Homeಮುಖಪುಟಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಸಂಸದ ಪ್ರತಾಪ್ ಸಿಂಹ ಕೋಟ್ಯಾಂತರ ರೂ ಕಮಿಷನ್ ತಿಂದಿದ್ದಾರೆ: ಎಚ್.ವಿಶ್ವನಾಥ್

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಸಂಸದ ಪ್ರತಾಪ್ ಸಿಂಹ ಕೋಟ್ಯಾಂತರ ರೂ ಕಮಿಷನ್ ತಿಂದಿದ್ದಾರೆ: ಎಚ್.ವಿಶ್ವನಾಥ್

ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ನನ್ನ ಮನೆಯನ್ನು ನೋಡಿ ಮತ್ತು ಈಗ ಪ್ರತಾಪ್ ಸಿಂಹ ಕಟ್ಟಿಸುತ್ತಿರುವ ಮನೆಯನ್ನು ನೋಡಿ. ಎಷ್ಟು ದೊಡ್ಡ ಮನೆ ಕಟ್ಟಿಸುತ್ತಿದ್ದಾರೆ ಗೊತ್ತೆ?

- Advertisement -
- Advertisement -

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಸಂಸದ ಪ್ರತಾಪ್ ಸಿಂಹ ಕೋಟ್ಯಾಂತರ ರೂ ಕಮಿಷನ್ ತಿಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ದುಬಾರಿ ಟೋಲ್ ವಸೂಲಿ ಮಾಡುತ್ತಿರುವುದರ ವಿರುದ್ಧ​ ಮಾರ್ಚ್ 17ರಂದು ಹೆದ್ದಾರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಕಾಮಗಾರಿಯಲ್ಲಿ ದೊಡ್ಡ ಅಕ್ರಮವಾಗಿದ್ದು, ಹೆದ್ದಾರಿಗೆ ಸರಬರಾಜು ಆಗಿರುವ ಸಾಮಗ್ರಿಗಳು ಪ್ರತಾಪ್ ಸಿಂಹ ಬೆಂಬಲಿಗರಿಗೆ ಸೇರಿದ್ದಾಗಿವೆ. ಆ ರೀತಿಯಲ್ಲಿ ಕೋಟ್ಯಾಂತರ ರೂ ಕಮಿಷನ್ ಹೊಡೆದಿದ್ದಾರೆ. ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ನನ್ನ ಮನೆಯನ್ನು ನೋಡಿ ಮತ್ತು ಈಗ ಪ್ರತಾಪ್ ಸಿಂಹ ಕಟ್ಟಿಸುತ್ತಿರುವ ಮನೆಯನ್ನು ನೋಡಿ. ಎಷ್ಟು ದೊಡ್ಡ ಮನೆ ಕಟ್ಟಿಸುತ್ತಿದ್ದಾರೆ ಗೊತ್ತೆ ಎಂದು ಪ್ರಶ್ನಿಸಿದರು.

ದಶಪಥ ರಸ್ತೆ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲ. ಒಂದು ಕಡೆ ಪ್ರತಾಪ್ ಸಿಂಹ ನಾನೇ ಇದರ ರುವಾರಿ ಅಂತಾರೆ. ಆದರೆ 2014 ರಲ್ಲಿ ನಾನು, ಧ್ರುವನಾರಾಯಣ್ ಸಂಸದರಾಗಿದ್ದೆವು. ಮೊದಲು ಇದ್ದ 4 ಪಥದ ರಸ್ತೆಗೆ ಎಸ್. ಎಂ ಕೃಷ್ಣ ಅವರ ಕಾಲಾವಧಿಯಲ್ಲಿ ಅನುಮೋದನೆ ಸಿಕ್ಕಿತ್ತು. ನಂತರ ಎಚ್.ಸಿ ಮಹಾದೇವಪ್ಪ ಅವರು ಪಿಡಬ್ಲ್ಯುಡಿ ಸಚಿವರಾಗಿದ್ದಾಗ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಯುಪಿಎ ಸರ್ಕಾರದ ಮನಮೋಹನ್ ಸಿಂಗ್ ಈ ರಸ್ತೆ ಅಭಿವೃದ್ಧಿಗೆ ಅನುಮೋದನೆ ಕೊಟ್ಟಿದ್ದರು. ಈಗ ಬಿಜೆಪಿಯವರು ನಾವು ಮಾಡಿಸಿದ್ದು ಅಂತ ಬೊಗಳೆ ಬಿಡುತ್ತಿದ್ದಾರೆ. ಯಾರಪ್ಪನ ದುಡ್ಡು ತಂದು ಕೊಟ್ಟಿದ್ದೀರೀ? ಜನರ ಬೆವರಿನ ದುಡ್ಡಿನಿಂದ ಮಾಡಿಸಿದ್ದು ಇದು. ನಿಮ್ಮ ಮನೆಯಿಂದ ತಂದಿದ್ದ ದುಡ್ಡಲ್ಲ ಎಂದರು.

ಬಿಜೆಪಿ ಅವರು ತಮ್ಮ ಮನೆಯಿಂದ ತಂದು ಮಾಡಿಸಿದ ಹಾಗೆ ಮಾತಾಡುತ್ತಾರೆ. ಯುಪಿಎ ಸರ್ಕಾರದಲ್ಲಿ ಸುಮಾರು 3 ಸಾವಿರ ಕೋಟಿಗೆ ಅನುಮೋದನೆ ಸಿಕ್ಕಿತ್ತು. ನಂತರ ಬಿಜೆಪಿ ಸರ್ಕಾರ 6 ಸಾವಿರ ಕೋಟಿಗೆ ತಂತು. ಈಗ 9 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಇದು ಖಾಸಗಿ ಹೆದ್ದಾರಿ ನಿರ್ಮಾಣ ಕಂಪನಿ ವತಿಯಿಂದ ನಿರ್ಮಿಸಲಾಗುತ್ತಿದೆ. ಇವರು ಗಡ್ಕರಿ ಸಂಬಂಧಿ. 40% ಸರ್ಕಾರ ಕೊಟ್ಟರೆ ಇನ್ನು ಉಳಿದ 60% ಹಣವನ್ನು ಟೋಲ್ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಆರೋಪಿಸಿದರು.

ಅರ್ಧ ಶೇವ್ ಮಾಡಿದ ಹಾಗೆ ಇನ್ನೂ ಕಾಮಗಾರಿ ಮುಗಿಯದಿದ್ದರೂ ಟೋಲ್ ಸಂಗ್ರಹಿಸಿಲು ಸರ್ಕಾರ ಹೊರಟಿದೆ. ಇನ್ನೂ ಸರ್ವೀಸ್ ರಸ್ತೆ ಕಾಮಗಾರಿ ಮುಗಿದಿಲ್ಲ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಸಾವಿರಾರು ಜನರ ಜೀವನ ಬೀದಿಗೆ ಬಿದ್ದಿದೆ. ಇದೆಲ್ಲದರ ವಿರುದ್ಧ ಪ್ರತಿಭಟನೆ ನಡೆಸುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.

ಇದನ್ನೂ ಓದಿ; ಲಂಚಾರೋಪಿ ಮಾಡಾಳ್ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಲೋಕಾಯುಕ್ತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...