Homeಮುಖಪುಟ‘ನಿಮ್ಮ ನೋವು ಅರ್ಥವಾಗುತ್ತದೆ, ಇಲ್ಲಿ ಶಾಂತಿ ಸ್ಥಾಪಿಸುತ್ತೇವೆ…’: ಮಣಿಪುರದ ಜನತೆಗೆ ಧೈರ್ಯ ತುಂಬಿದ ರಾಹುಲ್

‘ನಿಮ್ಮ ನೋವು ಅರ್ಥವಾಗುತ್ತದೆ, ಇಲ್ಲಿ ಶಾಂತಿ ಸ್ಥಾಪಿಸುತ್ತೇವೆ…’: ಮಣಿಪುರದ ಜನತೆಗೆ ಧೈರ್ಯ ತುಂಬಿದ ರಾಹುಲ್

- Advertisement -
- Advertisement -

ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರುವ ಭರವಸೆಯೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಮಣಿಪುರದಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು ಆರಂಭಿಸಿದರು. ಕುಕಿ-ಮೈತೇಯಿ ಬುಡಕಟ್ಟುಗಳ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 180ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಮಣಿಪುರ ರಾಜಧಾನಿ ಇಂಫಾಲ್‌ನ ದಕ್ಷಿಣದಲ್ಲಿರುವ ತೌಬಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಬಹುಶಃ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ಗೆ ಮಣಿಪುರ ಭಾರತದ ಭಾಗವಾಗಿಲ್ಲ ಎಂದು ಹೇಳಿದರು.

‘ಲಕ್ಷಗಟ್ಟಲೆ ಜನರು ನಷ್ಟವನ್ನು ಎದುರಿಸಿದ್ದಾರೆ. ಆದರೆ, ನಿಮ್ಮ ಕಣ್ಣೀರು ಒರೆಸಲು ಪ್ರಧಾನಿ ಇಲ್ಲಿಗೆ ಬಂದಿಲ್ಲ, ನಿಮ್ಮ ಕೈ ಹಿಡಿಯಲು ಅಥವಾ ನಿಮ್ಮನ್ನು ಅಪ್ಪಿಕೊಳ್ಳಲಿಲ್ಲ, ಬಹುಶಃ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್ಎಸ್‌ಗೆ ಮಣಿಪುರ ಭಾರತದ ಭಾಗವಲ್ಲ. ನಿಮ್ಮ ನೋವು ಅವರ ನೋವಲ್ಲ’ ರಾಹುಲ್ ಗಾಂಧಿ ಹೇಳಿದರು.

‘ಮಣಿಪುರದ ಜನರು ಅನುಭವಿಸಿದ ನೋವನ್ನು ನಾವು ಅರ್ಥಮಾಡಿಕೊಂಡಿದ್ದೇವೆ; ನಿಮ್ಮ ನೋವು, ದುಃಖವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಈ ರಾಜ್ಯದ ಸಾಮರಸ್ಯ, ಶಾಂತಿ ಮತ್ತು ವಾತ್ಸಲ್ಯವನ್ನು ಮರಳಿ ತರುತ್ತೇವೆ’ ಎಂದು ಅವರು ಜನರಿಗೆ ದೈರ್ಯ ತುಂಬಿದರು.

ರಾಹುಲ್ ಎರಡನೇ ಭಾರತ್ ಜೋಡೋ ಯಾತ್ರೆಯು 100 ಲೋಕಸಭಾ ಕ್ಷೇತ್ರಗಳು, 337 ವಿಧಾನಸಭಾ ಕ್ಷೇತ್ರಗಳು ಮತ್ತು 110 ಜಿಲ್ಲೆಗಳಲ್ಲಿ 6,713 ಕಿಮೀ ದೂರವನ್ನು ಕ್ರಮಿಸಲಿದೆ. ಇದು 67 ದಿನಗಳ ನಂತರ ಮಾರ್ಚ್ 20ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ.

ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಈಶಾನ್ಯ ರಾಜ್ಯಕ್ಕೆ ಬಂದಿರುವುದು ಮತ ಕೇಳಲು ಮಾತ್ರವೇ ಹೊರತು ರಾಜ್ಯದ ಜನತೆ ನೋವಿನಲ್ಲಿರುವಾಗ ದುಃಖ ಹಂಚಿಕೊಳ್ಳಲು ಅಲ್ಲ ಎಂದು ಹೇಳಿದ್ದರು.

‘ಮೋದಿ ಅವರಿಗೆ ಸಮುದ್ರದಲ್ಲಿ ಓಡಾಡಲು, ಸಮುದ್ರದಲ್ಲಿ ಸ್ನಾನ ಮಾಡಲು ಸಮಯವಿದೆ. ಆದರೆ ಮಣಿಪುರಕ್ಕೆ ಬಂದಿಲ್ಲ. ಮೋದಿ ಅವರು ‘ರಾಮ್, ರಾಮ್’ ಎಂದು ಜಪಿಸುತ್ತಾರೆ, ಆದರೆ ಮತ ಕೇಳಲು ಅವರು ಅದನ್ನು ಮಾಡಬಾರದು. ಬಿಜೆಪಿ ಧರ್ಮ ಮತ್ತು ರಾಜಕೀಯವನ್ನು ಬೆರೆಸುತ್ತದೆ. ಜನರನ್ನು ಪ್ರಚೋದಿಸುತ್ತದೆ’ ಎಂದು ಅವರು ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಇದನ್ನೂ ಓದಿ; ‘ಮುಖ್ ಮೇ ರಾಮ್, ಬಗಲ್ ಮೇ ಚೂರಿ…’; ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...