ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗಿ ಮಂಡಿಗಳಿಗೆ ಅವಕಾಶ ಕಲ್ಪಿಸುವುದಕ್ಕೆ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಿರುವ ಬೆನ್ನಲ್ಲೇ ಎಪಿಎಂಸಿಗಳು ಸೊರಗತೊಡಗಿವೆ ಎಂದು ರೈತರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದೇ ಸಿಕ್ಕಷ್ಟು ಬೆಲೆಗೆ ಮಾರಬೇಕಾದ ಪರಿಸ್ಥಿತಿ ಬಂದೊದಗಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಜನಸಾಮಾನ್ಯರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, #Modi_Killing_Mandis (ಮೋದಿ ಎಪಿಎಂಸಿಗಳನ್ನು ಕೊಲ್ಲುತ್ತಿದ್ದಾರೆ) ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಈವರೆಗೂ ಸುಮಾರು 72 ಸಾವಿರ ಟ್ವೀಟ್‌ಗಳು ದಾಖಲಾಗಿವೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ‘ಮೂರು ಕರಾಳ ಕೃಷಿ ಕಾಯ್ದೆಗಳ ಅನುಷ್ಠಾನವು ಕನಿಷ್ಠ ಬೆಂಬಲ ಬೆಲೆಯ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲದೇ ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ಮಂಡಿಗಳನ್ನು ಕೊಲ್ಲುವ ಈ ಹೊಸ ಕಾನೂನುಗಳು ಸಣ್ಣ ಮತ್ತು ಬಡ ರೈತರ ಮೇಲೆ ಕೆಟ್ಟ ಪರಿಣಾಮ ಬೀರಲಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
STRANGE:
Governments of other countries are focusing on eliminating COVID-19 and boosting economy
Whereas Modi Govt. is focusing on winning the elections and ruining the agriculture sector.#Modi_Killing_Mandis— Kisan Ekta Morcha (@Kisanektamorcha) April 15, 2021
‘ಬೇರೆ ದೇಶಗಳು ಕೋವಿಡ್-19 ಎದುರಿಸಲು ಮತ್ತು ಆರ್ಥಿಕತೆ ಪುನಶ್ಚೇತನಗೊಳಿಸುವತ್ತ ಗಮನಹರಿಸಿದ್ದರೆ, ಮೋದಿ ಸರ್ಕಾರ ಕೃಷಿ ಕ್ಷೇತ್ರವನ್ನು ನಾಶ ಮಾಡುತ್ತಾ ಚುನಾವಣೆಯಲ್ಲಿ ಗೆಲ್ಲುವುದರ ಬಗ್ಗೆ ಗಮನಹರಿಸಿದೆ’ ಎಂದು ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದೆ.
ಜಿಂದ್‌ಮನ್ ಎನ್ನುವವರು ಎಪಿಎಂಸಿ ಮಂಡಿಗಳ ಪರವಾಗಿ ಟ್ವೀಟ್ ಮಾಡಿದ್ದು, ‘ಮಂಡಿಗಳಿಗೆ ರೈತರು ತರುವ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರಕುವುದು ಎಂಬ ನಂಬಿಕೆ ಎಂಪಿಎಂಸಿಗಳಲ್ಲಿದೆ. ಆದರೆ ಮೋದಿ ಮಂಡಿಗಳನ್ನು ನಾಶಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಮಂಡಿಗಳೆಂದರೆ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಎಂದರ್ಥ. ಅವುಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ರೈತರನ್ನು ಬಂಡವಾಳಶಾಹಿಗಳ ಮರ್ಜಿಗೆ ದೂಕುತ್ತಿದೆ. ಒಂದು ದೇಶ, ಒಂದು ಮಂಡಿ ಎಂಬುದು ಕೇವಲ ಮರೀಚಿಕೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ಕೃಷಿ ಕಾನೂನುಗಳು 6 ತಿಂಗಳಲ್ಲಿ ಮಧ್ಯಪ್ರದೇಶದ 70% ಮಂಡಿಗಳನ್ನು ಪಾರ್ಶ್ವವಾಯುವಿಗೆ ತಳ್ಳಿವೆ ಎಂದು ಯಾಸ್ಸಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Implementation of the 3 Black Farm Laws will surely have an adverse impact on the Minimum Support Price (MSP), further weakening the Mandi systems.
The new laws are going hit the small & poor farmers badly, resulting in killing of the mandis#Modi_Killing_Mandis pic.twitter.com/1SgHPc8bEc
— Kisan Ekta Morcha (@Kisanektamorcha) April 15, 2021
ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಮಾಡಿರುವ ರೈತ ವಿರೋಧಿ ಕೃಷಿ ಕಾಯ್ದೆಗಳು ರದ್ದಾಗಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧವಾಗಬೇಕು ಎಂದು ಒತ್ತಾಯಿಸಿ ಕಳೆದ 140 ದಿನಗಳಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ದೆಹಲಿ ಗಡಿಗಳಲ್ಲಿ ಮೊಕ್ಕಾಮ್ ಹೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈವರೆಗೂ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡದ ಒಕ್ಕೂಟ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಮಾಡಿರುವುದಲ್ಲದೇ, ರಸಗೊಬ್ಬರ ದರ ಏರಿಕೆಗೆ ಮೌನವಾಗಿಯೇ ಸಮ್ಮತಿ ಸೂಚಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
New farm laws paralyzed 70% of MP's Mandis in 6 months.#Modi_Killing_Mandis pic.twitter.com/CDDB0TO87n
— ਜੋ ਅੜੇ ਸੋ ਝੱੜੇ (@YassiYatt) April 15, 2021
ಕರ್ನಾಟಕದಲ್ಲಿ ಈವರೆಗೂ ಸುಮಾರು 13 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇತ್ತು. ರೈತರು ಮಂಡಿಗಳಲ್ಲಿ ಕನಿಷ್ಠ ಬೆಂಬಲ ಬೆಲೆಗೆ ತಮ್ಮ ಬೆಳೆಗಳನ್ನು ಮಾರುತ್ತಿದ್ದರು. ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರವು ಸಹ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಾಗಾಗಿ ಇಲ್ಲಿಯ ಎಪಿಎಂಸಿಗಳು ಸಹ ಸೊರಗುತ್ತಿವೆ ಎಂಬ ಆರೋಪ ಕೇಳಿಬಂದಿವೆ.
ಕೃಪೆ: ಅನ್ನದ ಋಣ
ಇದನ್ನೂ ಓದಿ; ರೈತ ಹೋರಾಟ: ಕೇಂದ್ರದೊಂದಿಗೆ ಮಾತುಕತೆಗೆ ಸಿದ್ದವಿದ್ದೇವೆ, ಹಕ್ಕೊತ್ತಾಯಗಳು ಅವೆ ಇರಲಿವೆ- ರಾಕೇಶ್ ಟಿಕಾಯತ್


