Homeಮುಖಪುಟ‘ಬಿಜೆಪಿಯು ಟಿಎಂಸಿ ಮುಕ್ತ ಭಾರತಕ್ಕೆ ಕರೆ ನೀಡುವುದಿಲ್ಲ ಏಕೆ’: ರಾಹುಲ್ ಗಾಂಧಿ ಪ್ರಶ್ನೆ

‘ಬಿಜೆಪಿಯು ಟಿಎಂಸಿ ಮುಕ್ತ ಭಾರತಕ್ಕೆ ಕರೆ ನೀಡುವುದಿಲ್ಲ ಏಕೆ’: ರಾಹುಲ್ ಗಾಂಧಿ ಪ್ರಶ್ನೆ

- Advertisement -
- Advertisement -

ಬಿಜೆಪಿ ‘ಕಾಂಗ್ರೆಸ್ ಮುಕ್ತ ಭಾರತ್’ಕ್ಕೆ ಕರೆ ನೀಡುತ್ತದೆಯೇ ಹೊರತು ‘ಟಿಎಂಸಿ-ಮುಕ್ತ ಭಾರತ್’ಕ್ಕೆ ಅಲ್ಲ ಏಕೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಬುಧವಾರ ಮೊದಲ ಬಾರಿಗೆ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ, ಟಿಎಂಸಿ ಮತ್ತು ಬಿಜೆಪಿಯ ನಡುವಿನ ನೇರಾನೇರ ಹಣಾಹಣಿ ಎಂದು ಬಿಂಬಿತವಾದ ಈ ಚುನಾವಣೆಯಲ್ಲಿ ಕಾಂಗ್ರೆಸ್-ಎಡಪಕ್ಷಗಳೂ ಇದ್ದು ಇದು ತ್ರಿಕೋನ ಸ್ಪರ್ಧೆ ಎಂಬುದನ್ನು ಮನದಟ್ಟು ಮಾಡಲು ಯತ್ನಿಸಿದ್ದಾರೆ. ಹಾಗಾಗಿ ಈ ಚುನಾವಣೆ ತತ್ವದ ಮೇಲೆ ನಡೆಯುವ ಹೋರಾಟವಾಗಲಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ ನಾಲ್ಕು ಹಂತಗಳು ಮುಗಿದಿವೆ. ಇಷ್ಟು ದಿನ ಬಂಗಾಳಕ್ಕೆ ಕಾಲಿಡದ ಅವರು ತಡವಾಗಿ ಪ್ರಚಾರಕ್ಕೆ ಇಳಿದಿದ್ದು ಬಹಳಷ್ಟು ಜನರಲ್ಲಿ ಆಶ್ಚರ್ಯ ಮೂಡಿಸಿದೆ.

ಬಂಗಾಳದಲ್ಲಿ ಅವರ ಮತ್ತು ಇತರ ಹಿರಿಯ ನಾಯಕರ ಅನುಪಸ್ಥಿತಿಯಲ್ಲಿ ಹಲವು ಊಹಾಪೋಹಗಳು ಎದ್ದಿದ್ದವು. ಮತದಾನದ ನಂತರದ ಸಂದರ್ಭದಲ್ಲಿ ಕಾಂಗ್ರೆಸ್ ಟಿಎಂಸಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಮಮತಾ ಬ್ಯಾನರ್ಜಿಯವರನ್ನು ಟೀಕಿಸುವುದನ್ನು ತಪ್ಪಿಸಲು ಈ ತಂತ್ರ ಮಾಡಿದರು ಎಂಬ ಸಂದೇಹಗಳು ಉಂಟಾಗಿದ್ದವು. ಆದರೆ ಇಂತಹ ಊಹಾಪೋಹಗಳಿಗೆ ಬುಧವಾರ ತೆರೆಎಳೆದ ರಾಹುಲ್ ಗಾಂಧಿ, ಟಿಎಂಸಿ ಮತ್ತು ಬಿಜೆಪಿ ಎರಡರ ಮೇಲೂ ದಾಳಿ ನಡೆಸಿದ್ದಾರೆ.

