Homeಮುಖಪುಟಮೋದಿಯವರ 20 ಲಕ್ಷ ಕೋಟಿ ಎಂಬುದು ಜುಮ್ಲಾ ಪ್ಯಾಕೇಜ್‌ : ಆಮ್‌ ಆದ್ಮಿ ಪಕ್ಷ

ಮೋದಿಯವರ 20 ಲಕ್ಷ ಕೋಟಿ ಎಂಬುದು ಜುಮ್ಲಾ ಪ್ಯಾಕೇಜ್‌ : ಆಮ್‌ ಆದ್ಮಿ ಪಕ್ಷ

- Advertisement -
- Advertisement -

ಲಾಕ್‌ಡೌನ್ ಮಾಡಿದ ಪರಿಣಾಮ ದೇಶದಲ್ಲಿ ಸಾಕಷ್ಟು ಸರಕುಗಳು ಖರ್ಚಾಗದೇ ಉಳಿದಿದೆ. ಈಗಾಗಲೇ ಪೂರೈಕೆ ಸಾಕಷ್ಟು ಇದ್ದರೂ ಸಹ ಗ್ರಾಹಕರಿಂದ ಬೇಡಿಕೆ ಇಲ್ಲದಾಗಿದೆ. ಈ ಸಂದರ್ಭದಲ್ಲಿ ಬೇಡಿಕೆಯನ್ನು ಹೆಚ್ಚಳ ಮಾಡುವಂತಹ ಯೋಜನೆಗಳನ್ನು ಘೋಷಿಸಿ ಎಂದರೆ ಕೇವಲ ಸಾಲ ಮಾಡಿ ಅದಕ್ಕೆ ಕೇಂದ್ರ ದುಡ್ಡು ನೀಡುವುದು ಎನ್ನುವುದು ಯಾವ ರೀತಿಯ ಲೆಕ್ಕಾಚಾರ ಎನ್ನವುದು ತಿಳಿಯುತ್ತಿಲ್ಲ ಎಂದು ಕರ್ನಾಟಕ ಆಮ್‌ ಆದ್ಮಿ ಪಕ್ಷ ಟೀಕಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ,  “ಕೊರೊನಾದಿಂದ ಉಂಟಾದ ಸಂಕಷ್ಟಕ್ಕೆ ಮದ್ದು ನೀಡುವುದಾಗಿ ಹೇಳಿದ ಮಾನ್ಯ ಪ್ರಧಾನಿಗಳು ಖಾಲಿ ಹಾಳೆಯಂತಹ ಸುಮಾರು 20 ಲಕ್ಷ ಕೋಟಿಯ ದೊಡ್ಡ ಮೊತ್ತದ ಪ್ಯಾಕೇಜ್ ಘೋಷಿಸಿದರು. ಈ ಖಾಲಿ ಹಾಳೆಯನ್ನು ತುಂಬಿಸುವಂತೆ ಯಾವ ಯಾವ ವಲಯಕ್ಕೆ ಎಷ್ಟು ಹಣ ಮೀಸಲು ಎನ್ನುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವರದಿ ಒಪ್ಪಿಸಿದರೇ ಹೊರತು ನಯಾ ಪೈಸೆಯಷ್ಟು ಹಣವನ್ನು ಜನರಿಗೆ ನೀಡದೆ ದಾರಿ ತಪ್ಪಿಸುವ ಪ್ಯಾಕೇಜ್ ಎಂದು ಇದನ್ನು ಕರೆಯಬಹುದು” ಎಂದಿದ್ದಾರೆ.

ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ಸಾಲ ನೀಡುವುದಕ್ಕೆ ಮೀಸಲು ಹಾಗೂ ನಿಮಗೆ ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ಎಂದು ಹೇಳಿದ್ದೀರಿ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಿಂದ ಒಂದೂ ನಯಾ ಪೈಸೆಯೂ ಸಹ ಸರ್ಕಾರದ ಬೊಕ್ಕಸದಿಂದ ಖರ್ಚಾಗುವುದಿಲ್ಲ, ಇಲ್ಲಿ ಮತ್ತೆ ಉದ್ದಿಮೆದಾರ ಸಾಲದ ಸುಳಿಗೆ ಸಿಲುಕುವಂತಾಗುತ್ತದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.

