ಮಣಿಪುರದಲ್ಲಿ ಇಂದು ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೆ ಚಾಲನೆ ನೀಡುವ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಮಣಿಪುರಕ್ಕೆ ಮತ ಕೇಳಲು ಬರುತ್ತಾರೆ .ಆದರೆ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾಗ ಮುಖ ತೋರಿಸುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ವೋ ಸಮಂದರ್ ಕೆ ಉಪರ್ ಸೈರ್ ಕರ್ತಾ ಫಿರ್ತಾ ಹೈ ಔರ್ ಬೈತೆ ಜಗಹ್ ಜಪ್ ಕರ್ತೆ ರೆಹತೇ ಹೇ ರಾಮ್ ರಾಮ್ (ಅವರು ಸಮುದ್ರದ ಮೇಲಿನ ಸೇತುವೆಯ ಮೇಲೆ ಪ್ರವಾಸ ಮಾಡುತ್ತಿರುವುದನ್ನು ಕಾಣಬಹುದು ಅಥವಾ ರಾಮ್ ರಾಮ್ ಎಂದು ಜಪಿಸುತ್ತಿರುವುದು ಕಂಡುಬರುತ್ತದೆ)’ ಎಂದು ಖರ್ಗೆ ಹೇಳಿದರು.
‘ಮುಖ್ ಮೇ ರಾಮ್, ಬಗಲ್ ಮೇ ಚೂರಿ, ಜನರೊಂದಿಗೆ ಹೀಗೆ ಮಾಡಬೇಡಿ… ಎಲ್ಲರಿಗೂ ದೇವರಲ್ಲಿ ನಂಬಿಕೆ ಇದೆ. ಆದರೆ ಮತಕ್ಕಾಗಿ ಇದನ್ನು ಮಾಡಬೇಡಿ… ಬಿಜೆಪಿಗರು ಜನರನ್ನು ಪ್ರಚೋದಿಸಲು ಧರ್ಮವನ್ನು ಬಳಸುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.
‘ಬಿಜೆಪಿ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸುತ್ತದೆ, ಜನರನ್ನು ಪ್ರಚೋದಿಸುತ್ತದೆ; ನಾವು ಜಾತ್ಯತೀತತೆ, ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇವೆ’ ಎಂದು ಖರ್ಗೆ ಹೇಳಿದರು.
‘ಜವಾಹರಲಾಲ್ ನೆಹರು ಅವರು ಮಣಿಪುರಕ್ಕೆ ಮೊದಲು ಭೇಟಿ ನೀಡಿದಾಗ, ಅವರು ಅದನ್ನು ಭಾರತದ ರತ್ನ ಎಂದು ಬಣ್ಣಿಸಿದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಕೂಡ ಅದನ್ನೇ ಹೇಳಿದ್ದರು. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಮತ್ತು ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ನಿಲ್ಲಿಸಲು ಕಾಂಗ್ರೆಸ್ ಯಾತ್ರೆ ಕೈಗೊಂಡಿದೆ’ ಎಂದು ಖರ್ಗೆ ಹೇಳಿದರು.
‘ಯಾತ್ರೆಯು ಜನರಿಗೆ ಉದ್ಯೋಗವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ; ಬೆಲೆ ಏರಿಕೆ ವಿರುದ್ಧವಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡ ಭಾರತ್ ಜೋಡೋ ಯಾತ್ರೆಯ ಭಾಗವಾಗಿದೆ. ಭಾನುವಾರ ಮಣಿಪುರದ ತೌಬಲ್‌ನಲ್ಲಿ ಕಾಂಗ್ರೆಸ್‌ನಿಂದ ಯಾತ್ರೆಗೆ ಚಾಲನೆ ನೀಡಲಾಯಿತು.
ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಕಳೆದ ವರ್ಷದಂತೆ ನಾನು ಈ (ಭಾರತ್ ಜೋಡೋ ನ್ಯಾಯ್) ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ಮಾಡಲು ಬಯಸಿದ್ದೆ. ಆದರೆ, ಮುಂಬರುವ (ಲೋಕಸಭಾ) ಚುನಾವಣೆಯನ್ನು ಪರಿಗಣಿಸಿ, ಕಾಲ್ನಡಿಗೆಯಲ್ಲಿ ನಡೆಯುವುದಕ್ಕೆ ಹೆಚ್ಚಿನ ಸಮಯ ಅಗತ್ಯವಾಗಿತ್ತು. ಆದ್ದರಿಂದ, ಕಾಂಗ್ರೆಸ್ ಪಕ್ಷವು ಈ ಯಾತ್ರೆಯನ್ನು ಹೈಬ್ರಿಡ್ ಮೋಡ್‌ನಲ್ಲಿ ಮಾಡಲು ನಿರ್ಧರಿಸಿದೆ’ ಎಂದರು.
ಇದನ್ನೂ ಓದಿ; ಮಣಿಪುರದ ತೌಬಲ್ ಜಿಲ್ಲೆಯಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೆ ಚಾಲನೆ


