ಮಹಾರಾಷ್ಟ್ರದ ವಿಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ್ ಅಘಾಡಿಯಿಂದ ಹೊರಬರದೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವುತ್ ಶನಿವಾರ ಸುಳಿವು ನೀಡಿದ್ದಾರೆ. ಸಂಪದ್ಭರಿತ ಬಿಎಂಸಿಯನ್ನು ಅವಿಭಜಿತ ಶಿವಸೇನೆಯು 1997 ರಿಂದ 2022 ರವರೆಗೆ ಸತತ 25 ವರ್ಷಗಳ ಕಾಲ ಆಡಳಿತ ನಡೆಸಿದೆ. ಮುಂಬೈ ಪಾಲಿಕೆ
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜತ್ ರಾವತ್, “ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಗಿಂತ ಹೆಚ್ಚಿನ ಆಕಾಂಕ್ಷಿಗಳು ಇರುವುದರಿಂದ ಪಕ್ಷದ ಕಾರ್ಯಕರ್ತರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂಬುವುದು ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಬಿಎಂಸಿ ಚುನಾವಣೆಗೆ ಉದ್ಧವ್ ಠಾಕ್ರೆ ಮತ್ತು ಇತರ ಪಕ್ಷದ ನಾಯಕರ ನಡುವೆ (ಏಕಾಂಗಿಗೆ ಸ್ಪರ್ಧಿಸಬೇಕೆ ಎಂಬುದರ ಕುರಿತು) ಮಾತುಕತೆ ನಡೆಯುತ್ತಿದೆ. ಕಾರ್ಯಕರ್ತರು ಪಕ್ಷವು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವಂತೆ ಬಯಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂಪದ್ಭರಿತ ಬಿಎಂಸಿಯನ್ನು ಅವಿಭಜಿತ ಶಿವಸೇನೆಯು 1997 ರಿಂದ 2022 ರವರೆಗೆ ಸತತ 25 ವರ್ಷಗಳ ಕಾಲ ಆಡಳಿತ ನಡೆಸಿದೆ. ಬಿಎಂಸಿಯ ಹಿಂದಿನ ಚುನಾಯಿತ ಪ್ರತಿನಿಧಿಗಳ ಅವಧಿಯು ಮಾರ್ಚ್ 2022 ರ ಆರಂಭದಲ್ಲಿ ಕೊನೆಗೊಂಡಿದೆ. ಸುಮಾರು ಮೂರು ವರ್ಷಗಳವರೆಗೆ ಅಲ್ಲಿ ಚುನಾವಣೆಗಳು ನಡೆದಿಲ್ಲ. ಮುಂಬೈ ಪಾಲಿಕೆ
“ಬಿಜೆಪಿಯೊಂದಿಗೆ ಅವಿಭಜಿತ ಶಿವಸೇನೆ ಮೈತ್ರಿಯಲ್ಲಿದ್ದಾಗ ಕೂಡಾ ನಾವು ಬಿಎಂಸಿ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದೇವೆ.” ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮುಂಬೈನಲ್ಲಿ ಪಕ್ಷದ ಶಕ್ತಿ ಬಲಷ್ಠವಾಗಿದೆ ಎಂದು ರಾವತ್ ಪ್ರತಿಪಾದಿಸಿದ್ದಾರೆ. “ನಮಗೆ ಮುಂಬೈನಲ್ಲಿ ಸ್ಪರ್ಧಿಸಲು ಹೆಚ್ಚಿನ ಸ್ಥಾನಗಳು ಬಂದಿದ್ದರೆ (ವಿಧಾನಸಭಾ ಚುನಾವಣೆಯ ಸಮಯದಲ್ಲಿ) ಮೈತ್ರಿಯು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿತ್ತು” ಎಂದು ಅವರು ಹೇಳಿದ್ದಾರೆ. ಮುಂಬೈಯನ್ನು ಗೆಲ್ಲುವುದು ಅಗತ್ಯವಾಗಿದ್ದು, ಇಲ್ಲದಿದ್ದರೆ ನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ಮುಂಬೈನಲ್ಲಿ ಶಿವಸೇನೆ 24 ಸ್ಥಾನಗಳಲ್ಲಿ ಸ್ಪರ್ಧಿಸಿ 10 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 10 ಸ್ಥಾನಗಳಿಗೆ ಅಭ್ಯರ್ಥಿಗಳಲ್ಲಿ ಸ್ಪರ್ಧಿಸಿ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು ಹಾಗೂ NCP (SP) ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಸ್ಥಾನಗೆಲ್ಲಲು ವಿಫಲವಾಗಿದೆ.
ಕಳೆದ ವಾರ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆಡಳಿತಾರೂಢ ಮಹಾಯುತಿಯ ಭಾಗವಾಗಿ ಮುಂದಿನ ವರ್ಷ ನಡೆಯಲಿರುವ ಬಿಎಂಸಿ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಹೇಳಿದ್ದರು. “ಬಿಎಂಸಿ ಚುನಾವಣೆಯಲ್ಲಿ ಎಲ್ಲಾ 227 ವಾರ್ಡ್‌ಗಳಲ್ಲಿ ಮಹಾಯುತಿ (ಮೈತ್ರಿಕೂಟ) ಆಗಿ ಸ್ಪರ್ಧಿಸಲಾಗುವುದು” ಎಂದು ಶಿವಸೇನೆಯ ಮುಖ್ಯಸ್ಥ ಶಿಂಧೆ ಹೇಳಿದ್ದಾರೆ. ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ.
ಇದನ್ನೂ ಓದಿ: ಎಂಬಿಬಿಎಸ್ ಟ್ರೈನಿಗಳಿಗೆ ಲೈಂಗಿಕ ಕಿರುಕುಳ: ವೈದ್ಯಕೀಯ ಕಾಲೇಜು ಪ್ರಾಧ್ಯಾಪಕನಿಗೆ ಮೂರು ವರ್ಷ ಜೈಲು ಶಿಕ್ಷೆ
ಎಂಬಿಬಿಎಸ್ ಟ್ರೈನಿಗಳಿಗೆ ಲೈಂಗಿಕ ಕಿರುಕುಳ: ವೈದ್ಯಕೀಯ ಕಾಲೇಜು ಪ್ರಾಧ್ಯಾಪಕನಿಗೆ ಮೂರು ವರ್ಷ ಜೈಲು ಶಿಕ್ಷೆ


