Homeಮುಖಪುಟಎಡಿಆರ್ ವರದಿ - 5 ವರ್ಷಗಳಲ್ಲಿ ಪಕ್ಷಾಂತರಗೊಂಡ 44.9% ಶಾಸಕರು ಸೇರಿದ್ದು ಬಿಜೆಪಿಗೆ!

ಎಡಿಆರ್ ವರದಿ – 5 ವರ್ಷಗಳಲ್ಲಿ ಪಕ್ಷಾಂತರಗೊಂಡ 44.9% ಶಾಸಕರು ಸೇರಿದ್ದು ಬಿಜೆಪಿಗೆ!

- Advertisement -
- Advertisement -

2016 ರಿಂದ 2020 ರವರೆಗೆ ಪಕ್ಷಗಳನ್ನು ಬದಲಾಯಿಸಿ, ಉಪ ಚುನಾವಣೆಯಲ್ಲಿ ಲಾಭಗಳಿಸಿದ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಈ ಪ್ರಕ್ರಿಯೆಯಲ್ಲಿ ಅತ್ಯಂತ ಹೆಚ್ಚಿನ ನಷ್ಟ ಕಾಂಗ್ರೆಸ್‌ಗೆ ಉಂಟಾಗಿದ್ದು, ಪಕ್ಷದಿಂದ ಅತೀ ಹೆಚ್ಚಿನ ಶಾಸಕರು ಪಕ್ಷಾಂತರಗೊಂಡಿದ್ದಾರೆ.

ಗುರುವಾರ ಬಿಡುಗಡೆಯಾದ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯು ಕಳೆದ ಐದು ವರ್ಷಗಳಲ್ಲಿ ಪಕ್ಷಗಳನ್ನು ಬದಲಾಯಿಸಿ ಉಪಚುನಾವಣೆ ಮೂಲಕ ಗೆದ್ದ 443 ಶಾಸಕರು ಮತ್ತು ಸಂಸದರ ಚುನಾವಣಾ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ.

ದೇಶದಾದ್ಯಂತ ತಮ್ಮ ಪಕ್ಷಗಳನ್ನು ತೊರೆದ 405 ಶಾಸಕರಲ್ಲಿ 42% ಜನರು ಕಾಂಗ್ರೆಸ್ ಮೂಲದವರು ಎಂದು ವರದಿ ಕಂಡುಹಿಡಿದಿದೆ. ಬಿಜೆಪಿ ತೊರೆದು ಬೇರೆ ಪಕ್ಷ ಸೇರಿದವರು ಕೇವಲ 4.4%.

ಇದನ್ನೂ ಓದಿ: ಸರ್ಕಾರದ ಭೂಮಿ ಉಳಿಸಿಕೊಳ್ಳಲಾಗದವರು ಅಧಿಕಾರದಲ್ಲಿದ್ದೇನು ಪ್ರಯೋಜನ?-ಎಚ್‌.ಡಿ.ಕುಮಾರಸ್ವಾಮಿ

ಮತ್ತೊಂದೆಡೆ, ಬೇರೆ ಪಕ್ಷಗಳಿಂದ ಸೇರ್ಪಡೆಗೊಂಡ 44.9% ಶಾಸಕರು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ಆಯ್ಕೆ ಮಾಡಿಕೊಂಡವರು 9.4% ಮಾತ್ರ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕದ ರಾಜ್ಯ ಸರ್ಕಾರಗಳು ಬೀಳಲು ಶಾಸಕರ ಪಕ್ಷಾಂತರವೇ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಕ್ಷಗಳನ್ನು ಬದಲಾಯಿಸಿದ 12 ಲೋಕಸಭಾ ಸದಸ್ಯರಲ್ಲಿ ಐವರು ಬಿಜೆಪಿಯವರಾಗಿದ್ದು, ರಾಜ್ಯಸಭೆಯಲ್ಲಿ, ತ್ಯಜಿಸಿದ 17 ಜನರಲ್ಲಿ ಏಳು ಮಂದಿ ಕಾಂಗ್ರೆಸ್ ಮೂಲದವದ್ದಾಗಿದ್ದಾರೆ. ಬೇರೆ ಪಕ್ಷಗಳಿಗೆ ಸೇರ್ಪಡೆಯಾದ ಶಾಸಕರು ಮತ್ತು ಸಂಸದರ ಸರಾಸರಿ ಆಸ್ತಿ 39% ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಹಣ, ಅಧಿಕಾರ, ಪಕ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ಕಾನೂನುಗಳ ಅನುಪಸ್ಥಿತಿ ಮತ್ತು ನಾಯಕರಲ್ಲಿ ಪ್ರಾಮಾಣಿಕತೆ ಇಲ್ಲದೆ ಇರುವುದು ಈ ಪಕ್ಷಾಂತರಕ್ಕೆ ಕಾರಣ ಎಂದು ಎಡಿಆರ್ ವರದಿಯಲ್ಲಿ ಹೇಳಲಾಗಿದೆ.

ಈ ಪ್ರವೃತ್ತಿಗಳನ್ನು ನಿಯಂತ್ರಿಸುವ ತನಕ, ಪ್ರಸ್ತುತ ಚುನಾವಣಾ ಮತ್ತು ರಾಜಕೀಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಈ ಲೋಪದೋಷಗಳನ್ನು ಸರಿಪಡಿಸಲು ವಿಫಲವಾದರೆ ಅದು ಪ್ರಜಾಪ್ರಭುತ್ವದ ಅಪಹಾಸ್ಯ ಮಾಡಿದಂತಾಗುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಸರ್ಕಾರದ ಸಂವಹನಕ್ಕೆ ಸಚಿವರ ಚರ್ಚೆಯ ವರದಿ; ಕಳೆ ಕೀಳುವ ನೆಪದಲ್ಲಿ ತೆನೆ ಚಿವುಟುವ ಹುನ್ನಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮಹಿ ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್ ಪಕ್ಷವು...