Homeಕರ್ನಾಟಕಮುರುಘಾ ಶರಣರ ಪ್ರಕರಣ: ‘ಮಕ್ಕಳ ಮೇಲೆ ಸಂಭೋಗವಾಗಿಲ್ಲ’ ಎಂದಿರುವ ವೈದ್ಯಕೀಯ ವರದಿಯ ಅಸಲಿಯತ್ತೇನು?

ಮುರುಘಾ ಶರಣರ ಪ್ರಕರಣ: ‘ಮಕ್ಕಳ ಮೇಲೆ ಸಂಭೋಗವಾಗಿಲ್ಲ’ ಎಂದಿರುವ ವೈದ್ಯಕೀಯ ವರದಿಯ ಅಸಲಿಯತ್ತೇನು?

- Advertisement -
- Advertisement -

“ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿರುವ ಇಬ್ಬರು ಅಪ್ರಾಪ್ತ ಬಾಲಕಿಯರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಯಾವುದೇ ಸಂಭೋಗ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ” ಎಂದು ವರದಿಯಾಗಿದೆ.

ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 27ರಂದು ಮುರುಘಾ ಮಠಾಧೀಶರ ವಿರುದ್ಧ ದಾಖಲಾದ ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದರು. ಅದನ್ನು ಆಧರಿಸಿ ‘ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿದೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ, “ಒಬ್ಬ ಬಾಲಕಿಯನ್ನು ಆಗಸ್ಟ್ 28, 2022ರಂದು ಮತ್ತು ಇನ್ನೊಬ್ಬ ಬಾಲಕಿಯನ್ನು ಸೆಪ್ಟೆಂಬರ್ 29, 2022ರಂದು ಪರೀಕ್ಷಿಸಲಾಗಿದೆ.”

ಇಬ್ಬರು ಬಾಲಕಿಯರನ್ನು ಪರೀಕ್ಷಿಸಿದ ವೈದ್ಯಕೀಯ ಅಧಿಕಾರಿ, “ಬಾಲಕಿಯ ಕನ್ಯಾ ಪೊರೆ (hymen) ಹಾಗೆಯೇ ಇದೆ” ಎಂದು ತೀರ್ಮಾನಿಸಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಗೆ ಒಳಗಾಗುವ ಮೊದಲು ಬಾಲಕಿಯರು ಸಮಲೋಚಕರಿಗೆ, “ಸಂಭೋಗ ನಡೆದಿರುವುದಾಗಿ ಮಾಹಿತಿ ನೀಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ. ಆದರೆ ಕನ್ನಡದ ಕೆಲವು ಮಾಧ್ಯಮಗಳು ವರದಿ ಮಾಡುತ್ತಾ, “ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ, ಮರುಘಾ ಶರಣರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ” ಎಂದೆಲ್ಲ ಬಣ್ಣಿಸಿವೆ.

ಮರುಘಾ ಮಠಾಧೀಶರ ಪ್ರಕರಣ ಹೊರಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಯೂ ಒಂದು. ಈ ವರದಿಗಳ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಒಡನಾಡಿಯ ಕೆ.ವಿ.ಸ್ಟ್ಯಾನ್ಲಿ ಅವರು ಹೇಳಿದ್ದೇ ಬೇರೆ!

“ಇದು ತುಂಬಾ ಬಾಲಿಷವಾದ ಸಂಗತಿ. ಈ ವರದಿಯನ್ನು 2022ರ ಆಗಸ್ಟ್‌ನಲ್ಲಿಯೇ ಸ್ಥಳೀಯ ವೈದ್ಯರು ಸಲ್ಲಿಸಿದ್ದರು. ಇದು ಹೊಸದಾದ ವರದಿಯಲ್ಲ” ಎಂದು ಸ್ಪಷ್ಟಪಡಿಸಿದ ಅವರು, “ಪ್ರಕರಣಕ್ಕೆ ಸಂಬಂಧಿಸಿದಂತೆ ‌ಎಫ್ಎ‌ಸ್‌ಎಲ್‌ ವರದಿ ಹುಬ್ಬಳ್ಳಿಯಿಂದ ಇನ್ನೂ ಬಂದಿಲ್ಲ. ಸ್ಥಳೀಯ ವೈದ್ಯಾಧಿಕಾರಿಗಳ ವರದಿಗೆ ಯಾವುದೇ ಮಾನ್ಯತೆ ಇಲ್ಲ” ಎಂದರು.