ಉದಾಹರಣೆಗೆ ಒಬ್ಬ ಉದ್ದಿಮೆದಾರ ಒಂದು ಕೋಟಿ ಸಾಲ ಮಾಡಿದರೆ ಆ 1 ಕೋಟಿಯಲ್ಲಿನ ಪ್ರತಿಶತ 20 ರಷ್ಟು ಅಂದರೆ 20 ಲಕ್ಷಕ್ಕೆ ಮಾತ್ರ ಕೇಂದ್ರ ಸರ್ಕಾರ ಗ್ಯಾರಂಟಿ ನೀಡಲಾಗುವುದೆಂದು ಘೋಷಿಸಿದ್ದಾರೆ. ಉಳಿದ 80 ಲಕ್ಷಕ್ಕೆ ಮಾಲೀಕನೇ ಗ್ಯಾರಂಟಿ ನೀಡಿ ಸಾಲವನ್ನು ಪಡೆದುಕೊಳ್ಳಬೇಕಾಗಿದೆ. ಇದಲ್ಲದೆ ಬ್ಯಾಂಕುಗಳು ಸಾಮಾನ್ಯವಾಗಿ ಗರಿಷ್ಠವೆಂದರೆ 80% ಮಾತ್ರ ಸಾಲವನ್ನು ನೀಡುತ್ತದೆ. ಈ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರದ ಯಾವ ಸಹಾಯ ಧನವೂ ಸಹ ಲಭ್ಯವಾಗುವುದಿಲ್ಲ ಎಂದು ಟೀಕಿಸಲಾಗಿದೆ.

ಕೇಂದ್ರ ಸರ್ಕಾರ ಗ್ಯಾರಂಟಿ ನೀಡಿರುವ 20 ಲಕ್ಷ ಕೈಗೆ ಸಿಗುವುದೇ ಇಲ್ಲ. ಒಂದೂ ನಯಾಪೈಸೆಯೂ ಯಾರ ಜೇಬಿಗೂ ಹೋಗುವುದಿಲ್ಲ. ಈ ಮೊತ್ತದ ಉಪಯೋಗ ಆಗಬೇಕು ಎಂದರೆ ಮಾಲೀಕನು ತನ್ನ ಉದ್ಯಮವನ್ನು ಮುಚ್ಚಬೇಕಷ್ಟೇ. ಇದು ಸಂಪೂರ್ಣವಾಗಿ ದಿಕ್ಕು ತಪ್ಪಿಸುವಂತಹ ಕೇಂದ್ರ ಬಜೆಟ್ಟಿನ ಮುಂದುವರೆದ ವರದಿ ಮಾತ್ರ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಸಾಲ ಮಾಡುವ ಶಕ್ತಿ ಇದ್ದಿದ್ದರೆ ಜನರು ಏಕೆ ಪ್ಯಾಕೇಜ್ ಕೇಳುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇರುವ ಸಾಲವನ್ನೆ ತೀರಿಸಲು ಸಾದ್ಯವಿಲ್ಲ. ಎನ್ನುವ ಪರಿಸ್ಥಿತಿ ಇರುವಾಗ ಸಾಲ ತೀರಿಸಲು ಏನಾದರೂ ಸಹಾಯ ಮಾಡಿ ಎಂದರೆ ಮತ್ತಷ್ಟು ಸಾಲ ಮಾಡಿ ಎಂದು ಹೇಳುವುದು ಯಾವ ರೀತಿಯ ಲೆಕ್ಕಾಚಾರ ಎನ್ನುವುದನ್ನು ಕೇಂದ್ರ ಸರ್ಕಾರ ಬಿಡಿಸಿ ಹೇಳಬೇಕು ಎಂದು ಆಪ್‌ ಆಗ್ರಹಿಸಿದೆ.

