Homeಮುಖಪುಟತಮಿಳುನಾಡು: ಕೊಯಮತ್ತೂರು ದಕ್ಷಿಣದಿಂದ ಕಮಲ್ ಹಾಸನ್, ಕೋಲಥೂರ್‌ನಿಂದ ಸ್ಟಾಲಿನ್ ಸ್ಪರ್ಧೆ

ತಮಿಳುನಾಡು: ಕೊಯಮತ್ತೂರು ದಕ್ಷಿಣದಿಂದ ಕಮಲ್ ಹಾಸನ್, ಕೋಲಥೂರ್‌ನಿಂದ ಸ್ಟಾಲಿನ್ ಸ್ಪರ್ಧೆ

ಸ್ಟಾಲಿನ್ ಪುತ್ರ ಉದಯನಿಧಿ ಚೆಪಾಕ್ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣೆಗೆ ಪ್ರವೇಶಿಸಲಿದ್ದಾರೆ.

- Advertisement -
- Advertisement -

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ದೀದಿ ವರ್ಸಸ್ ಬಿಜೆಪಿ ಎಂಬ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದ್ದರೆ, ತಮಿಳುನಾಡು ರಾಜಕೀಯ ನಾಯಕರ ಜೊತೆಗೆ ಚಿತ್ರನಟ, ನಟಿಯರಿಂದಾಗಿ ಗಮನ ಸೆಳೆಯುತ್ತಿದೆ. ಮಕ್ಕಳ್ ನೀಧಿ ಮಯ್ಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಿಸಿದ್ದಾರೆ.

ಎಐಎಡಿಎಂಕೆ ಮೈತ್ರಿಕೂಟದಲ್ಲಿ ಕೊಯಮತ್ತೂರಿನ ದಕ್ಷಿಣ ಕ್ಷೇತ್ರವನ್ನು ಬಿಜೆಪಿಗೆ ನೀಡಲಾಗಿದೆ. ವನತಿ ಶ್ರೀನಿವಾಸನ್ ಬಿಜೆಪಿ ಪರವಾಗಿ ಇಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ. ಅಂತೆಯೇ ಡಿಎಂಕೆ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದರ ಕುರಿತು ಇನ್ನೂ ಮಾಹಿತಿ ಹೊರಬಿದ್ದಿಲ್ಲ.

ಮಕ್ಕಳ್ ನೀಧಿ ಮಯ್ಯಂ ಪಕ್ಷವನ್ನು ಪ್ರಾರಂಭಿಸಿದ ನಂತರ ಪಕ್ಷವು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿತ್ತು. ಯಾವುದೇ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ ಶೇ.4 ಮತಗಳಿಸಿ ಗಮನಸೆಳೆದಿತ್ತು. ಆದರೆ ಆ ಚುನಾವಣೆಯಲ್ಲಿ ಕಮಲ್ ಹಾಸನ್ ಸ್ಪರ್ಧಿಸಿರಲಿಲ್ಲ, ಹಾಗಾಗಿ ಇದು ಕಮಲ್ ಹಾಸನ್ ಎದುರಿಸಬೇಕಾದ ಮೊದಲ ಚುನಾವಣೆಯಾಗಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ಟಿಕೆಟ್‌ಗಾಗಿ ಸಂದರ್ಶನ ಎದುರಿಸಿದ ಉದಯಾನಿಧಿ ಸ್ಟಾಲಿನ್?

ಶುಕ್ರವಾರ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಮಲ್ ಹಾಸನ್, ತಾವೂ ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದಾರೆ.

ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಜನರಿಗಾಗಿ ಕಮಲ್ ಹಾಸನ್ ಎರಡು ರಾಷ್ಟ್ರೀಯ ಪಕ್ಷಗಳೊಂದಿಗೆ ಘರ್ಷಣೆ ನಡೆಸುತ್ತಿರುವುದು ಭಾರಿ ನಿರೀಕ್ಷೆಗೆ ಕಾರಣವಾಗಿದೆ. ಬಿಜೆಪಿಯ ವನತಿ ಶ್ರೀನಿವಾಸನ್ ಎದುರು ಕಮಲ್ ಹಾಸನ್ ಅಲ್ಲಿ ದೊಡ್ಡ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಕಮಲ್ ಹಾಸನ್ ಪಕ್ಷಕ್ಕೆ ಅಲ್ಲಿ ಉತ್ತಮ ವೋಟ್ ಬ್ಯಾಂಕ್ ಇದೆ ಎನ್ನಲಾಗಿದೆ.

ಇತ್ತ ಏಪ್ರಿಲ್ 6 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ತಮ್ಮ ಕೋಲಥೂರ್ ಕ್ಷೇತ್ರದಿಂದ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಚೆಪಾಕ್ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣೆಗೆ ಪ್ರವೇಶಿಸಲಿದ್ದಾರೆ.

ಶುಕ್ರವಾರ ತಮಿಳುನಾಡು ಚುನಾವಣೆಗೆ ಎಲ್ಲಾ 173 ಅಭ್ಯರ್ಥಿಗಳ ಪಟ್ಟಿಯನ್ನು ಸ್ಟಾಲಿನ್ ಬಿಡುಗಡೆ ಮಾಡಿದರು. ಹಿರಿಯರಾದ ದುರೈ ಮುರುಗನ್, ಕೆ.ಎನ್ ನೆಹರು, ಕೆ.ಪೊನ್ಮುಡಿ ಮತ್ತು ಎಮ್ಆರ್‌ಕೆ ಪನ್ನಿರ್‌ಸೆಲ್ವಂ ಸೇರಿದಂತೆ ಹಲವರು ತಮ್ಮ ಟಿಕೆಟ್‌ಗಳನ್ನು ಗಟ್ಟಿ ಮಾಡಿಕೊಂಡಿದ್ದಾರೆ.

ಮಾರ್ಚ್ 15 ರಂದು ನಾಮಪತ್ರವನ್ನು ಸಲ್ಲಿಸಿ ಅಭಿಯಾನದ ಮುಂದಿನ ಹಂತದಲ್ಲಿ ಪ್ರಚಾರ ಕೈಗೊಳ್ಳುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಸ್ಟಾಲಿನ್ ಹೇಳಿದ್ದಾರೆ. 2011 ರಿಂದ ಅಧಿಕಾರದಿಂದ ಹೊರಗಿರುವ ಡಿಎಂಕೆ, ಆಡಳಿತಾರೂ AIADMK ಯನ್ನು ಪದಚ್ಯುತಗೊಳಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯುವತ್ತ ದೃಷ್ಟಿ ಹಾಯಿಸುತ್ತಿದೆ.


ಇದನ್ನೂ ಓದಿ: ತಮಿಳುನಾಡು ಚುನಾವಣೆ: BJPಗೆ 20 ಮತ್ತು PMKಗೆ 23 ಸೀಟು ನೀಡಿದ AIADMK

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...