ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಬಂಧನಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ವಕ್ತಾರರೊಬ್ಬರು “ಪತ್ರಕರ್ತರು ಏನು ಬರೆಯುತ್ತಾರೆ, ಏನು ಟ್ವೀಟ್ ಮಾಡುತ್ತಾರೆ ಮತ್ತು ಏನು ಹೇಳುತ್ತಾರೆಂಬುದರ ಮೇಲೆ ಜೈಲಿಗೆ ಹಾಕಬಾರದು” ಎಂದಿದ್ದಾರೆ.
ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (Antonio Guterres)ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಮಂಗಳವಾರ ಪ್ರತಿಕ್ರಿಯಿಸಿ, ’ಯಾವುದೇ ಕಿರುಕುಳದ ಬೆದರಿಕೆಯಿಲ್ಲದೆ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವುದು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ದಿಟ್ಟ ಪತ್ರಕರ್ತ, ಆಲ್ಟ್‌ನ್ಯೂಸ್ ಸಹ ಸಂಪಾದಕ ಮೊಹಮ್ಮದ್ ಜುಬೇರ್‌ರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಂಗಳವಾರ ಜುಬೇರ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇದನ್ನೂ ಓದಿ: ‘ಯಾರಿಗೂ ಹೇಳಬೇಡಿ’: ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನಕ್ಕೆ ಕಾರಣ!
ಜುಬೇರ್ ಬಂಧನಕ್ಕೆ ಪ್ರತಿಕ್ರಿಯಿಸಿದ ಸ್ಟೀಫನ್ ಡುಜಾರಿಕ್ “ಪ್ರಪಂಚದಾದ್ಯಂತ ಯಾವುದೇ ಸ್ಥಳವಿರಲಿ, ಜನರು ತಮ್ಮನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡುವುದು ಬಹಳ ಮುಖ್ಯ, ಪತ್ರಕರ್ತರು ತಮ್ಮನ್ನು ಮುಕ್ತವಾಗಿ ಮತ್ತು ಯಾವುದೇ ಕಿರುಕುಳದ ಬೆದರಿಕೆಯಿಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು” ಎಂದಿದ್ದಾರೆ.
ಜುಬೇರ್ ಬಂಧನದ ಕುರಿತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸ್ಟೀಫನ್ ಡುಜಾರಿಕ್ “ಪತ್ರಕರ್ತರು ಏನು ಬರೆಯುತ್ತಾರೆ, ಅವರು ಏನು ಟ್ವೀಟ್ ಮಾಡುತ್ತಾರೆ ಮತ್ತು ಅವರು ಏನು ಹೇಳುತ್ತಾರೆಂದು ಜೈಲಿಗೆ ಹಾಕಬಾರದು” ಎಂದು ಹೇಳಿದ್ದಾರೆ.
2002 ರ ಗುಜರಾತ್ ಗಲಭೆಯಲ್ಲಿ “ಕ್ರಿಮಿನಲ್ ಪಿತೂರಿ, ಫೋರ್ಜರಿ ಮತ್ತು ನ್ಯಾಯಾಲಯದಲ್ಲಿ ಸುಳ್ಳು ಪುರಾವೆಗಳನ್ನು ಹಾಕಿ ಅಮಾಯಕರನ್ನು ಬಂಧಿಸಿದ” ಆರೋಪದ ಮೇಲೆ ಗುಜರಾತ್ ಅಧಿಕಾರಿಗಳು ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಮೊಹಮ್ಮದ್ ಜುಬೇರ್ ಬಂಧನವಾಗಿದೆ.
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಬಂಧನದ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
ಇದನ್ನೂ ಓದಿ: ಪತ್ರಕರ್ತ ಮೊಹಮ್ಮದ್ ಜುಬೇರ್ ಮತ್ತೆ ನಾಲ್ಕು ದಿನ ಪೊಲೀಸ್ ವಶಕ್ಕೆ
ಇದನ್ನೂ ಓದಿ: ‘ಆಡಳಿತದ ಆಕ್ರಮಣಕಾರಿ ದುರುಪಯೋಗ’: ತೀಸ್ತಾ ಬಂಧನ ವಿರೋಧಿಸಿದ ಭಾರತದ ಮತ್ತು ಯುಎನ್‌ನ ಮಾನವ ಹಕ್ಕುಗಳ ವರ್ಕಿಂಗ್ ಗ್ರೂಪ್



ಇಂತವರನ್ನ ಬಂದಿಸಬಾರದಿತ್ತು,ಎನ್ಕೌಂಟರ್ ಮಾಡಿ ಬಿಸಾಡಬೇಕಿತ್ತು