ಶೇ 25 ರಷ್ಟು ಟಿಡಿಎಸ್ ಖಡಿತಗೊಳ್ಳುವುದು ಎಂದು ತಿಳಿಸಲಾಗಿದೆ.‌ ಅಂದರೆ ನಾವು 1 ಲಕ್ಷ ಹಣದಲ್ಲಿ 10 ಸಾವಿರ ಕಡಿತಗೊಂಡರೆ ಅದರಲ್ಲಿನ ಎರಡುವರೆ ಸಾವಿರ ಹಣಕ್ಕೆ ಮಾತ್ರ ವಿನಾಯಿತಿ. ಈ ವಿನಾಯಿತಿಗೊಂಡ ಹಣವನ್ನು ಆದಾಯ ತೆರಿಗೆ ಕಟ್ಟುವ ವೇಳೆ ಮತ್ತೆ ಜಮಾ ಮಾಡಬೇಕು. ಹಾಗಾದರೆ ಇದರಿಂದ ಏನು ಲಾಭ? ಎಂದರೆ ಬರೀ ಶೂನ್ಯ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮೇಲಿನ ಎಲ್ಲಾ ಸೌಲಭ್ಯ ಕೇವಲ 6 ತಿಂಗಳು ಮಾತ್ರ. ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇವಲ 6 ತಿಂಗಳ ಕಾಲಾವಕಾಶ ಸಾಕೇ? ಆದಾಯ ತೆರಿಗೆ ವಿನಾಯತಿ, GST ಕಡಿತ, EMI ಮನ್ನಾ/ಬಡ್ಡಿ ಮನ್ನಾ ಇಲ್ಲ ಎಂದು ಆರೋಪಿಸಲಾಗಿದೆ.

ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಕ್ಕೆ ಮಿಡಿಯದ ಪ್ಯಾಕೇಜ್ ಎನ್ನಬಹುದು. ಸಣ್ಣ/ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಸಹಾಯ ಧನ, ಅಸಂಘಟಿತ ಕಾರ್ಮಿಕ ವಲಯಕ್ಕೆ ಉತ್ತೇಜನ ನೀಡುವಲ್ಲಿ ಈ ಪ್ಯಾಕೇಜ್ ನಿರ್ಲಕ್ಷಿಸಿದೆ ಎಂದಿದ್ದಾರೆ.

ಈ ₹20 ಲಕ್ಷ ಕೋಟಿ ಎನ್ನುವ ಜುಮ್ಲಾ ಪ್ಯಾಕೇಜ್‌ನಿಂದ ಶೇ 99 ರಷ್ಟು ಭಾರತೀಯರಿಗೆ ನಯಾಪೈಸೆಯಷ್ಟು ಲಾಭ ಇಲ್ಲ ಎನ್ನುವುದು ಸ್ಪಷ್ಟ. ಬಿಗ್ ಬಾಸ್ಕೆಟ್, ಓಯೋ ಹೀಗೆ ಅನೇಕ ಕಂಪನಿಗಳು ಚೀನಾದಲ್ಲೂ ಬಂಡವಾಳ ಹೂಡಿವೆ ಈ ಕಂಪೆನಿಗಳು ಬಂಡವಾಳ ಹಿಂಪಡೆದರೆ ಅವುಗಳ ಉತ್ತೇಜನಕ್ಕೆ ಯಾವ ಯೋಜನೆ ಇದೆ ಎನ್ನುವುದು ಸ್ಪಷ್ಟತೆ ಇಲ್ಲ ಎಂದು ಟೀಕಿಸಲಾಗಿದೆ.

ಕೈಬಿಚ್ಚಿ ಸಹಾಯ ಹಸ್ತ ಕೊಡದೆ ಮತ್ತಷ್ಟು ಸಾಲದ ಸುಳಿಗೆ ಜನರನ್ನು ದೂಡುವ ಅವೈಜ್ಞಾನಿಕ ಪ್ಯಾಕೇಜ್.
ಇನ್ನಾದರೂ ಮುಂದಿನ ಪ್ಯಾಕೇಜ್ ಗಳಲ್ಲಿ ಆದರೂ ಬೇಡಿಕೆ ಹೆಚ್ಚಳ ಮಾಡುವಂತಹ ಯೋಜನೆಗಳು ಘೋಷಿಸಲಿ, ಕೈ ಬಿಚ್ಚಿ ದುಡ್ಡು ಹಂಚಿಕೆ ಮಾಡಲಿ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.


ಇದನ್ನೂ ಓದಿ: ಪ್ರಧಾನಿಯ 20 ಲಕ್ಷ ಕೋಟಿ ಪ್ಯಾಕೇಜ್: ಮೊದಲ ಕಂತಲ್ಲಿ ಕೊಡ್ತಿರೋದು ಕೇವಲ 2500 ಕೋಟಿ ಅಷ್ಟೆ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....