ನೈರುತ್ಯ ಮಾನ್ಸೂನ್ ಭಾರತಕ್ಕೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇಂದು ದೃಡಪಡಿಸಿದೆ.
“ನೈರುತ್ಯ ಮಾನ್ಸೂನ್ ಕೇರಳವನ್ನು ಪ್ರವೇಶಿಸಿದೆ” ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಮುಂಗಾರು ಮಳೆ ಕೇರಳ ಪ್ರವೇಶಿಸಿದ ನಂತರ ಕರ್ನಾಟಕವನ್ನೂ ಪ್ರವೇಶಿಸಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಮಳೆ ಪ್ರಾರಂಭವಾಗಲಿದೆ. ಭಾರತಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿದರೆ ಜೂನ್ ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ವರೆಗೂ ದೇಶದಲ್ಲಿ ಶೇಕಡಾ 75 ರಷ್ಟು ಮಳೆಯಾಗುತ್ತದೆ.
Onset of Southwest Monsoon over Kerala:
Southwest Monsoon set in over Kerala 2020 today, the 1st June, 2020 coinciding with its normal date. pic.twitter.com/JTwN5on6Yj— IMD Weather (@IMDWeather) June 1, 2020
ನೈರುತ್ಯ ಮಾನ್ಸುನ್ ಕೇರಳ ಪ್ರವೇಶಿಸಿದ ಹಿನ್ನಲೆಯಲ್ಲಿ ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಂತ್ತಟ್ಟ, ಆಲಪ್ಪುಯ, ಕೊಟ್ಟಾಯಂ, ಎರ್ನಾಕುಲಂ, ಇಡುಕಿ, ಮಲಪ್ಪುರಂ ಮತ್ತು ಕಣ್ಣೂರು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಏಪ್ರಿಲ್ 15 ರಂದು, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ರಾಜೀವನ್, ಈ ವರ್ಷ ಸರಾಸರಿ 100% ಸಾಮಾನ್ಯ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದರು.
ಮೇ 30 ರಂದು ಖಾಸಗಿ ಹವಾಮಾನ ಮುನ್ಸೂಚಕ ಸ್ಕೈಮೆಟ್ ವೆದರ್ ಮಾನ್ಸೂನ್ ಆಗಮನವನ್ನು ಘೋಷಿಸಿತ್ತು, ಆದರೆ ಭಾರತೀಯ ಹವಾಮಾನ ಇಲಾಖೆ ಇದನ್ನು ನಿರಾಕರಿಸಿತ್ತು.
ಓದಿ: ವಲಸೆ ಕಾರ್ಮಿಕರಿದ್ದ ಮನೆಯ ಮೇಲ್ಛಾವಣಿ ಕುಸಿತ : ಗಂಟೆಗಟ್ಟಲೇ ಮಳೆಯಲ್ಲಿ ನೆನೆದ ಕಾರ್ಮಿಕರು.


