Homeರಾಷ್ಟ್ರೀಯ‘ಯಾರಿಗೂ ಹೇಳಬೇಡಿ’: ಖ್ಯಾತ ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಬಂಧನಕ್ಕೆ ಕಾರಣ!

‘ಯಾರಿಗೂ ಹೇಳಬೇಡಿ’: ಖ್ಯಾತ ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಬಂಧನಕ್ಕೆ ಕಾರಣ!

- Advertisement -
- Advertisement -

ಸೋಮವಾರ ಸಂಜೆಯವರೆಗೆ ಟ್ವಿಟರ್‌‌ನಲ್ಲಿ ಕೇವಲ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದ ಮತ್ತು ಕೇವಲ ಮೂರು ಅನುಯಾಯಿಗಳನ್ನು ಹೊಂದಿದ್ದ ಅನಾಮಧೇಯ ಟ್ವಿಟರ್ ಹ್ಯಾಂಡಲ್‌ನ ದೂರಿನ ಆಧಾರದ ಮೇಲೆ ಅಂತರಾಷ್ಟ್ರೀಯ ಖ್ಯಾತಿಯ ಪತ್ರಕರ್ತ ಮೊಹಮ್ಮದ್ ಜುಬೇರ್‌ ಅವರನ್ನು ಸೋಮವಾರ ಸಂಜೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಎಫ್‌ಐಆರ್‌ನಲ್ಲಿ ದಾಖಲಾಗಿರುವಂತೆ ಹನುಮಾನ್ ಭಕ್ತ್ ಎಂಬ ಹೆಸರಿನ @balajikijaiin ಎಂಬ ಟ್ವಿಟರ್‌ ಹ್ಯಾಂಡಲ್ ಹೊಂದಿರುವ ಬಳಕೆದಾರ ಟ್ವಿಟ್ಟರ್‌ನಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೊಹಮ್ಮದ್ ಜುಬೇರ್‌ ಅವರು 2018 ರಲ್ಲಿ ಮಾಡಿದ್ದ ಪೋಸ್ಟ್ ಒಂದನ್ನು ಉಲ್ಲೇಖಿಸಿರುವ ಅನಾಮಧೇಯ ‘ಹನುಮಾನ್ ಭಕ್ತ್‌‌’ ಟ್ವೀಟ್‌ಗೆ ಹ್ಯಾಂಡಲ್ಆ ಕ್ಷೇಪಣೆ ವ್ಯಕ್ತಪಡಿಸಿತ್ತು. ಆ ಪೋಸ್ಟ್‌ನ ಚಿತ್ರದಲ್ಲಿ, ‘ಹನಿಮೂನ್ ಹೋಟೆಲ್’ ಎಂಬ ಬೋರ್ಡಿಗೆ ಬಣ್ಣ ಬಳಿದು, ‘ಹನುಮಾನ್ ಹೋಟೆಲ್’ ಎಂದು ಹಿಂದಿಯಲ್ಲಿ ಬರೆದಂತೆ ತೋರಿಸಲಾಗಿದೆ.

ಇದನ್ನೂ ಓದಿ: ಪತ್ರಕರ್ತ ಜುಬೇರ್‌ ಬಂಧನವನ್ನು ಖಂಡಿಸಿ, ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಎಡಿಟರ್ಸ್ ಗಿಲ್ಡ್

ಜುಬೈರ್ ಅವರನ್ನು ಬಂಧಿಸಲು ಕಾರಣವಾಗಿರುವ ಚಿತ್ರವೂ ಎಡಿಟ್ ಮಾಡಿರುವ ಚಿತ್ರವಲ್ಲ, ಬದಲಾಗಿ ಈ ಚಿತ್ರವು 1983ರ ಹಿಂದಿ ಚಲನಚಿತ್ರವಾದ ‘ಕಿಸ್ಸಿ ಸೆ ನಾ ಕೆಹನಾ(ಕನ್ನಡ ಅನುವಾದ: ಯಾರಿಗೂ ಹೇಳಬೇಡಿ)’ ದೃಶ್ಯವಾಗಿದೆ. ‘ಕಿಸ್ಸಿ ಸೆ ನಾ ಕೆಹನಾ’ ಎಂದರೆ ಕನ್ನಡದಲ್ಲಿ ‘ಯಾರಿಗೂ ಹೇಳಬೇಡಿ’ ಎಂದರ್ಥವಿದೆ. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದು, ಚಲನಚಿತ್ರ ಮಂಡಳಿಯೂ ಅದಕ್ಕೆ ‘ಯು’ (ಎಲ್ಲರೂ ನೋಡಬಹುದಾದ) ಪ್ರಮಾಣಪತ್ರ ನೀಡಿದೆ. ಅಲ್ಲದೆ ಈ ಚಿತ್ರ ಮತ್ತು ದೃಶ್ಯ ಇನ್ನೂ ಯೂಟ್ಯೂಬ್‌ನಲ್ಲಿ ಇವೆ.