“ಈ ರೀತಿಯ ವರದಿ ಹೊರಬಿದ್ದಿರುವ ಕಾರಣವನ್ನು ತಿಳಿದುಕೊಳ್ಳಬೇಕಾಗಿದೆ. ಪೋಕ್ಸೋ ಪ್ರಕರಣಗಳಲ್ಲಿ ಜಾಮೀನು ಸಿಗುವುದು ಕಷ್ಟ. ಆರೋಪಿಯನ್ನು ಅಪರಾಧಿ ಎಂದೇ ಪರಿಗಣಿಸಿ ನ್ಯಾಯಾಲಯ ಜೈಲಿಗೆ ಕಳಿಸಿರುತ್ತದೆ. ಮುರುಘಾ ಮಠಾಧೀಶರಿಗೆ ಜಾಮೀನು ದೊರಕಿಸಲು ಶತಾಯಗತಾಯ ಪ್ರಯತ್ನಗಳನ್ನು ಆರೋಪಿಗಳ ಪರವಾಗಿರುವವರು ಮಾಡುತ್ತಿದ್ದಾರೆ” ಎಂದು ವಿವರಿಸಿದರು.

“ಜಾಮೀನು ಸಿಗಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಸಂದೇಹಗಳನ್ನು ಸೃಷ್ಟಿಸುವುದಾಗಿದೆ. ಯಾವುದೇ ಸಂದೇಹಗಳಿಲ್ಲದಿದ್ದರೆ ನ್ಯಾಯಾಧೀಶರು ಜಾಮೀನು ನೀಡುವುದಿಲ್ಲ. ಮಠಾಧೀಶರ ಪರವಾಗಿ ಕೆಲವು ತಜ್ಞರು ಕೆಲಸ ಮಾಡುತ್ತಿದ್ದಾರೆ. ತಮ್ಮ ತಂತ್ರಗಾರಿಕೆಯನ್ನು ಅವರು ಮಾಡುತ್ತಲೇ ಇದ್ದಾರೆ. ಅದರ ಭಾಗವಾಗಿಯೇ ನಮ್ಮ ಮೇಲೆ ಸುಳ್ಳು ಪ್ರಕರಣ ಹಾಕಿದ್ದರು. ಗೊಂದಲ ಸೃಷ್ಟಿಸುವ ತಂತ್ರಗಾರಿಕೆ ಇದಾಗಿತ್ತು. ಈಗ ವೈದ್ಯಕೀಯ ವರದಿಯ ಮೂಲಕ ಗೊಂದಲವೊಂದನ್ನು ಹರಿಬಿಡಲಾಗಿದೆ” ಎಂದು ಅಭಿಪ್ರಾಯಪಟ್ಟರು.

