Homeಮುಖಪುಟಮುಂಬೈ: ಕಾನೂನು ಹೋರಾಟದ ಬಳಿಕ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ

ಮುಂಬೈ: ಕಾನೂನು ಹೋರಾಟದ ಬಳಿಕ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ

- Advertisement -
- Advertisement -

ಮುಂಬೈ: ಸುಮಾರು ಎರಡು ತಿಂಗಳ ಕಾಲ ನಡೆದ ಕಾನೂನು ಹೋರಾಟ ಮತ್ತು ಪೊಲೀಸರಿಂದ ಪದೇ ಪದೇ ಅನುಮತಿ ನಿರಾಕರಿಸಿದ ನಂತರ, ಆಗಸ್ಟ್ 20ರಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ “ಫ್ರೀ ಪ್ಯಾಲೆಸ್ತೀನ್” ಮತ್ತು “ನದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಸ್ವತಂತ್ರವಾಗಲಿದೆ” ಎಂಬ ಘೋಷಣೆಗಳನ್ನು ಕೂಗಲಾಯಿತು.

ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಗಳ ಸದಸ್ಯರು ಮತ್ತು ರಾಜಕೀಯ ಮುಖಂಡರು ಈ ಪ್ರತಿಭಟನೆಯಲ್ಲಿ ಒಗ್ಗೂಡಿದರು. ಇದು ಮುಂಬೈನಲ್ಲಿ ಡಿಸೆಂಬರ್ 2023ರ ನಂತರ ನಡೆದ ಮೊದಲ ದೊಡ್ಡ ಪ್ಯಾಲೆಸ್ತೀನ್ ಬೆಂಬಲ ಪ್ರತಿಭಟನೆಯಾಗಿದೆ.

ಈ ಪ್ರತಿಭಟನೆಯನ್ನು ಮೂಲತಃ ಜೂನ್ 18ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದರು. “ಭಾರತದ ವಿದೇಶಾಂಗ ನೀತಿಯೊಂದಿಗೆ ಸಂಘರ್ಷ” ಮತ್ತು “ಕಾನೂನು ಸುವ್ಯವಸ್ಥೆಗೆ ಭಂಗ” ಬರುವ ಸಾಧ್ಯತೆಯಿದೆ ಎಂದು ಕಾರಣ ನೀಡಿದರು. ಅನುಮತಿ ನಿರಾಕರಣೆಯ ಬೆನ್ನಲ್ಲೇ, ಅಧಿಕಾರಿಗಳು ಪ್ರಮುಖ ಮುಖಂಡರನ್ನು ಅವರ ಮನೆ ಮತ್ತು ಕಚೇರಿಗಳಿಂದ ವಶಕ್ಕೆ ಪಡೆದರು.

ಕಾನೂನು ಹೋರಾಟದ ಹಾದಿ

ಜುಲೈ ಮತ್ತು ಆಗಸ್ಟ್‌ನಲ್ಲಿ ಪೊಲೀಸರು ಹಲವು ಬಾರಿ ಅನುಮತಿ ನಿರಾಕರಿಸಿದ ಕಾರಣ, ಆಯೋಜಕರು ಬಾಂಬೆ ಹೈಕೋರ್ಟ್ ಮೊರೆ ಹೋದರು. ನ್ಯಾಯಾಧೀಶರು ಆರಂಭದಲ್ಲಿ ಅರ್ಜಿಯನ್ನು ವಜಾಗೊಳಿಸಿ, ದೇಶೀಯ ಸಮಸ್ಯೆಗಳ ಮೇಲೆ ಗಮನಹರಿಸಲು ಮತ್ತು “ದೇಶಭಕ್ತರಾಗಿರಲು” ಸೂಚಿಸಿದರು. ಆದಾಗ್ಯೂ, ಆಗಸ್ಟ್ 12ರಂದು ಪೊಲೀಸರು ತಮ್ಮ ಆಕ್ಷೇಪಣೆಗಳನ್ನು ಹಿಂಪಡೆದು, ಆಗಸ್ಟ್ 20ರಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಶಾಂತಿಯುತ ಸಭೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿದರು.

ಸಿಪಿಐ(ಎಂ) ಮುಂಬೈ ಪ್ರಧಾನ ಕಾರ್ಯದರ್ಶಿ ಮತ್ತು ಸಂಘಟಕರಲ್ಲೊಬ್ಬರಾದ ಶೈಲೇಂದ್ರ ಕಾಂಬ್ಳೆ ಈ ಬಗ್ಗೆ ಪ್ರತಿಕ್ರಿಯಿಸಿ, “ಇದು ಸರಳವಾದ ಬೆಂಬಲ ಸಭೆ. ಇದಕ್ಕೆ ಇಷ್ಟು ಸುದೀರ್ಘ ಕಾನೂನು ಹೋರಾಟ ಏಕೆ ಬೇಕಾಯಿತು? ಒಂದು ಸಣ್ಣ ಬೆಂಬಲ ಸಮಾವೇಶಕ್ಕೂ ತಿಂಗಳುಗಟ್ಟಲೆ ಕಾನೂನು ಹೋರಾಟ ನಡೆಸಬೇಕಾದರೆ, ಇದು ಸರ್ವಾಧಿಕಾರವಲ್ಲವೇ?” ಎಂದು ಪ್ರಶ್ನಿಸಿದರು.

ಪ್ರತಿಭಟನೆಯ ಧ್ವನಿ

ಈ ಪ್ರತಿಭಟನೆಯು ಸರ್ಕಾರಗಳು ತಮ್ಮ ನಿಲುವುಗಳನ್ನು ಬದಲಾಯಿಸುತ್ತಿದ್ದರೂ, ಜನರು ಪ್ಯಾಲೆಸ್ತೀನ್ ಪರವಾಗಿಯೇ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಿತು. ಕೈಯಲ್ಲಿ ಹಿಡಿದ ಫಲಕಗಳು ಮತ್ತು ಸಾಂಪ್ರದಾಯಿಕ ಪ್ಯಾಲೆಸ್ತೀನ್ ಶಿರೋವಸ್ತ್ರಗಳಾದ ಕೆಫಿಯೆಗಳು ತೀಕ್ಷ್ಣ ಸಂದೇಶಗಳನ್ನು ಸಾರುತ್ತಿದ್ದವು. ಫಲಕಗಳಲ್ಲಿ “ನೀವು ಮುಸ್ಲಿಮರಾಗಿರಬೇಕಿಲ್ಲ, ಪ್ಯಾಲೆಸ್ತೀನ್ ಪರ ನಿಲ್ಲಲು ಮಾನವರಾಗಿದ್ದರೆ ಸಾಕು,” “ಗಾಜಾದಲ್ಲಿ ನರಮೇಧ ನಿಲ್ಲಿಸಿ” ಮತ್ತು “ಮಕ್ಕಳನ್ನು ಕೊಲ್ಲುವುದು ಆತ್ಮರಕ್ಷಣೆ ಅಲ್ಲ” ಎಂಬ ಘೋಷಣೆಗಳು ರಾರಾಜಿಸಿದವು. ಇತರ ಫಲಕಗಳು “ವರ್ಣಭೇದ ನೀತಿಯ ಇಸ್ರೇಲ್ ಅನ್ನು ಬಹಿಷ್ಕರಿಸಿ,” “ಮೌನವೆಂದರೆ ಸಹಭಾಗಿತ್ವ” ಮತ್ತು “ಈಗಲೇ ಆಕ್ರಮಣ ಕೊನೆಗೊಳಿಸಿ” ಎಂದು ಕರೆ ನೀಡಿದವು. ಈ ಸಂದೇಶಗಳು ಪ್ಯಾಲೆಸ್ತೀನ್‌ಗೆ ಬೆಂಬಲವು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ, ಅದು ಮಾನವೀಯತೆ ಮತ್ತು ನ್ಯಾಯಕ್ಕಾಗಿರುವ ಹಂಚಿಕೆಯ ಬೇಡಿಕೆ ಎಂಬುದನ್ನು ಒತ್ತಿಹೇಳಿದವು.

ಪ್ರತಿಭಟನಾಕಾರರ ಆಕ್ರೋಶ ಮತ್ತು ಬೇಡಿಕೆಗಳು

ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವತಿಯೊಬ್ಬರು, “ನಾನು ಇಷ್ಟು ದಿನ ನನ್ನೊಳಗೆ ಇಟ್ಟುಕೊಂಡಿದ್ದ ನೋವನ್ನು ವ್ಯಕ್ತಪಡಿಸಲು ನನಗೆ ಅವಕಾಶ ಬೇಕಿತ್ತು, ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಕನಿಷ್ಠ ಈ ನರಮೇಧವನ್ನು ಖಂಡಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ಯಾಲೆಸ್ತೀನ್ ಮತ್ತು ಭಾರತದ ಧ್ವಜಗಳು ಒಟ್ಟಿಗೆ ಹಾರಿದವು, “ನಿಂದಿಯಿಂದ ಸಮುದ್ರದ ವರೆಗೆ, ಪ್ಯಾಲೆಸ್ತೀನ್ ಸ್ವತಂತ್ರವಾಗಲಿದೆ” ಮತ್ತು “ಸಾಮ್ರಾಜ್ಯಶಾಹಿತ್ವಕ್ಕೆ ಧಿಕ್ಕಾರ”ದಂತಹ ಘೋಷಣೆಗಳು ಪ್ರತಿಧ್ವನಿಸಿದವು. ಕಾರ್ಯಕರ್ತ ನಿಶಾಂತ್ ಬಂಗೇರಾ ಮಾತನಾಡಿ, “ವಿಶ್ವಾದ್ಯಂತ ಜನರು ಪ್ಯಾಲೆಸ್ತೀನ್‌ಗಾಗಿ ದನಿ ಎತ್ತುತ್ತಿದ್ದಾರೆ. ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್ ಪರವಾಗಿದ್ದರೂ, ಸರ್ಕಾರದ ಇಸ್ರೇಲ್ ಜೊತೆಗಿನ ಮೈತ್ರಿಯಿಂದಾಗಿ ಅಧಿಕೃತ ಬೆಂಬಲ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಮುಂಬೈನಂತಹ ನಗರಗಳಲ್ಲಿ ನಾಗರಿಕರು, ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳು ಮತ್ತು ಧಾರ್ಮಿಕ ಮುಖಂಡರು ಒಗ್ಗೂಡುವುದು ಭರವಸೆ ಮೂಡಿಸುತ್ತದೆ” ಎಂದು ಹೇಳಿದರು.

ಪ್ರತಿಭಟನಾಕಾರರು ಗಾಜಾದಲ್ಲಿ ನಡೆಯುತ್ತಿರುವ ನರಮೇಧವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಐಸಿಸಿ (ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್) ಹೊರಡಿಸಿರುವ ಬಂಧನ ವಾರೆಂಟ್‌ಗೆ ಅನುಗುಣವಾಗಿ ಕಠಿಣ ಅಂತರರಾಷ್ಟ್ರೀಯ ಹೊಣೆಗಾರಿಕೆಯನ್ನು ಜಾರಿಗೊಳಿಸಲು ಕರೆ ನೀಡಿದರು. ಭಾರತವು ಇಸ್ರೇಲ್‌ನೊಂದಿಗೆ ಎಲ್ಲಾ ರಾಜತಾಂತ್ರಿಕ, ಮಿಲಿಟರಿ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.

ಪ್ರಮುಖ ವ್ಯಕ್ತಿಗಳ ಬೆಂಬಲ

ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟ್ವರ್ಧನ್, ನಿರ್ದೇಶಕ ಮತ್ತು ಚಿತ್ರಕಥೆಗಾರ ಸಯೀದ್ ಮಿರ್ಜಾ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್, ಮತ್ತು ನಟಿ ಸ್ವರಾ ಭಾಸ್ಕರ್ ಅವರು ಈ ಪ್ರತಿಭಟನೆಯಲ್ಲಿ ಭಾಷಣಕಾರರಾಗಿ ಭಾಗವಹಿಸಿದರು. ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಷನ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ನಾಯಕರು ಹಾಗೂ ಸದಸ್ಯರು ಕೂಡ ಉಪಸ್ಥಿತರಿದ್ದರು. ಅವರ ಉಪಸ್ಥಿತಿಯು ಈ ಸಭೆಯು ಕೇವಲ ರಾಜಕೀಯ ಪ್ರದರ್ಶನವಲ್ಲ, ಆದರೆ ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧದ ಒಂದು ಪ್ರಮುಖ ನೈತಿಕ ಹೇಳಿಕೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಭಯದ ವಾತಾವರಣದ ವಿರುದ್ಧ ಪ್ರತಿಭಟನೆ

ಈ ರ್ಯಾಲಿ ಭಾರತದಲ್ಲಿ ಪ್ಯಾಲೆಸ್ತೀನ್ ಪರ ಚಳುವಳಿಗಳಿಗೆ ಆವರಿಸಿದ್ದ ಭಯದ ವಾತಾವರಣವನ್ನು ಸವಾಲಿಗೆ ಒಡ್ಡಿತು. ಇತ್ತೀಚಿನ ತಿಂಗಳುಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಕಿರುಕುಳಕ್ಕೊಳಪಡಿಸಿದ್ದರು ಮತ್ತು ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಎತ್ತಿದ್ದಕ್ಕಾಗಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು.

