Homeಕರ್ನಾಟಕಯಶವಂತಪುರ ರೈಲ್ವೆ ನಿಲ್ದಾಣ: ಕೊಳೆತ ಸ್ಥಿತಿಯಲ್ಲಿ ಯುವತಿಯ ಶವಪತ್ತೆ

ಯಶವಂತಪುರ ರೈಲ್ವೆ ನಿಲ್ದಾಣ: ಕೊಳೆತ ಸ್ಥಿತಿಯಲ್ಲಿ ಯುವತಿಯ ಶವಪತ್ತೆ

- Advertisement -
- Advertisement -

ಬೆಂಗಳೂರು ನಗರದ ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಇರಿಸಲಾಗಿದ್ದ ಕ್ಯಾನ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ.

ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ಇರಿಸಲಾಗಿದ್ದ ಬಾಕ್ಸ್‌ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಯುವತಿಯ ಮೃತ ದೇಹವನ್ನು ರೈಲ್ವೆ ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಬುಧವಾರ ಪತ್ತೆ ಮಾಡಿದ್ದಾರೆ. ಪೊಲೀಸರು, ವಿಧಿವಿಜ್ಞಾನ ತಜ್ಞರ ತಂಡ ರೈಲು ನಿಲ್ದಾಣ ತಲುಪಿರುವುದಾಗಿ ವರದಿಯಾಗಿದೆ.

ಬೆಂಗಳೂರು ವಿಭಾಗದ ರೈಲ್ವೇ ಅಧಿಕಾರಿ ಕುಸುಮಾ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದು, “ತನಿಖೆ ನಡೆಸಲಾಗುತ್ತಿದೆ” ಎಂದಿದ್ದಾರೆ. ಅಂದಾಜು 23 ವರ್ಷದ ಯುವತಿಯೊಬ್ಬರ ಶವ ಯಶವಂತಪುರ ರೈಲು ನಿಲ್ದಾಣದ ಗೂಡ್ಸ್ ಪ್ಲಾಟ್ ಫಾರ್ಮ್ ಒಂದರಲ್ಲಿ ಪತ್ತೆಯಾಗಿದ್ದು, ಪ್ಲಾಸ್ಟಿಕ್ ಕವರ್‌ನಲ್ಲಿ ಶವವನ್ನು ಇಟ್ಟಿದ್ದರು ಎನ್ನಲಾಗಿದೆ. ಶವ ಕೊಳೆತು ವಾಸನೆ ಬರುತ್ತಿದ್ದಂತೆ ರೈಲು ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಗಮನಿಸಿದ್ದರು.

ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಜಯಮ್ಮ ಎಂಬುವವರು ಶವವನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವದ ಕುತ್ತಿಗೆಯಲ್ಲಿ ಬಿಳಿ ಬಣ್ಣದ ದುಪ್ಪಟ್ಟದಿಂದ ಗಂಟು ಬಿಗಿದಿರುವುದು, ಶವ ಕೊಳೆಯಲು ಡ್ರಮ್‌ನಲ್ಲಿ ಕೆಮಿಕಲ್ ಸುರಿದಿರುವುದು ವರದಿಯಾಗಿದೆ.

ಘಟನೆ ಸಂಬಂಧ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಗುರುತು ಹಚ್ಚುವ ಕಾರ್ಯ ನಡೆಯುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...