ಜುಬೇರ್‌ ವಿರುದ್ಧ ದೆಹಲಿ ಪೊಲೀಸರು, “ಪೋಸ್ಟ್‌ನಲ್ಲಿನ ಪದಗಳು ಮತ್ತು ಚಿತ್ರವನ್ನು ಮೊಹಮ್ಮದ್ ಜುಬೇರ್ @zoo_bear ಅವರು ನಿರ್ದಿಷ್ಟ ಧಾರ್ಮಿಕ ಸಮುದಾಯದ ವಿರುದ್ಧ ಬಳಸಿದ್ದಾರೆ. ಇದು ತೀವ್ರ ಪ್ರಚೋದನಕಾರಿ ಮತ್ತು ಜನರ ನಡುವೆ ದ್ವೇಷದ ಭಾವನೆಗಳನ್ನು ಹುಟ್ಟುಹಾಕಲು ಸಾಕಾಗುತ್ತದೆ. ಇದು ಸಮಾಜದಲ್ಲಿ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಹಾನಿಕಾರಕವಾಗಿದೆ” ಎಂದು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.

ಇದನ್ನೂ ಓದಿ: ಒಂದು ದಿನದ ಪೊಲೀಸ್ ಕಸ್ಟಡಿಗೆ ಜುಬೇರ್‌: ಬಂಧನಕ್ಕೆ ಕಾರಣವಾದ ಟ್ವೀಟ್, ದೂರುದಾರರು ಯಾರು?

ಅಷ್ಟಕ್ಕೂ ಈ ಸಿನಿಮಾದ ದೃಶ್ಯವನ್ನು ಮೀಮ್ ಆಗಿ ಬಳಸಿಕೊಂಡವರಲ್ಲಿ ಜುಬೇರ್ ಮೊದಲಿಗರೇನಲ್ಲ. 2018 ರಲ್ಲಿ, ‘ಅವೆಂಜರ್ಸ್: ಇನ್ಫಿನಿಟಿ ವಾರ್’ ಬಗ್ಗೆ ಅಭಿಮಾನಿಗಳು ರಚಿಸಿದ ಮೀಮ್‌ಗಳ ಲೇಖನಕ್ಕಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಅದೇ ದೃಶ್ಯವನ್ನು ತನ್ನ ಸುದ್ದಿಯಲ್ಲಿ ಚಿತ್ರವಾಗಿ ಬಳಸಿಕೊಂಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಈ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಲವಾರು ಇತರ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಆದರೆ ಅವರ ಯಾವುದೇ ಟ್ವೀಟ್‌ ಅನ್ನು ಜುಬೈರ್ ಅವರ ಪ್ರಕರಣದಂತೆ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತದೆ ಎಂದು ಪರಿಗಣಿಸಲಾಗಿಲ್ಲ.

ಜುಬೈರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 295 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ: ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡ #IStandWithZubair ಹ್ಯಾಷ್‌ಟ್ಯಾಗ್‌

ಅನಾಮಧೇಯ ಟ್ವಿಟರ್ ಹ್ಯಾಂಡಲ್‌ನಿಂದ ದೂರನ್ನು ಪಡೆದ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಪೋಸ್ಟ್‌ನಲ್ಲಿ ನಿರ್ದಿಷ್ಟ ಧರ್ಮದ ದೇವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಉದ್ದೇಶದಿಂದ ಮೊಹಮ್ಮದ್ ಜುಬೇರ್ ಪ್ರಶ್ನಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

@balajikijaiin ಅವರು ದೆಹಲಿ ಪೊಲೀಸರನ್ನು ಉದ್ದೇಶಿಸಿ ಮಾಡಿದ ಟ್ವೀಟ್ ಅನ್ನು ಜೂನ್ 19 ರಂದು ಪೋಸ್ಟ್ ಮಾಡಲಾಗಿದೆ. ಹ್ಯಾಂಡಲ್ ಅನ್ನು ಅಕ್ಟೋಬರ್ 2021 ರಲ್ಲಿ ರಚಿಸಲಾಗಿದೆ ಮತ್ತು ಸೋಮವಾರ ಸಂಜೆಯವರೆಗೆ ಒಂದೇ ಒಂದು ಸಂದೇಶವನ್ನು ಪೋಸ್ಟ್ ಮಾಡಲಾಗಿದ್ದು, ಇದು ಜುಬೈರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರನ್ನು ಕೇಳುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...