“ಈಗ ಹರಿದಾಡಿರುವ ವರದಿ ಮಾನ್ಯತೆಯನ್ನು ಪಡೆದದ್ದಲ್ಲ. ಎಫ್ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ಬರಬೇಕಿದೆ. ಪೋಕ್ಸೋ ಕಾನೂನು, ವೈದ್ಯಕೀಯ ಪರೀಕ್ಷೆ ವರದಿಯನ್ನು ಪ್ರಮುಖವಾಗಿ ಪರಿಗಣಿಸಲ್ಲ. ಮಕ್ಕಳ ಹೇಳಿಕೆಯನ್ನಷ್ಟೇ ಪ್ರಮುಖವಾಗಿ ಪರಿಗಣಿಸುತ್ತದೆ. ವೈದ್ಯಕೀಯ ವರದಿ ಸೇರಿದಂತೆ ಉಳಿದೆಲ್ಲ ಸಾಕ್ಷಿಗಳು ಹೆಚ್ಚುವರಿ ಸಾಕ್ಷಿಯಾಗಿ ಉಳಿಯುತ್ತವೆ. ಇದರ ಜೊತೆಗೆ ಘನ ನ್ಯಾಯಾಲಯ ಕೂಡ ಮಾನವೀಯವಾದ ಒಳಗಣ್ಣಿನಿಂದ ಗಮನಿಸುತ್ತಿರುತ್ತದೆ ಎಂಬುದನ್ನು ನಮ್ಮ ಅನುಭವದಲ್ಲಿ ಕಂಡುಕೊಂಡಿದ್ದೇವೆ. ಆರೋಪಿ ಮುರುಘಾ ಶರಣರಿಗೆ ಹೃದಯಾಘಾತವಾಗಿದೆ ಎಂದು ಇದೇ ಜಿಲ್ಲಾ ಆರೋಗ್ಯಾಧಿಕಾರಿ ಆರಂಭದಲ್ಲಿ ಹೇಳಿದ್ದರು. ಹೇರ್‌ಲಿಫ್ಟ್‌ ಮಾಡದಿದ್ದರೆ ಶರಣರು ಬದುಕುಳಿಯುವುದಿಲ್ಲ ಎಂದೆಲ್ಲ ಹಬ್ಬಿಸಲಾಗಿತ್ತು. ಆದರೆ ಅವರು ಆರೋಗ್ಯವಾಗಿಯೇ ಇದ್ದರು. ನ್ಯಾಯಾಧೀಶರಾದ ಕೋಮಲಾ ಅವರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ, ‘ಏನೇ ಆಗಲಿ, ಮುರುಘಾ ಶರಣರನ್ನು ಕೋರ್ಟ್‌ಗೆ ಕರೆತನ್ನಿ’ ಎಂದು ಸೂಚಿಸಿದ್ದರು. ಮುರುಘಾ ಶರಣರ ಹೃದಯ ಚೆನ್ನಾಗಿಯೇ ಕೆಲಸ ಮಾಡುತ್ತಿತ್ತು. ವೈದ್ಯಕೀಯ ವರದಿಗಳು ತಿರುಚಲ್ಪಡುತ್ತವೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ” ಎಂದು ಹೇಳಿದರು.

“ವೈದ್ಯಕೀಯ ವ್ಯವಸ್ಥೆ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆರೋಪಿಗಳನ್ನು ರಕ್ಷಿಸಲು ಮಾಡಿದ ಪ್ರಯತ್ನಗಳನ್ನು ನಾವು ನೋಡಿದ್ದೇವೆ. ಈಗ ಹರಿದಾಡುತ್ತಿರುವ ವರದಿಯು ಮಾನ್ಯತೆಯನ್ನು ಪಡೆದುಕೊಂಡಿಲ್ಲ. ಸಂತ್ರಸ್ತ ಮಕ್ಕಳಿಗೆ ನ್ಯಾಯವನ್ನು ನಮ್ಮ ನ್ಯಾಯ ವ್ಯವಸ್ಥೆ ದೊರಕಿಸಿಕೊಡುತ್ತದೆ ಎಂಬ ಭರವಸೆ ನಮಗಿದೆ” ಎಂದರು.

“ಮಗುವಿನ hymen ಹಾಗೆ ಇರಬೇಕೆಂಬ ನಿಯಮವೇನೂ ಇಲ್ಲ. ಮಗುವಿನ ಗುಪ್ತಾಂಗವನ್ನು ಸ್ಪರ್ಶಿಸಿದರೂ ಅದು ಅತ್ಯಾಚಾರವಾಗುತ್ತದೆ. ಒಂದು ಮಗು ಅತ್ಯಾಚಾರಕ್ಕೆ ಒಳಗಾಗಿರಬೇಕು ಎಂದರೆ hymen ಇಲ್ಲವಾಗಿರಬೇಕು ಎಂದು ನಾವು ನಿರೀಕ್ಷಿಸಬೇಕಾ? ನ್ಯಾಯ ಕೊಡಿಸಬೇಕೆಂದರೆ ಮಗು ಕೊಲೆಯಾಗಿಬೇಕೆಂದು ನಿರೀಕ್ಷಿಸಬೇಕಾ?” ಎಂದು ಪ್ರಶ್ನಿಸಿದ ಅವರು, “ಸದ್ಯ ಮಗು ಬದುಕಿ ಬಂದಿದೆಯಲ್ಲ ಎಂದು ಯೋಚಿಸಬೇಕಿತ್ತಲ್ಲವೇ? ಮಗು ಹೀಗೆಯೇ ಗಾಯಗೊಂಡಿರಬೇಕು ಎಂದು ಭಾವಿಸುವುದು ಕ್ರೂರ ಸಮಾಜದ ಪ್ರತೀಕವಾಗುತ್ತದೆ. ಮಗುವಿನ ಘನತೆಗೆ ಸಂಬಂಧಿಸಿದಂತೆ ಈ ರೀತಿಯ ಮಾತುಕತೆಗಳು ನಡೆಯಬಾರದು. ಮಗುವಿನ ಹೇಳಿಕೆಯನ್ನು ಅವಮಾನಿಸುವ, ಅನುಮಾನಿಸುವ ಪ್ರವೃತ್ತಿ ಅಮಾನಯವೀಯವಾದದ್ದು. ಯಾರನ್ನೋ ರಕ್ಷಿಸುವುದಕ್ಕಾಗಿ ಅಮಾಯಕ ಮಕ್ಕಳನ್ನು ಅವಮಾನಿಸುವ, ಅನುಮಾನಿಸುವುದನ್ನು ಮಾಡಬಾರದು” ಎಂದು ಆಶಿಸಿದರು.