“ನೀವು ತೃಣಮೂಲಕ್ಕೆ ಒಂದು ಅವಕಾಶವನ್ನು ನೀಡಿದ್ದೀರಿ. ಆದರೆ ಅವರು ವಿಫಲರಾದರು. ಮಮತಾಜೀ ರಸ್ತೆಗಳು, ಕಾಲೇಜುಗಳನ್ನು ನಿರ್ಮಿಸಿದ್ದಾರೆಯೇ? ಜನರು ಉದ್ಯೋಗಕ್ಕಾಗಿ ಸಾಹಸ ಮಾಡಬೇಕಾಗಿದೆ … ಉದ್ಯೋಗ ಪಡೆಯಲು ನೀವು ‘ಕಟ್ ಮನಿ’ (ಲಂಚ) ಪಾವತಿಸಬೇಕಾದ ಏಕೈಕ ರಾಜ್ಯ ಇದು‘ ಎಂದು ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿ ನಡೆದ ಪ್ರಚಾರಸಭೆಯಲ್ಲಿ ರಾಹುಲ್ ಹೇಳಿದ್ದಾರೆ.

ಬಿಜೆಪಿ ‘ಕಾಂಗ್ರೆಸ್-ಮುಕ್ತ ಭಾರತ್’ ಗೆ ಕರೆ ನೀಡುತ್ತದೆಯೇ ಹೊರತು ‘ಟಿಎಂಸಿ-ಮುಕ್ತ ಭಾರತ್’ ಅಲ್ಲ ಎಂದು ಅವರು ಮತದಾರರಿಗೆ ನೆನಪಿಸಿದ ಅವರು, “ನಾವು ಎಂದಿಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ಹೋರಾಟ ಕೇವಲ ರಾಜಕೀಯ ಮಾತ್ರವಲ್ಲ ಸೈದ್ಧಾಂತಿಕವೂ ಆಗಿದೆ. ಆದರೆ ಮಮತಾಜಿಗೆ ಇದು ಕೇವಲ ರಾಜಕೀಯ ಹೋರಾಟವಾಗಿದೆ… ಅವರು ಬಿಜೆಪಿಯ ಮಾಜಿ ಮಿತ್ರಪಕ್ಷವಾಗಿದ್ದಾರೆ. (ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಟಿಎಂಸಿ ಭಾಗಿಯಾಗಿತ್ತು ಮತ್ತು ಮಮತಾ ಆಗ ಸಚಿವೆಯಾಗಿದ್ದರು)

“ಇನ್ನು ಬಿಜೆಪಿ ಬಂಗಾಳದ ಸಂಸ್ಕೃತಿ ಮತ್ತು ಪರಂಪರೆಯನ್ನು ನಾಶಮಾಡಲು ಬಯಸಿದೆ. ‘ದ್ವೇಷ, ಹಿಂಸೆ ಮತ್ತು ವಿಭಜಕ ರಾಜಕಾರಣವನ್ನು ಹೊರತುಪಡಿಸಿ ಬಿಜೆಪಿಯಿಂದ ಏನನ್ನೂ ನೀಡಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

“ಅವರು ‘ಸೋನಾರ್ ಬಾಂಗ್ಲಾ’ (ಸುವರ್ಣ ಬಂಗಾಳ) ದಂತಹ ವಿಷಯಗಳನ್ನು ಹೇಳುತ್ತಾರೆ. ಆದರೆ ಅವರು ಜನರನ್ನು ಧರ್ಮ, ಜಾತಿ ಮತ್ತು ಭಾಷೆಯ ಆಧಾರದ ಮೇಲೆ ಮಾತ್ರ ವಿಭಜಿಸುತ್ತಾರೆ. ಅಸ್ಸಾಂನಲ್ಲಿ ಅವರು ಇದನ್ನೇ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲೂ ಈ ಪ್ರಯತ್ನ ಮಾಡುತ್ತಿದ್ದಾರೆ” ಎಂದು ರಾಹುಲ್ ಆರೋಪಿಸಿದ್ದಾರೆ.

ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ಮೋದಿ ಮತ್ತು ಮಮತಾ ಇಬ್ಬರೂ ವಿಫಲರಾಗಿದ್ದಾರೆ. “ಪ್ರಧಾನಿ ಮೋದಿ ಅವರು ‘ಭಾಯಿಯೋ ಬೆಹನೋ, ತಟ್ಟೆ ಬಡಿಯಿರಿ ಕೊರೋನಾ ಹೋಗುತ್ತದೆ ಎನ್ನುತ್ತಾರೆ. ಅವರು ಗಂಟೆ ಬಾರಿಸಲು, ಮೊಬೈಲ್ ಟಾರ್ಚ್ ಆನ್ ಮಾಡಿ ಬೆಳಗಲೂ ಕೂಡ ಹೇಳಿದರು. ಈ ವ್ಯಕ್ತಿ ಭಾರತದ ಪ್ರಧಾನಿ … ಕಾರ್ಮಿಕರಿಗೆ ಸಹಾಯ ಮಾಡುವ ಬದಲು ಅವರಿಗೆ ಗಂಟೆ ಬಾರಿಸಲು ಪ್ರಧಾನಿ ಹೇಳಿದರು’ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

“ಈ ದಿನಗಳಲ್ಲಿ ನೀವು ಎಲ್ಲಿದ್ದೀರಿ ಪಿಎಂ ಮೋದಿ? ಈಗ ಮತ್ತೆ ನೀವು ಕೋವಿಡ್ ಕರೆತಂದು ಓಡಿಹೋಗಿದ್ದೀರಿ. ಎಲ್ಲಾ ಜನರಿಗೆ ಲಸಿಕೆ ನೀಡಿದ್ದರೆ, ಹೊಸ ಪ್ರಕರಣಗಳು ಇರುತ್ತಿರಲಿಲ್ಲ” ಎಂದು ಅವರು ಹೇಳಿದರು.

“ನಿಮಗೆ ಗೊತ್ತಾ… ಅವರು ರಾಜ್ಯಕ್ಕೆ ಸಾಕಷ್ಟು ಜನರನ್ನು ಕರೆತಂದಿದ್ದಾರೆ. ಚುನಾವಣಾ ಪ್ರಚಾರದ ಹೆಸರಿನಲ್ಲಿ ಅವರು ಅನೇಕ ಹೊರಗಿನವರನ್ನು ಇಲ್ಲಿಗೆ ತಂದರು ಮತ್ತು ರೋಗವನ್ನು ಇಲ್ಲಿ ಹರಡಿ ಓಡಿಹೋದರು. ಈಗ ಅವರು ಹೇಳುತ್ತಾರೆ…. ನಮಗೆ ಮತ! ನೀಡಿ ಎಂದು ಮುಖ್ಯಮಂತ್ರಿ ಕೆರಳಿದ್ದನ್ನು ರಾಹುಲ್ ನೆನಪಿಸಿದರು.

ಅಧೀರ್ ರಂಜನ್ ಚೌಧರಿ ನೇತೃತ್ವದ ಬಂಗಾಳ ಕಾಂಗ್ರೆಸ್, ರಾಜ್ಯದ 294 ಸ್ಥಾನಗಳ ಪೈಕಿ 96 ಸ್ಥಾನಗಳಲ್ಲಿ ಎಡಪಂಥೀಯರು ಮತ್ತು ಜನಪ್ರಿಯ ಮುಸ್ಲಿಂ ಧರ್ಮಗುರು ನೇತೃತ್ವದ ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಜೊತೆ ಸೇರಿ ಸ್ಪರ್ಧೆ ಮಾಡುತ್ತಿದೆ.

ಅಧಿರ್ ಚೌಧರಿ ಅವರು ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಜೊತೆ ಯಾವುದೇ ಸಂದರ್ಭದಲ್ಲೂ ಬೆಂಬಲಿಸುವುದನ್ನು ದೃಢವಾಗಿ ತಳ್ಳಿಹಾಕಿದ್ದಾರೆ. ಬಿಜೆಪಿಯನ್ನು ಸೋಲಿಸಲು ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳಿಗೆ ಕರೆ ನೀಡಿದ್ದು ಕಾಂಗ್ರೆಸ್ ಮಿತ್ರಪಕ್ಷಗಳಾದ ಶಿವಸೇನೆ, ಎನ್‌ಸಿಪಿ ಮತ್ತು ಆರ್‌ಜೆಡಿ ಮಮತಾರಿಗೆ ಬೆಂಬಲ ನೀಡಿವೆ.


ಇದನ್ನೂ ಓದಿ: ವಿದೇಶಿ ಲಸಿಕೆಗಳ ಅನುಮೋದನೆ ಬಗ್ಗೆ ಕೇಂದ್ರಕ್ಕೆ ‘ಟಾಂಗ್’‌ ನೀಡಿದ ರಾಹುಲ್ ಗಾಂಧಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...