ಬಿಡಿಎಸ್ (ಬಹಿಷ್ಕಾರ, ವಿನಿಯೋಗ, ನಿರ್ಬಂಧಗಳು) ಇಂಡಿಯಾದ ಕಾರ್ಯಕರ್ತೆ ಪೂಜಾ, “ಅಲಿಗಢದಲ್ಲಿ ತಲ್ಹಾ ಮನ್ನಾನ್‌ನಂತಹ ವಿದ್ಯಾರ್ಥಿಗಳ ವಿರುದ್ಧ ಪ್ಯಾಲೆಸ್ತೀನ್‌ಗೆ ಬೆಂಬಲ ತೋರಿಸಿದ್ದಕ್ಕಾಗಿ ಸುಮ್ಮನೆ ಪ್ರಕರಣ ದಾಖಲಿಸಲಾಗಿದೆ. ಪುಣೆಯಲ್ಲಿ ಬಿಡಿಎಸ್ ಇಂಡಿಯಾದ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಆಗಸ್ಟ್ 20ರಂದು ಯಾರೂ ಪ್ಯಾಲೆಸ್ತೀನ್ ಬಗ್ಗೆ ಮಾತನಾಡಬಾರದು ಎಂಬ ಭಾವನೆ ಸೃಷ್ಟಿಯಾಗುತ್ತಿತ್ತು. ಆದರೆ, ಈ ಪ್ರತಿಭಟನೆಯು ಆ ಅಡಚಣೆಯನ್ನು ಮುರಿದಿದೆ” ಎಂದು ಹೇಳಿದರು.

ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದರೂ, ಸರ್ಕಾರದ ಇಸ್ರೇಲ್ ಜೊತೆಗಿನ ಸಂಬಂಧಗಳು ಅದರ ಅಧಿಕೃತ ನಿಲುವನ್ನು ಬದಲಿಸಿವೆ. ಆದರೂ, ಆಜಾದ್ ಮೈದಾನದಲ್ಲಿ ನಡೆದ ಈ ಪ್ರತಿಭಟನೆ, ಭಾರತದಾದ್ಯಂತ ನಡೆಯುತ್ತಿರುವ ಇತರ ಪ್ರತಿಭಟನೆಗಳಂತೆ, ಸಾರ್ವಜನಿಕರ ಬೆಂಬಲವು ಪ್ಯಾಲೆಸ್ತೀನ್ ಪರವಾಗಿ ದೃಢವಾಗಿದೆ ಎಂದು ಸೂಚಿಸುತ್ತದೆ.

ಪ್ರತಿಭಟನೆಯ ಅಂತ್ಯದಲ್ಲಿ ಒಬ್ಬರು, “ವಿಶ್ವಾದ್ಯಂತ ಜನರು ಪ್ಯಾಲೆಸ್ತೀನ್‌ಗಾಗಿ ದನಿ ಎತ್ತುತ್ತಿದ್ದಾರೆ. ಸರ್ಕಾರಗಳು ವಿಫಲವಾದಾಗ, ನ್ಯಾಯಕ್ಕಾಗಿ ಆಗ್ರಹವನ್ನು ಸಾಮಾನ್ಯ ನಾಗರಿಕರು ಮುನ್ನಡೆಸುತ್ತಾರೆ” ಎಂದು ಹೇಳಿದರು.

“ಫ್ರೀ ಪ್ಯಾಲೆಸ್ತೀನ್” ಘೋಷಣೆಗಳು ಆಜಾದ್ ಮೈದಾನದಾದ್ಯಂತ ಪ್ರತಿಧ್ವನಿಸಿದಂತೆ, ದಮನ, ಕಣ್ಗಾವಲು ಮತ್ತು ಬೆದರಿಕೆಯ ಹೊರತಾಗಿಯೂ, ಭಾರತದಲ್ಲಿ ಪ್ಯಾಲೆಸ್ತೀನ್ ಪರ ದನಿಗಳನ್ನು ಅಡಗಿಸಲು ಸಾಧ್ಯವಿಲ್ಲ ಎಂಬುದನ್ನು ಈ ಸಮಾವೇಶ ಸ್ಪಷ್ಟಪಡಿಸಿತು. ಕಾರ್ಯಕರ್ತ ಕಾಶಿಫ್ ಹೇಳಿದಂತೆ, ಈ ಸಂಘಟನೆಗಳು “ವಾತಾವರಣವನ್ನು ಬದಲಾಯಿಸಲು” ಮತ್ತು ಸಾರ್ವಜನಿಕ ಚರ್ಚೆಯನ್ನು ಮಾರ್ಪಡಿಸಲು ಸಾಧ್ಯವಾಗಿವೆ.

59 ಅಲೆಮಾರಿ ಸಮುದಾಯಗಳಿಂದ ಶೇ. 1ರ ಪ್ರತ್ಯೇಕ ಮೀಸಲಾತಿಗೆ ಆಗ್ರಹ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...