ಒಂದು ಪೋಕ್ಸೋ ಪ್ರಕರಣ ಅಷ್ಟೇ ಅಲ್ಲ

ಮುರುಘಾ ಮಠದಲ್ಲಿ ಕೆಲಸ ಮಾಡುವ ಸೇವಕಿಯೊಬ್ಬರು ಶಿವಮೂರ್ತಿ ಶರಣರ ವಿರುದ್ಧ ಎರಡನೇ ಪ್ರಕರಣವನ್ನು ದಾಖಲಿಸಿದ್ದಾರೆ. ಮಠಾಧೀಶರು ತಮ್ಮ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೊದಲ ಪ್ರಕರಣದಲ್ಲಿನ ಸಂತ್ರಸ್ತ ಬಾಲಕಿಯರಲ್ಲಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಪೋಕ್ಸೋ ಕಾಯ್ದೆ ಸೇರಿದಂತೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲೂ ಮುರುಘಾ ಮಠಾಧೀಶರ ವಿರುದ್ಧ ಪ್ರಕರಣ ದಾಖಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಇಂತಹ ಪ್ರಕರಣಗಳಲ್ಲಿ ಕನಿಷ್ಠ ಮೂರು ಸಂಸ್ಥೆಗಳಿಂದ ಪಾರದರ್ಶಕವಾಗಿ ಪರೀಕ್ಷೆಗೆ ಒಳಪಡಿಸಬೇಕು,ಅಲ್ಲದೆ ಪರೀಕ್ಷಿಸುವ ತಜ್ಞರು ಆ ಆರೋಪಿತನ ಜಾತಿ ಸಮುದಾಯದವನಾಗದೆ ,ಪೂರ್ವಾಗ್ರಹ ಪೀಡಿತನಾಗಿರದೇ ವಸ್ತುಸ್ಥಿತಿ ಎನಿದೆಯೋ ಅದನ್ನ ವರದಿ ಮಾಡತಕ್ಕದ್ದು .ಅದು ಈ ಪ್ರಕರಣದಲ್ಲಿ ಆಗಿದೆಯೇ ಎನ್ನುವುದು ಪ್ರಶ್ನಾರ್ಹ,ಮಠ ಮತ್ತು ಅದರ ಭಕ್ತವೃಂದ ಶಕ್ತಿಶಾಲಿ ಸಮುದಾಯ ಜೊತೆಗೆ ಅಧಿಕಾರರೂಡ ಮುಖ್ಯಮಂತ್ರಿ ಮತ್ತು ಬಹಳಷ್ಟು ಸಚಿವರು ಅದೇ ಸಮುದಾಯದವರೆ,ಎಂದಮೇಲೆ ಬಲಿಷ್ಠ ಸಮುದಾಯ ವರು ಅದೇ ಸಮುದಾಯದ ಆರೋಪಿತನ ಬಿಡುಗಡೆಗೆ ಇದು ಪ್ರಯತ್ನ ಅಲ್ಲ ಎಂದು ನಂಬುವುದು ಹೇಗೆ?

  2. ನಿಮ್ಮ ಅನಿಸಿಕೆ ಸರಿಯಾಗಿದೆ, ಇಂತಹ ವೈದ್ಯರು ಅವರ ಕುಲಕ್ಕೆ ಕಳಂಕ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...