ಕೊರೊನಾ ಸಾಂಕ್ರಾಮಿಕ ಭಾರತದಲ್ಲಿಯೇ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅದರ ವಿರುದ್ಧ ಲಕ್ಷಾಂತರ ಜನ ಹೋರಾಡುತ್ತಿದ್ದಾರೆ. ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಅಂತಹವರ ಸಾಲಿಗೆ ಹೊಸ ಸೇರ್ಪಡೆಯಾಗಿದ್ದಾರೆ.
ಕೊರೊನಾ ರಾಜ್ಯದಲ್ಲಿ ಅತಿ ಹೆಚ್ಚಾಗಿ ವ್ಯಾಪಿಸುತ್ತಿದೆ. ಕೆಲವು ಡಾಕ್ಟರ್, ನರ್ಸ್ ಮತ್ತು ಪೊಲೀಸರು ಸಹ ಸೋಂಕಿಗೆ ಒಳಗಾಗಿದ್ದರು. ಹಲವರು ಕರ್ತವ್ಯಕ್ಕೆ ಹಾಜರಾಗಲು ಭಯಪಡುತ್ತಿದ್ದರು. ಇಂತಹ ಸಂಕಷ್ಟದ ಸಮಯದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿರುವವರಿಗೆ ಸ್ಫೂರ್ತಿ ತುಂಬಲು ಮೇಯರ್ ಪೆಡ್ನಕರ್ ಮಾಡಿದ್ದು ಇಷ್ಟೆ. ಹತಾಶೆ ಮತ್ತು ಅನಿಶ್ಚಿತತೆಯ ಸಮಯದಲ್ಲಿ, ಅವರು ತನ್ನ ಹಳೆಯ ನರ್ಸಿಂಗ್ ಸೂಟ್ ಅನ್ನು ಧರಿಸಿ ಆಸ್ಪತ್ರೆಗೆ ನಡೆದರು. ಅವರು ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಲು ಸಿದ್ಧರಾದರು.
ಇದು ಉಳಿದ ನರ್ಸ್ ಮತ್ತು ವೈದ್ಯರುಗಳಿಗೆ ಪ್ರೇರಣೆ ನೀಡಿತು. ಅವರೆಲ್ಲರೂ ದೃಢವಾಗಿ ಕೆಲಸ ಮಾಡಲು ತೀರ್ಮಾನಿಸಿದರು. ಈ ಮಾದರಿ ಎಲ್ಲೆಡೆ ಹಬ್ಬಿತು.
ಇತ್ತೀಚೆಗೆ, ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಈ ಕಥೆಯನ್ನು ಇನ್‌ಸ್ಟಾಗ್ರಾಮ್ ಹಂಚಿಕೊಂಡರು. ಆ ಮೂಲಕ ಅವರ ಕೆಲಸ ಮತ್ತು ಸಾರ್ವಜನಿಕ ಸೇವೆಯ ಬದ್ಧತೆಯನ್ನು ಅವರು ಶ್ಲಾಘಿಸಿದರು. “ಇಂದು ನಾವು ನಮ್ಮ ಮುಂಚೂಣಿಯ ಯೋಧರು, ವೈದ್ಯಕೀಯ ಸಿಬ್ಬಂದಿ, ಕೋವಿಡ್ ವಿರುದ್ಧ ಹೋರಾಡಲು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬ ಕಥೆಗಳನ್ನು ನಾವು ಇಲ್ಲಿ ಹೇಳುತ್ತಿದ್ದೇವೆ. ಅದೇ ರೀತಿ ನಾಯರ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೊಂದಿಗೆ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿರುವವರು ನಮ್ಮ ಮುಂಬೈನ ಮೇಯರ್ ಆಗಿದ್ದಾರೆ. ಅವರು ತಮ್ಮ ಹಳೆಯ ಉದ್ಯೋಗಕ್ಕೆ ಮರಳಿ ಈಗ ಗೊತ್ತುಪಡಿಸಿದ ಕೋವಿಡ್ ಆಸ್ಪತ್ರೆಯಲ್ಲಿ ಇಚ್ಛಾಶಕ್ತಿಯಿಂದ ಅಲ್ಲಿ ರಾತ್ರಿ ಪಾಳಿ ಕೆಲಸ ಮಾಡಲಿದ್ದಾರೆ” ಎಂದು ಬರೆದರು!
ಕೊರೊನಾ ವಿರುದ್ಧ ಹೋರಾಡಲು ಸಿಬ್ಬಂದಿಗಳ ಕೊರತೆಯಿದೆ ಎಂದು ಯಾರು ಹೇಳಿದರು? ನಮ್ಮ ಮೇಯರ್ ಬೆಳಗ್ಗಿನಿಂದ ರಾತ್ರಿಯವರೆಗೂ ಎಲ್ಲಾ ಆಸ್ಪತ್ರೆಗಳಿಗೂ, ಹಾಟ್‌ಸ್ಪಾಟ್‌ಗಳಿಗೂ ಭೇಟಿ ನೀಡಿ ವಿಚಾರಿಸುತ್ತಿದ್ದಾರೆ. ಇವರ ಸುರಕ್ಷೆ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಎಂದು ಆದಿತ್ಯ ಠಾಕ್ರೆ ಬರೆದುಕೊಂಡಿದ್ದಾರೆ.
“ನಮ್ಮ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ಅವರು ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರನ್ನು ಪ್ರೇರೇಪಿಸಲು ನಾನು ಅವರೊಂದಿಗೆ ನಿಲ್ಲಲು ಬಯಸುತ್ತೇನೆ ”
– ಕಿಶೋರಿ ಪೆಡ್ನೇಕರ್
ವರದಿಗಳ ಪ್ರಕಾರ, ಮೇಯರ್ ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಗೆ ಭೇಟಿ ನೀಡಿ ದಾದಿಯರೊಂದಿಗೆ ಸಂವಹನ ನಡೆಸಿದರು. ಅವರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು, ಕೆಚ್ಚೆದೆಯ ಹೋರಾಟವನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಿದರು, ಉನ್ನತ ಸಾಧಕರಿಗೆ ಮೇಯರ್ ಕಪ್ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಲು ಮುಂದಾದ 200 ತಬ್ಲೀಘಿ ಜಮಾಅತ್ ಸದಸ್ಯರು


