್ಕೆ ದೂಡಕ್ಕೆ ನಾವೆಲ್ಲ ಮತ್ತೆ ಚಳುವಳಿ ಸುರು ಮಾಡ್ಬೇಕಾಗೈತಿ. ಜೈ ಕನ್ನುಡಾಂಬೆ…                                                                                  – ವಾಟಾಳ್ ನಾಗರಾಜ್, ವಿಚಿತ್ರ ಚಳುವಳಿಗಳ ಸಚಿತ್ರ ಕಾರ್ಟೂನ್

*****

ನಾ ಹ್ಯೇಳ್ತೀನಿ ಕ್ಯೇಳಿ, ಈ ಸಮ್ಮಿಸ್ರು ಸರ್ಕಾರ ಬಾಳ ದಿನ ಉಳಿಯಂಗಿಲ್ಲ. ಯಾಕಂದ್ರೆ ನಂ ಬಳ್ಳಾರಿ ರಾಜ್ಯುದ ಇತಿಹಾಸುದಾಗೆ ಯಾವ ಕೊಲೀಷನ್ ಗೋರ್ಮೆಂಟೂ ಪುಲ್‍ಟೇಮು ಅಧಿಕಾರುವ ಮಾಡಿದ ಎಜ್ಜಾಂಪಲ್ಲೇ ಇಲ್ಲ. ಅಂತದ್ರಾಗೆ ಇವುರು ಮಾಡ್ಯಾರಾ? ನೋ ಚಾನ್ಸ್. ಬಿದ್ದೋಯ್ತರೆ ನೋಡ್ತಾ ಇರಿ…
– ಬೀ ಶ್ರೀರಾಮುಲು, ಬಿಜೆಪಿಯ ಗಡ್ಡಧಾರಿ ಅವತಾರ ಪುರುಷ

*****

ಈ ಮಠಾಧೀಸರು ಏನವುರಲ್ಲ, ಅವುರು ಅಧಿಕಾರ ಇದ್ದಕಡೀಕೆ ವಾಲಿಕ್ಯಂತಾರೆ. ಜನುರ ಕಷ್ಟ ಸುಖದ ಬಗ್ಗೆ ಮಾತಾಡೋದು ಬುಟ್ಟು, ರಾಜಕಾರಣುದಾಗೆ ಮೂಗು ತ್ವೂರ್ಸಕ್ಕೆ ಬತ್ತಾರಲ್ಲ, ಇವ್ರಿಗೆ ಏನನ್ನಬೇಕು? ಇವತ್ತು ಸಿದ್ರಾಮಯ್ಯುನ ಪರುವಾಗಿ ಮಾತಾಡೊ ಕುರುಬರ ಸ್ವಾಮಿ, ಅವತ್ತು ಇದೇ ಸಿದ್ರಾಮಯ್ಯ ನನಿಗೆ ಅನ್ಯಾಯ ಮಾಡುವಾಗ ಎತ್ತಗೋಗಿದ್ರು. ಯಾಕೆ, ನಾನು ಕುರುಬನಲ್ಲುವಾ…?
– ಎಚ್ಚ್ ವಿಶ್ವನಾಥ್, ಗೌಡರ ಹಟ್ಟಿಯ ನಿರಾಶ್ರಿತ ಶಿಬಿರದ ಫಲಾನುಭವಿ

