Homeಮುಖಪುಟದೇಶದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚಾಗಿದೆ; ಆದರೆ ಚೌಕಿದಾರ ಕಾಣಿಸುತ್ತಿಲ್ಲ: ಸಿದ್ದರಾಮಯ್ಯ

ದೇಶದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚಾಗಿದೆ; ಆದರೆ ಚೌಕಿದಾರ ಕಾಣಿಸುತ್ತಿಲ್ಲ: ಸಿದ್ದರಾಮಯ್ಯ

ಯೋಗಿ ಆದಿತ್ಯನಾಥ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ 27 ಪ್ರಕರಣಗಳು ಇದ್ದವು. ಮುಖ್ಯಮಂತ್ರಿಯಾದ ಮೇಲೆ ಆ ಎಲ್ಲಾ ಪ್ರಕರಣಗಳನ್ನು ವಾಪಾಸು ಪಡೆಯುವಂತೆ ಮಾಡಿ, ಸಾತ್ವಿಕನಂತೆ ನಾಟಕ ಮಾಡುತ್ತಿದ್ದಾರೆ

- Advertisement -

ಇತ್ತೀಚೆಗೆ ನಡೆದ ಹತ್ರಾಸ್‌ ಕರಾಳ ಘಟನೆ ಮತ್ತು ಬಿಜೆಪಿ ಪ್ರೇರಿತ ಸಿಬಿಐ, ಐಟಿ, ಇಡಿ ದಾಳಿಗಳನ್ನು ದೂಷಿಸಿ, ದೇಶದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚಾಗುತ್ತಿವೆ. ನಾನು ಚೌಕಿದಾರ ಎಂದವರು ಈಗ ಎಲ್ಲಿದ್ದಾರೆ ಎಂದು ಬಿಜೆಪಿ ಮತ್ತು ನರೇಂದ್ರ ಮೊದಿ ಮತ್ತು ಆದಿತ್ಯನಾಥ್ ವಿರುದ್ಧ ವಗ್ದಾಳಿ ನಡೆಸಿ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

“ದೇಶದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ದಲಿತರಿಗೆ ರಕ್ಷಣೆ ಇಲ್ಲ. ನಿತ್ಯ ಸಾವಿರಾರು ಕೊಲೆ, ಅತ್ಯಾಚಾರ, ಶೋಷಣೆಯ ಪ್ರಕರಣಗಳು ದಾಖಲಾಗ್ತಿವೆ. ಇವರಲ್ಲಿ ಎಷ್ಟು ಜನರಿಗೆ ನ್ಯಾಯ ಸಿಕ್ಕಿದೆ? ನಾನು ಚೌಕಿದಾರ ಅಂತ ಹೇಳಿ ಕುಣಿದಾಡ್ತಿದ್ದವರೆಲ್ಲ ಈಗ ಎಲ್ಲಿದ್ದಾರೆ? ಇದೇನಾ ನರೇಂದ್ರ ಮೊದಿಯವರ ಚೌಕಿದಾರಿಕೆ? ಉತ್ತರ ಪ್ರದೇಶದಲ್ಲಿ ಹೆಣ್ಣೊಬ್ಬಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಆಕೆಯ ಕುಟುಂಬದವರಿಗೂ ಶವವನ್ನು ನೋಡಲು ಅವಕಾಶ ನೀಡದೆ ಮಧ್ಯರಾತ್ರಿ ಪೊಲೀಸರೇ ಶವಸಂಸ್ಕಾರ ಮಾಡಿದ್ದಾರೆ. ಸರ್ಕಾರ ಅತ್ಯಾಚಾರಿಗೆ ಶಿಕ್ಷೆ ಕೊಡಿಸುವುದು ಬಿಟ್ಟು, ನೆರವಿಗೆ ನಿಂತಿದೆ ಅಂದ್ರೆ ಯೋಗಿ ಆದಿತ್ಯನಾಥ್‌ರಂಥವರು ಕಾವಿ ಬಟ್ಟೆಗೆ ಕಳಂಕವಲ್ಲದೆ ಇನ್ನೇನು?” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸತ್ಯವನ್ನು ಮುಚ್ಚಿಡಬಹುದು, ಆದರೆ ನಾಶ ಮಾಡಲಾಗುವುದಿಲ್ಲ: ಸಿದ್ದರಾಮಯ್ಯ

ಇದನ್ನೂ ಓದಿ: ಡ್ರಗ್ಸ್ ದಂಧೆ: ಜಿಲ್ಲಾವಾರು ಮಾಹಿತಿ ಕೋರಿ ಗೃಹಸಚಿವರಿಗೆ ಪತ್ರ ಬರೆದ ಸಿದ್ಧರಾಮಯ್ಯ

“ಯೋಗಿ ಆದಿತ್ಯನಾಥ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ 27 ಪ್ರಕರಣಗಳು ಇದ್ದವು. ಮುಖ್ಯಮಂತ್ರಿಯಾದ ಮೇಲೆ ಆ ಎಲ್ಲಾ ಪ್ರಕರಣಗಳನ್ನು ವಾಪಾಸು ಪಡೆಯುವಂತೆ ಮಾಡಿ, ಸಾತ್ವಿಕನಂತೆ ನಾಟಕ ಮಾಡುತ್ತಿದ್ದಾರೆ. ಇಂಥವರ ರಾಜ್ಯದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಸಿಗಲು ಹೇಗೆ ಸಾಧ್ಯ? ಐಟಿ, ಇಡಿ, ಸಿಬಿಐ ಇಲಾಖೆಗಳು ತಮ್ಮ ಕರ್ತವ್ಯ ತಾವು ಮಾಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಚುನಾವಣೆಗಳು ಹತ್ತಿರ ಬಂದಾಗ ವಿರೋಧಿಗಳನ್ನು ಹತ್ತಿಕ್ಕಲು ಐಟಿ, ಇಡಿ, ಸಿಬಿಐ ಗಳನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡಿಸುವುದಕ್ಕಷ್ಟೇ ನಮ್ಮ ವಿರೋಧ. ಇಂತಹ ದಾಳಿ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದುಕೊಂಡಿದ್ದರೆ ಅದು ಬಿಜೆಪಿಯವರ ಭ್ರಮೆ” ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: 13 ಕ್ವಿಂಟಾಲ್‌ ಗಾಂಜಾ‌ ವಶ: ಆರೋಪಿ ಬಿಜೆಪಿ ಕಾರ್ಯಕರ್ತನೆಂದು ಕಾಂಗ್ರೆಸ್ ಆರೋಪ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial