2022 ರಲ್ಲಿ ದೆಹಲಿ ಪೊಲೀಸರು ವಶಪಡಿಸಿಕೊಂಡಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರು, ಇದರ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಜುಬೈರ್ ಅವರನ್ನು ಕೇಳಿಕೊಂಡಿದ್ದಾರೆ.
2018 ರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಜುಬೈರ್ 1983 ರ ಹಿಂದಿ ಚಲನಚಿತ್ರದ “ಹನಿಮೂನ್ ಹೋಟೆಲ್” ಮತ್ತು “ಹನುಮಾನ್ ಹೋಟೆಲ್” ಎಂಬ ದೃಶ್ಯದ ಸ್ಕ್ರೀನ್ ಶಾರ್ಟ್ ಅನ್ನು ಹಂಚಿಕೊಂಡಿದ್ದರು. ಅವರ ಈ ಟ್ವೀಟ್ ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮೊಹಮ್ಮದ್ ಜುಬೇರ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇದರ ನಂತರ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರ ಸೈಬರ್ ಘಟಕವು ಜೂನ್ 2022 ರಲ್ಲಿ ಜುಬೇರ್ ಅವರನ್ನು ಬಂಧಿಸಿತ್ತು. ಪ್ರಕರಣದಲ್ಲಿ ಜುಲೈ 15, 2022 ರಂದು, ದೆಹಲಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ್ದು, “ವಾಕ್ ಸ್ವಾತಂತ್ರ್ಯವು ಪ್ರಜಾಪ್ರಭುತ್ವ ಸಮಾಜದ ಅಡಿಪಾಯ” ಎಂದು ಹೇಳಿತ್ತು.
2018ರ ಈ ಪೋಸ್ಟ್ ಹಂಚಿಕೊಳ್ಳಲು ಬಳಸಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಬೆಂಗಳೂರಿನಲ್ಲಿರುವ ತನ್ನ ಮನೆಯಲ್ಲಿದೆ ಎಂದು ಜುಬೈರ್ ಹೇಳಿದ್ದರು ಎಂದು ದೆಹಲಿ ಪೊಲೀಸರು ಹೇಳಿಕೊಂಡಿದ್ದರು. ಇದರಿಂದಾಗಿ ಅವರು ಜೂನ್ 30, 2022 ರಂದು ಜುಬೇರ್ ಮನೆ ಮೇಲೆ ದಾಳಿ ನಡೆಸಿ ಡಿವೈಸ್, ಎರಡು ಇನ್‌ವಾಯ್ಸ್‌ಗಳು ಮತ್ತು ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡಿದ್ದರು.
ಆದಾಗ್ಯೂ, ತನಿಖಾಧಿಕಾರಿ ಅಥವಾ ಯಾವುದೇ ಇತರ ಪೊಲೀಸ್ ಅಧಿಕಾರಿಗೆ ತಾನು ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಜುಬೈರ್ ಹೇಳಿಕೊಂಡಿದ್ದಾರೆ. ಪೋಸ್ಟ್ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
“ಇಷ್ಟೆ ಅಲ್ಲದೆ, ವಿವಾದದಲ್ಲಿರುವ ಟ್ವೀಟ್‌ನಲ್ಲೆ ಅದನ್ನು ಆಂಡ್ರಾಯ್ಡ್ ಮೊಬೈಲ್ ಫೋನ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ ಇದು ಯಾವುದೇ ಲ್ಯಾಪ್‌ಟಾಪ್ ಜೊತೆಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ” ಎಂದು ಜುಬೈರ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. “ನನ್ನ ನಿವಾಸದಲ್ಲಿ ನಡೆಸಲಾಗಿದೆ ಎಂದು ಹೇಳಲಾದ ಶೋಧ ಮತ್ತು ವಶಪಡಿಸಿಕೊಳ್ಳುವಿಕೆಯನ್ನು ತನಿಖೆಯ ಅಗತ್ಯಕ್ಕೆ ಮೀರಿದ ದುರುದ್ದೇಶಪೂರಿತ ಕಾರಣಗಳಿಗಾಗಿ ನಡೆಸಲಾಗಿದೆ.” ಎಂದು ಅವರು ಹೇಳಿದ್ದಾರೆ.
ಎಫ್‌ಐಆರ್‌ನ ವ್ಯಾಪ್ತಿಯನ್ನು ಮೀರಿದ ಈ ಸಾಧನಗಳನ್ನು ಬಿಡುಗಡೆ ಮಾಡುವಂತೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. “ವಾದದ ಸಮಯದಲ್ಲಿ ಅರ್ಜಿದಾರರ ಪರ ವಕೀಲರು ಅರ್ಜಿದಾರರ ಮೊಬೈಲ್ ಫೋನ್ ಅನ್ನು ಉಲ್ಲೇಖಿಸುತ್ತಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ, ಅವರು ಸಂಬಂಧಪಟ್ಟ ಪ್ರದೇಶ ಮ್ಯಾಜಿಸ್ಟ್ರೇಟ್ ಮುಂದೆ ಸೂಕ್ತ ಅರ್ಜಿಯನ್ನು ಸಲ್ಲಿಸಬೇಕು. ಅವರು ಕಾನೂನಿನ ಪ್ರಕಾರ ಅದನ್ನು ನಿಭಾಯಿಸುತ್ತಾರೆ.” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂಓದಿ: ಸೌದಿ ಅರೇಬಿಯಾ ಉದ್ಯೋಗ ವೀಸಾ : ಭಾರತೀಯ ಕಾರ್ಮಿಕರಿಗೆ ಕಠಿಣ ನಿಯಮಗಳು ಜಾರಿ
ಸೌದಿ ಅರೇಬಿಯಾ ಉದ್ಯೋಗ ವೀಸಾ : ಭಾರತೀಯ ಕಾರ್ಮಿಕರಿಗೆ ಕಠಿಣ ನಿಯಮಗಳು ಜಾರಿ