*****

ಸ್ವಿಸ್ ಬ್ಯಾಂಕಿನಾಗೆ ಇಟ್ಟಿರೋ ಭಾರತೀಯರ ಹಣ ಕಳುದ ವರ್ಸ ಡಬಲ್ ಆಗ್ಯದೆ ಅನ್ನೋ ಸುದ್ದಿ ನನಿಗೂ ಬಂದದೆ. ಹಾಗಂತ ಅದು ಬ್ಲ್ಯಾಕ್ ಮನಿ ಅಲ್ಲಾ ಕಣ್ರೀ. ನಂ ಎನ್ನಾರೈಗಳು ಶ್ಯಾನೆ ಕಸ್ಟಪಟ್ಟು ದುಡುದು ಕೂಡಿಟ್ಟ ನ್ಯಾಯಬದ್ಧ ಹಣ ಆಗಿರ್ಬೈದಲ್ವಾ. ಯಾಕ್ರೀ ನಂ ಜನುಕ್ಕೆ ಕನ್‍ಫ್ಯೂಜ್ ಮಾಡ್ತೀರಾ?
– ಪಿಯೂಷ್ ಗೋಯೆಲ್, ಬ್ಲ್ಯಾಕ್‍ಮನಿ ಸ್ಪೆಷಲಿಸ್ಟ್
ಮೋದಿ ಸಂಪುಟದ ಮನಿ ಮಂತ್ರಿ

*****

ಲುಕ್ ಮೈ ಡಿಯರ್ ಫ್ರೆಂಡ್ಸ್, ಒಂದು ಸತ್ಯುವ ಹ್ಯೇಳ್ತೀನಿ ಅರುಗಿಸಿಕೊಳ್ಳಿ. ನಾವು ಇವತ್ತು ಪ್ಲ್ಯಾಸ್ಟಿಕ್ ಕುರ್ಚಿನಾಗೆ ಕೂತ್ಕಂಡಿರೋದ್ಕೆ ಆ ಕಾಂಗ್ರೆಸ್ ಪಾಲ್ಟಿಯೇ ಕಾರುಣ. ಅಕಸುಮಾತ್ ಎಪ್ಪತ್ತು ವರ್ಸುದ ಹಿಂದೆಯೇ ದೇಸುದಾಗೆ ಬೀಜೇಪಿ ಅಧಿಕಾರುಕ್ಕೆ ಬಂದಿದ್ದ್ರೆ ಎಲ್ರೂ ಬ್ಯೆಳ್ಳಿ ಕುರ್ಚಿನಾಗೆ ಕುಂತ್ಕಂಡಿರ್ತಿದ್ವಿ. ಎಲ್ಡು ಸಾವುರದ ಹತ್ರೊಂಬ್ವತ್ತರ ಎಲೆಕ್ಸೆನ್ನಾಗೆ ಒಂದು ಹ್ವುಲೀನ ಸೋಲುಸಕ್ಕೆ ಕಾಗ್ಯಣ್ಣ, ನರಿಯಣ್ಣ, ತ್ವಾಳಣ್ಣ, ಕರಿಡ್ಯಣ್ಣಗಳು ಒಂದಾಗ್ಯವೆ. ಈ ಕತ್ತೆಕ್ಯಿರುಬಗಳು ಗ್ಯೆಲ್ಲಬೇಕೊ, ಅಥುವಾ ನಂ ಹ್ವುಲಿ ಗ್ಯೆಲ್ಲಬೇಕೊ ನೀವೇ ಡಿಸೈಡ್ ಮಾಡಿ…
– ಅನಂತ್‍ಕುಮಾರ್ ಹೆಗಡೆ, ನಾಲಿಗೆ ನರದ ಸ್ವಾಧೀನ ಕಳೆದುಕೊಂಡಿರುವ ಕೇಂದ್ರ ಮಂತ್ರಿ

