Homeಮುಖಪುಟಪ್ರವಾಹ ಸಂತ್ರಸ್ತರ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ

ಪ್ರವಾಹ ಸಂತ್ರಸ್ತರ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ

- Advertisement -
- Advertisement -

ಮೂಡಿಗೆರೆ ತಾಲ್ಲೂಕಿನ ಕಳಸದಿಂದ ಸಂತ್ರಸ್ತರಾದ ಪದ್ಮರಾಜ್ ಎಂಬುವವರು ತೀರಾ ಮಳೆಯಿಂದಾಗಿ ಸಂಕಷ್ಟದಲ್ಲಿದ್ದೇವೆ. 48 ಗಂಟೆ ಕಳೆದರೂ ಯಾರೂ ರೆಸ್ಫಾನ್ಸ್ ಮಾಡುತ್ತಿಲ್ಲ ಎಂದು ಅವರ ಶಾಸಕರಾದ ಎಂ.ಪಿ ಕುಮಾರಸ್ವಾಮಿ ರವರ ಬಳಿ ತಮ್ಮ ಅಳಲು ತೋಡಿಕೊಂಡಾಗ ಶಾಸಕರು ದರ್ಪದಿಂದ ವರ್ತಿಸಿರುವ ಘಟನೆ ನಡೆದಿದೆ.

ಕಳಸಕ್ಕೆ ದಾರಿಯಿಲ್ಲ. ಬಾಳೂರು ಹ್ಯಾಂಡ್ ಪೋಸ್ಟ್ ವರೆಗೆ ಮಾತ್ರ ಬರಬಹುದು. ಅಲ್ಲಿಂದು ಮುಂದೆ ಬರಲು ಸಾಧ್ಯವಾಗಿಲ್ಲ. ಎಸ್ಪಿ ಡಿಸಿ ಯಾರು ಬರಲಾಗುವುದಿಲ್ಲ ಎಂದರು. ನಂತರ ಸಂತ್ರಸ್ತರು ಮಧುಗುಂಡಿಯಲ್ಲಿ 12 ಜನ ನಾಪತ್ತೆಯಾಗಿದ್ದಾರೆ. ಮೂರು ಮನೆಗಳು ಕುಸಿದಿವೆ. ಪರಿಹಾರ ಕೊಟ್ಟಿಲ್ಲ ಅವರ ಜೀವ ಉಳಿಸಬೇಕೋ ಬೇಡವೋ ಎಂದು ಕೇಳಿದ್ದಾರೆ.

ಆಗ ಕೆರಳಿದ ಶಾಸಕ ಎಂ.ಪಿ ಕುಮಾರಸ್ವಾಮಿ ನೀನೇನೂ ದೊಡ್ಡ ಮನುಷ್ಯನ, ಇಡೋ ಫೋನ್, ಒದ್ದುಬಿಡುತ್ತೇನೆ ಎಂಬುದಲ್ಲದೇ ಇನ್ನೂ ಗಂಭೀರ ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ದು ಫೋನ್ ಕಟ್ ಮಾಡಿದ್ದಾರೆ.

ಪ್ರವಾಹ ಸಂತ್ರಸ್ತರ ಮೇಲೆ ಬಿಜೆಪಿ ಶಾಸಕರಿಂದ ಪದೇ ಪದೇ ದೌರ್ಜನ್ಯವೆಸಗುತ್ತಿರುವುದು ಕಂಡುಬರುತ್ತಿದೆ. ಮೊನ್ನೆ ಗದಗ ಜಿಲ್ಲೆಯಲ್ಲಿ ಸಂತ್ರಸ್ತರ ಮೇಲೆ ಲಾಠಿಚಾರ್ಜ್ ಮಾಡಲಾಗಿತ್ತು. ನಿನ್ನೆ ರೇಣುಕಾಚಾರ್ಯ ನಾಟಕದ ವಿಡಿಯೋ ವೈರಲ್ ಆಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...