ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಮಂಗಳೂರಿನಲ್ಲಿ ಬಿಜೆಪಿ ಬೃಹತ್ ಜಯ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಧೂಳಿಪಟವಾದರೆ ಗೆದ್ದ ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಸಮಾಧಾನಕರ ಗೆಲುವು ಸಿಕ್ಕಿದ್ದು ಆಡಳಿತದ ಚುಕ್ಕಾಣಿ ಹಿಡಿಯಲು ಒಂದು ಸ್ಥಾನವಷ್ಟೇ ಕೊರತೆ ಎದುರಿಸುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಲ್ಲಿ ಬಿಜೆಪಿ 44 ರಲ್ಲಿ ಗೆಲುವು ಸಾಧಿಸುವ ಮೂಲಕ ಭಾರೀ ಬಹುಮತ ಪಡೆದಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು 14 ವಾರ್ಡ್‌ಗಳಿಗೆ ಕುಸಿದಿದೆ. ಇನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ 02 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.
ಇನ್ನು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 22, ಜೆಡಿಎಸ್ 01 ಪಕ್ಷೇತರರು 05 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಒಟ್ಟು 45 ವಾರ್ಡ್‌ಗಳಿದ್ದು ಅಧಿಕಾರ ರಚಿಸಲು ಮಾಜಿಕ್ ನಂಬರ್ 23 ಆಗಿದೆ. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಅಧಿಕಾರಕ್ಕೆ ಒಂದು ಸ್ಥಾನವಷ್ಟೇ ಕಡಿಮೆ ಹೊಂದಿದೆ.
ಕೋಲಾರ ನಗರಸಭೆಯು ಅತಂತ್ರವಾಗಿದೆ. ಕೋಲಾರ ನಗರಸಭೆಯ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್ -12,
ಜೆಡಿಎಸ್ – 08, ಬಿಜೆಪಿ – 03 ಮತ್ತು ಪಕ್ಷೇತರರು 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಮ್ಯಾಜಿಕ್ ನಂಬರ್ 17 ಆಗಿದ್ದು ಯಾರು ಅಧಿಕಾರಕ್ಕೆ ಏರುತ್ತಾರೆ ಎಂದು ಕುತೂಹಲ ಹುಟ್ಟಿಸಿದೆ.