*****

ಒಬ್ಬೊಬ್ರ ಅಕೋಂಟಿಗೂ ಹದುನೈದು ಲಕ್ಸುವ ರೊಕ್ಕ ಹಾಕ್ತೀನಿ ಅಂತ ಎಲೆಕ್ಸನ್ ಟೇಮಿನಾಗೆ ಹ್ಯೇಳಿ, ಕಡೀಕೆ ಹದುನೈದ್ರುಪಾಯುನೂ ಹಾಕದ ಮ್ವೋದಿಯವುರಿಗೆ ನಂ ಸೀಎಂ ಕುಮಾರ್ಸೋಮಿ ಬಗ್ಗೆ ಮಾತಾಡಕ್ಕೆ ಅದೆಂತದೋ ಅಂತಾರಲ್ಲ, ಅದು ಇಲ್ಲ ಕಣ್ರೀ. ಸೋನ್ಯಾ ಗಾಂದಿ, ರಾಹುಲ್ ಗಾಂದಿ ಇಬ್ರೂನುವೆ, ಬೇಸರತ್ ಬೆಂಬುಲವ ಕೊಡ್ತೀವಿ ನೀವು ಜೇಡಿಯೆಸ್ ಗೋರ್ಮೆಂಟ್ ಮಾಡ್ಕಳಿ ಅಂತ ಹ್ಯೇಳಿದ್ದ್ರು. ಆದ್ರೆ ನಂ ದ್ವೊಡ್ಡಗೌಡ್ರು ಬ್ಯಾಡ, ಬ್ಯಾಡ ಇಬ್ರೂ ಕೂಡೇ ಸರ್ಕಾರುವ ಮಾಡನ ಅಂತೇಳಿದ್ದುಕ್ಕೆ ಇವತ್ತು ಸಮ್ಮಿಸ್ರು ಸರ್ಕಾರ ಆಗ್ಯದೆ. ಅದು ಐದು ವರ್ಸ ಅಲ್ಲಾಡಕಿಲ್ಲ ನೋಡ್ತಾ ಇರಿ…
– ಸಾರಾ ಮಹೇಶ್, ಮೇಡಂ ಭವಾನಿಯವರ ಕೃಪಾಶೀರ್ವಾದ ಇರುವ ಜೆಡಿಎಸ್ ಮಂತ್ರಿ

*****

ನಂ ಮ್ವೋದಿ ಸಾಹೇಬ್ರು ಪರ್ದಾನಿಯಾದ ಮ್ಯಾಕೆ ದ್ಯೇಸ ಶ್ಯಾನೆ ಅಭಿರುದ್ದಿ ಆಗ್ಯದೆ. ಕಳುದ ಎಂಟೇ ತಿಂಗ್ಳಾಗೆ ನಲ್ವತ್ತ್ವೊಂದು ಲಕ್ಸ ಉದ್ಯೋಗ ಹುಟ್ಕ್ಯಂಡವೆ ಮಹಾಸಯುರೆ. ಯಪ್ಪತ್ತು ವರ್ಸುದಿಂದ ಉದ್ದಾರುವೇ ಆಗುದೇ ಹಾಳು ಕ್ವೊಂಪ್ಯೆಯಾಗಿದ್ದ ಈಶಾನ್ಯುದ ರಾಜ್ಯಗಳು ಮ್ವೋದಿಯವುರ ಆಡಳಿತುದಾಗೆ ಯಾಪಾಟಿ ಉದ್ದಾರ ಆಗ್ಯವೆ ಅಂದ್ರೆ, ನಂಗೆ ಯೋಳಕ್ಕೆ ಮಾತ್ವುಗಳೇ ಬತ್ತಿಲ್ಲ ಕಣ್ರೀ, ಆಹ್ಞಾ…ಹಾ.. ಹಾ.. ಇಲ್ನೋಡಿ ಥೇಟು ನನ್ ಹಲ್ಲುಗುಳ ಥರಾ ಹೊಳೀತಾ ಕುಂತವೆ. ಇನ್ನು ಸಿಟಿಗುಳಂಗೆ ನಂ ಹಳ್ಳ್ಯಿಗುಳೂ ಸಿಕ್ಕಾಪಟ್ಟೆ ಇಂಪ್ರೂವ್ ಆಗ್ಯವೆ..
– ಡಿ.ವಿ.ಸದಾನಂದ ಗೌಡ, ಅಳುವಾಗ್ಲೂ ನಗುತ್ತಿರುವಷ್ಟೇ ಕಳೆಯಿಂದ
ಕಾಣುವ ಬಿಜೆಪಿಯ ವಜ್ರದಂತಿ ಸಚಿವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...